ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮಹಾರಾಷ್ಟ್ರದ ಮೀನುಗಾರ

ಘೋಲ್ ಮೀನುಗಳನ್ನು 'ಚಿನ್ನದ ಹೃದಯವಿರುವ ಮೀನು' ಎಂದು ಕರೆಯಲಾಗುತ್ತದೆ. ಅವುಗಳ ಆಂತರಿಕ ಅಂಗಗಳ ಔಷಧೀಯ ಗುಣಗಳಿಂದಾಗಿ ಹೆಚ್ಚಿನ ಬೆಲೆ ಹೊಂದಿದೆ. ಘೋಲ್ ಮೀನಿನ ಚರ್ಮವು ಉತ್ತಮ ಗುಣಮಟ್ಟದ ಕೊಲಾಜನ್‌ನ ಉತ್ತಮ ಮೂಲವಾಗಿದ್ದು, ಇದರಿಂದ ಅನೇಕ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಚಿನ್ನದ ಹೃದಯವಿರುವ ಮೀನು

ಚಿನ್ನದ ಹೃದಯವಿರುವ ಮೀನು

  • Share this:
ನೀವು ಏನೇ ಮಾಡಿದರೂ ಕೆಲಸಗಳು ನಿಮ್ಮ ಪರವಾಗಿ ಹೋಗದ ದಿನಗಳಿವೆ. ಇನ್ನೊಂದೆಡೆ, ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಿ ಬದಲಾಗುವ ದಿನಗಳೂ ಇವೆ. ಅದೇ ರೀತಿ ಪವಾಡಗಳು ಕೆಲವೊಮ್ಮೆ ಸಂಭವಿಸುತ್ತವೆ ಎನ್ನುವುದಕ್ಕೆ ಮಹಾರಾಷ್ಟ್ರದ ಮುಂಬೈ ಬಳಿ ನಡೆದ ಈ ಘಟನೆಯೇ ಸಾಕ್ಷಿ. ಮುಂಗಾರಿನಿಂದಾಗಿ ಒಂದು ತಿಂಗಳ ಅವಧಿಯ ಮೀನುಗಾರಿಕಾ ನಿಷೇಧದ ನಂತರ ಮಹಾರಾಷ್ಟ್ರದ ಮೀನುಗಾರರೊಬ್ಬರು ಇತ್ತೀಚೆಗೆ ಮೀನು ಹಿಡಿಯಲು ಹೋದವರಿಗೆ ಅದೃಷ್ಟ ಖುಲಾಯಿಸಿದೆ. ಮಹಾರಾಷ್ಟ್ರದ ಪಾಲ್ಘರ್‌ಗೆ ಸೇರಿದ ಚಂದ್ರಕಾಂತ್ ತಾರೆ ಎಂಬುವರು ಸಮುದ್ರದಲ್ಲಿ ಇತ್ತೀಚೆಗೆ ನಡೆದ ನೌಕಾಯಾನದಲ್ಲಿ 157 ಘೋಲ್ ಮೀನುಗಳನ್ನು ಹಿಡಿದಿದ್ದಾರೆ. ಆ ಮೀನುಗಳಿಂದ ಅವರು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ಆಗಸ್ಟ್ ಅಂತ್ಯದಲ್ಲಿ ತನ್ನ ದೋಣಿಯನ್ನು ಸಮುದ್ರಕ್ಕೆ ತೆಗೆದುಕೊಂಡು ಹೋದಾಗ ತಾನು ವಾಪಸ್‌ ಬಂದ ಮೇಲೆ ಮಿಲಿಯನೇರ್‌ ಆಗುತ್ತೇನೆ ಎಂಬುವುದನ್ನು ಅವರು ಕನಿನಲ್ಲೂ ಊಹಿಸಿರಲಿಕ್ಕಿಲ್ಲ. ಅವರು ಹಿಡಿದ ಘೋಲ್‌ ಮೀನುಗಳಿಂದ  1.3 ಕೋಟಿ ರೂ. ಗೆ ಅಧಿಕ ಹಣ ನೀಡಿದ್ದಾರೆ ವ್ಯಾಪಾರಿಗಳು.

ಘೋಲ್ ಮೀನುಗಳನ್ನು 'ಚಿನ್ನದ ಹೃದಯವಿರುವ ಮೀನು' ಎಂದು ಕರೆಯಲಾಗುತ್ತದೆ. ಅವುಗಳ ಆಂತರಿಕ ಅಂಗಗಳ ಔಷಧೀಯ ಗುಣಗಳಿಂದಾಗಿ ಹೆಚ್ಚಿನ ಬೆಲೆ ಹೊಂದಿದೆ. ಘೋಲ್ ಮೀನಿನ ಚರ್ಮವು ಉತ್ತಮ ಗುಣಮಟ್ಟದ ಕೊಲಾಜನ್‌ನ ಉತ್ತಮ ಮೂಲವಾಗಿದ್ದು, ಇದರಿಂದ ಅನೇಕ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದನ್ನು ಪೋರ್ಸೈನ್ ಮತ್ತು ಗೋವಿನ ಜೆಲಾಟಿನ್‌ಗೆ ಉತ್ತಮ ಪರ್ಯಾಯವಾಗಿ ಪರಿಗಣಿಸಲಾಗಿದ್ದರೂ, ಅದರ ರೆಕ್ಕೆಗಳನ್ನು ಔಷಧೀಯ ಕಂಪನಿಗಳು ಟ್ಯೂರ್ ಸಾಲ್ಯುಬಲ್ ಹೊಲಿಗೆಗಳನ್ನು ತಯಾರಿಸಲು ಬಳಸುತ್ತವೆ.

ಚಂದ್ರಕಾಂತ್ ತಾರೆ, ತನ್ನ 10 ಸದಸ್ಯರ ಮೀನುಗಾರರ ತಂಡದೊಂದಿಗೆ ಸಮುದ್ರದಲ್ಲಿ ನೌಕಾಯಾನ ಮಾಡಿದ್ದರು. ಪಾಲ್ಘರ್‌ನಿಂದ ಸುಮಾರು 25 ನಾಟಿಕಲ್ ಮೈಲಿ ದೂರದಲ್ಲಿರುವ ವಧ್ವಾನ್ ತಲುಪಿದ ನಂತರ ಸಮುದ್ರ ನೀರಿನಲ್ಲಿ ಬಲೆ ಹಾಕಿದರು. ಅವರ ಆಶ್ಚರ್ಯಕ್ಕೆ, ತಕ್ಷಣವೇ ವಿವಿಧ ಗಾತ್ರದ ಘೋಲ್ ಮೀನುಗಳ ಗುಂಪನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಈ ರೀತಿ ಬಲೆಗೆ ಬಿದ್ದ ಮೀನುಗಳ ವಿಡಿಯೋ ಮಾಡಿ ಹತ್ತಿರದ ಮೀನುಗಾರಿಕಾ ಗ್ರಾಮಗಳಲ್ಲಿ ಶೇರ್‌ ಮಾಡಲಾಗಿತ್ತು.

ಇದನ್ನೂ ಓದಿ: Raayan Raj Sarja: ಹಿಂದೂ-ಕ್ರೈಸ್ತ್ರ ಸಂಪ್ರದಾಯದಂತೆ ನಡೆಯಿತು ಚಿರು ಸರ್ಜಾ ಮಗನ ನಾಮಕರಣ: ಅರ್ಜುನ್ ಸರ್ಜಾ ಕುಟುಂಬ ಗೈರು

ಆಗಸ್ಟ್‌ 28ರಂದು ತಾರೆ ಮುರ್ಭೆಗೆ ಆಗಮಿಸುವ ವೇಳೆಗೆ, ವ್ಯಾಪಾರಿಗಳ ತಂಡವು ವಿಡಿಯೋ ನೋಡಿ ಆಗಲೇ ಮೀನುಗಳ ಹರಾಜಿಗೆ ಅಣಿಯಾಗಿತ್ತು. ಪ್ರತಿ ಮೀನಿಗೆ ಸುಮಾರು 85,000 ರೂ. ನಂತೆ ಮೀನುಗಳ ಮೂತ್ರಕೋಶ ಮತ್ತು ಒಳ ಅಂಗಗಳು 1.33 ಕೋಟಿ ರೂ. ಗಳಿಗೆ ಹರಾಜಿನಲ್ಲಿ ಮಾರಾಟವಾಗಿದ್ದು, ನಂತರ ಹರಾಜು ಕೊನೆಗೊಂಡಿದೆ.

ರಾತ್ರೋರಾತ್ರಿ ಚಂದ್ರಕಾಂತ್ ತಾರೆ ಅದೃಷ್ಟ ಬದಲಾದ ಹಿನ್ನೆಲೆ ಅವರು ಚರ್ಚೆಯ ವಿಷಯವಾಗಿದ್ದಾರೆ. ಮತ್ತು ಅವರೀಗ ಸ್ಥಳೀಯವಾಗಿ ಯಾವ ಸೆಲೆಬ್ರಿಟಿಗಿಂತಲೂ ಕಡಿಮೆ ಇಲ್ಲ. ತಾನು ಹಿಡಿದ ಮೀನುಗಳು ಖಂಡಿತವಾಗಿಯೂ ತಾನು ಎದುರಿಸುತ್ತಿರುವ ಎಲ್ಲ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಮೀನುಗಾರ ಹೇಳಿದ್ದಾರೆ.

ಇದನ್ನೂ ಓದಿ: Sidharth Shukla Funeral: ಇಂದು ನಡೆಯಲಿದೆ ನಟ ಸಿದ್ಧಾರ್ಥ್​ ಶುಕ್ಲಾ ಅಂತ್ಯ ಸಂಸ್ಕಾರ

ಘೋಲ್‌ ಮೀನಿನ ಮತ್ತಷ್ಟು ವಿಶೇಷತೆ ಏನು ಗೊತ್ತೆ..?

ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದು ಎಂದು ಘೋಲ್‌ ಮೀನನ್ನು ಪರಿಗಣಿಸಲಾಗಿದೆ. ಇದು ಮುಖ್ಯವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಂಡುಬರುತ್ತದೆ. ಇದು ಹಲವಾರು ಔಷಧೀಯ ಮೌಲ್ಯಗಳನ್ನು ಹೊಂದಿದೆ. ಘೋಲ್ ಮೀನಿನ ಭಾಗಗಳನ್ನು ಔಷಧಿಗಳು ಮತ್ತು ಇತರ ಬೆಲೆಬಾಳುವ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಘೋಲ್ ಮೀನುಸವಿಯಾದ ಪದಾರ್ಥವೂ ಆಗಿದ್ದು, ವಿವಿಧ ದೇಶಗಳಲ್ಲಿ ಹೆಚ್ಚು ಮೌಲ್ಯಯುತವಾಗಿದೆ. ಗೋಲ್ ಮೀನಿನ ಹೊಟ್ಟೆಯಲ್ಲಿ ಒಂದು ಚೀಲವಿದೆ, ಇದಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದಕ್ಕಾಗಿಯೇ ಈ ಮೀನನ್ನು "ಚಿನ್ನದ ಹೃದಯವಿರುವ ಮೀನು" ಎಂದೂ ಕರೆಯಲಾಗುತ್ತದೆ.
Published by:Anitha E
First published: