ಭಾರೀ ಮಳೆಯಿಂದ ಕೆರೆಯಂತಾದ ಪಾಟ್ನಾ, ICU ನಲ್ಲೂ ಮೀನುಗಳ ಈಜಾಟ!


Updated:July 30, 2018, 9:01 AM IST
ಭಾರೀ ಮಳೆಯಿಂದ ಕೆರೆಯಂತಾದ ಪಾಟ್ನಾ, ICU ನಲ್ಲೂ ಮೀನುಗಳ ಈಜಾಟ!

Updated: July 30, 2018, 9:01 AM IST
ನ್ಯೂಸ್​ 18 ಕನ್ನಡ

ಪಾಟ್ನಾ(ಜು.30): ಪಾಟ್ನಾದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ಮನೆ ನೀರು ಮನೆಗಳಿಗೆ ನುಗ್ಗಿದ್ದು, ಆಸ್ಪತ್ರೆಗಳೂ ಇದರಿಂದ ಹೊರತಾಗಿಲ್ಲ. ಇಲ್ಲಿನ ನಳಂದಾ ಮೆಡಿಕಲ್​ ಕಾಲೇಜ್​ ಹಾಸ್ಪಿಟಲ್​ನ ಐಸಿಯುನಲ್ಲಿ ನೀರು ತುಂಬಿದ್ದು, ಮೀನುಗಳು ಈಜಾಡುತ್ತಿರುವುದು ಕಂಡು ಬಂದಿದೆ.

ಮಳೆ ನೀರಿನ ಪ್ರಮಾಣ ಹೆಚಷ್ಚಾಗುತ್ತಿರುವುದರಿಂದ ಜನರೂ ಸಮಸ್ಯೆ ಎದುರಿಸುವಂತಅಗಿದೆ. ರೋಗಿಗಳು ಹಾಗೂ ಕುಟುಂಬಸ್ಥರು ಈ ನೀರಿನಲ್ಲೇ ಓಡಾಡಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಹಾರದ ಎರಡನೇ ದೊಡ್ಡ ಆಸ್ಪತ್ರೆಯಾಗಿರುವ ನಳಂದಾ ಮೆಡಿಕಲ್​ ಕಾಲೇಜು ಮಳೆ ನೀರಿನೆದುರು ಅಸಹಾಯಕ ಪರಿಸ್ಥಿತಿಯಲ್ಲಿರುವಂತೆ ಕಂಡು ಬರುತ್ತಿದೆ. ವಾರ್ಡ್​ಗಳಲ್ಲಿರುವ ಬೆಡ್​ಗಳ ಮೇಲೆ ರೋಗಿಗಳು ಮಲಗಿದ್ದರೆ ನೆಲದ ಮೇಲೆ ನೀರು ತುಂಬಿದ್ದು, ಹುಳಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡಿವೆ.

ಸರೋವರದಂತಾಗಿರುವ ಐಸಿಯುನಲ್ಲಿ ಮೀನುಗಳು ಈಜಾಡುತ್ತಿವೆ. ಇತ್ತ ರೋಗಿಗಳಿಗೆ ಹಾವು ಹಾಗೂ ಚೇಳುಗಳು ಬರುತ್ತವೆ ಎಂಬ ಭಯ ಆವರಿಸಿದೆ. ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ ನರ್ಸ್​ಗಳು ಕೂಡಾ ನೀರಿನಲ್ಲೇ ನಿಂತು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಬೆಳಗ್ಗೆ ಒಂದು ಬಾರಿ ರೌಂಡ್ಸ್​ ಹಾಕಿ ಹೋಗುವ ವೈದ್ಯರು ಮತ್ತೆ ಕಾಣ ಸಿಗುವುದಿಲ್ಲ. ಹಲವಾರು ರೋಗಿಗಳು ಇನ್ಫೆಕ್ಷನ್​ ಆಗುವ ಭೀತಿಯಿಂದ ಮನೆಗೆ ತೆರಳಿದ್ದೃಆಎ. ಹೀಗಿದ್ದರೂ ಆಸ್ಪತ್ರೆ ಆಡಳಿಉತ ಮಂಡಳಿ ಮಾತ್ರ ನೀರನ್ನು ಹೊರ ಹಾಕುವ ಯಾವ ಕಾರ್ಯವನ್ನೂ ಮಾಡಿಲ್ಲ.

ಪಾಟ್ನಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಎಲ್ಲಾ ಕಡೆ ನೀರು ತುಂಬಿದ್ದು, ತಗ್ಗು ಪ್ರದೇಶಗಳಲ್ಲಿ ಸೊಂಟದವರೆಗೂ ನೀರು ತುಂಬಿದೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...