ಉತ್ತರ ಪ್ರದೇಶ ವಕೀಲ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯನ್ನು ನ್ಯಾಯಾಲಯ ಆವರಣದಲ್ಲಿ ಗುಂಡಿಕ್ಕಿ ಹತ್ಯೆ

ಆಗ್ರಾ ಜಿಲ್ಲೆಯ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ನಡೆದ ಚುನಾವಣೆಯಲ್ಲಿ ದರ್ವೇಶ್​ ಸಿಂಗ್​​​ ಬಾರ್​ ಕೌನ್ಸಿಲ್​ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Seema.R | news18
Updated:June 12, 2019, 6:12 PM IST
ಉತ್ತರ ಪ್ರದೇಶ ವಕೀಲ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯನ್ನು ನ್ಯಾಯಾಲಯ ಆವರಣದಲ್ಲಿ ಗುಂಡಿಕ್ಕಿ ಹತ್ಯೆ
ದರ್ವೇಶ್​ ಸಿಂಗ್​
  • News18
  • Last Updated: June 12, 2019, 6:12 PM IST
  • Share this:
ಆಗ್ರಾ (ಜೂ.12): ಉತ್ತರ ಪ್ರದೇಶದ ವಕೀಲ ಸಂಘದ(ಬಾರ್​ ಕೌನ್ಸಿಲ್)​ ಮೊದಲ ಮಹಿಳಾ​ ಅಧ್ಯಕ್ಷೆ ಧರ್ವೇಶ್​ ಸಿಂಗ್​ ಎಂಬುವರನ್ನು ಸಹೋದ್ಯೋಗಿಯೇ ಗುಂಡಿಟ್ಟು ಹತ್ಯೆ ಮಾಡಿ, ನಂತರ ತಾನು ಗುಂಡು ಹಾರಿಸಿಕೊಂಡ ಘಟನೆ ನಡೆದಿದೆ.

ಆಗ್ರಾ ಜಿಲ್ಲೆಯ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ನಡೆದ ವಕೀಲ ಸಂಘದ ಚುನಾವಣೆಯಲ್ಲಿ ಧರ್ವೇಶ್​ ಸಿಂಗ್​​​ ಆಯ್ಕೆಯಾಗಿ, ಸಂಘದ  ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.

ಮನಿಶ್​​ ಶರ್ಮಾ ಎಂಬಾತ ಈ ಕೃತ್ಯ ಎಸಗಿದ್ದು, ಘಟನೆ ಬಳಿಕ ಈತ ಕೂಡ ಪರವಾನಗಿ ಹೊಂದಿರುವ​ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾನೆ. ಈತನ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಕೀಲ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಧರ್ವೇಶ್​ ಸಿಂಗ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಅವರ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿ, ಕೊನೆಗೆ ತಾನು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಧರ್ವೇಶ್ ಸಿಂಗ್​ ​ ಸಾವನ್ನಪ್ಪಿದ್ದು, ಮನಿಶ್​​ ಶರ್ಮಾರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಇದನ್ನು ಓದಿ: ಚಂದ್ರಯಾನ-2 ಉಡಾವಣೆಗೆ ಸಜ್ಜಾದ ಇಸ್ರೋ; ಜುಲೈ15ರಂದು ಆಗಸಕ್ಕೆ ಹಾರಲಿರುವ ನೌಕೆ

ಚುನಾವಣೆ ಬಳಿಕ ಅವರು ಮೊದಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಮಧ್ಯೆ ಎದ್ದು ನಿಂತ ಶರ್ಮಾ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಆತನನ್ನು ಹಿಡಿಯುವ ಮುನ್ನವೇ ಆತ ಕೂಡ ತಾನೇ ಗುಂಡಿಟ್ಟುಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading