10ನೇ ವಯಸ್ಸಿನಲ್ಲಿ ಚಾಪರ್ ಹಾರಾಟ ಕಂಡು 24ನೇ ವಯಸ್ಸಿಗೆ ನೌಕಾಪಡೆಯ ಪೈಲಟ್ ಆದ ದೇಶದ ಮೊದಲ ಮಹಿಳೆ

ಕಾಕ್​ಪಿಟ್​​ನಲ್ಲಿ ಕೆಲಸ ಮಾಡುತ್ತಿರುವ ಮೊದಲ ಮಹಿಳೆ ​ ಶಿವಾಂಗಿ. ಕೊಚ್ಚಿ ನೌಕಾ ನೆಲೆಯಲ್ಲಿ ಕಾರ್ಯಾಚರಣೆಯ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತೀಯ ನೌಕಾಪಡೆಯ ಡಾರ್ನಿಯರ್​​​ ಕಣ್ಗಾವಲು ವಿಮಾನವನ್ನು ಹಾರಿಸಲಿದ್ಧಾರೆ.

Latha CG | news18-kannada
Updated:December 3, 2019, 7:30 AM IST
10ನೇ ವಯಸ್ಸಿನಲ್ಲಿ ಚಾಪರ್ ಹಾರಾಟ ಕಂಡು 24ನೇ ವಯಸ್ಸಿಗೆ ನೌಕಾಪಡೆಯ ಪೈಲಟ್ ಆದ ದೇಶದ ಮೊದಲ ಮಹಿಳೆ
ಸಬ್​ ಲೆಫ್ಟಿನೆಂಟ್​ ಶಿವಾಂಗಿ
  • Share this:
ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್​ ಆಗಿ ಸಬ್​ ಲೆಫ್ಟಿನೆಂಟ್​​ ಶಿವಾಂಗಿ ಸ್ವರೂಪ್ (24)​ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. "ಈ ದಿನಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದೆ. ಇನ್ನೆರಡು ದಿನಗಳಲ್ಲಿ ಅಂದರೆ ಡಿ.4ರಂದು ನೌಕಾಪಡೆಯ ಕಾರ್ಯಾಚರಣೆ ತರಬೇತಿ ಪೂರ್ಣಗೊಳ್ಳಲಿದೆ. ನನಗೆ ಇದಕ್ಕಿಂತ ಉತ್ತಮ ಕೆಲಸ ಇನ್ನೊಂದಿಲ್ಲ. ನಾನು ಕಂಡಿದ್ದ ಕನಸು ಇಂದು ನನಸಾಗಿದೆ," ಎಂದು ಶಿವಾಂಗಿ ಹರ್ಷ ವ್ಯಕ್ತಪಡಿಸಿದ್ಧಾರೆ.

ಶಿವಾಂಗಿ ತಮ್ಮ 10ನೇ ವಯಸ್ಸಿನಲ್ಲಿದ್ಧಾಗಿಂದಲೂ ಮಹಿಳಾ ಪೈಲಟ್​ ಆಗುವ ಕನಸು ಕಂಡಿದ್ದರು. ನಾನು ಚಿಕ್ಕವಳಿದ್ಧಾಗ ಶಾಸಕರೊಬ್ಬರು ಚಾಪರ್​​ನಲ್ಲಿ ಬರುವುದನ್ನು ನೋಡಿದ್ದೆ. ಹಾಗೆಯೇ ಹೆಲಿಕಾಪ್ಟರ್​ ಆಪರೇಟ್​ ಮಾಡುತ್ತಿದ್ದ ಪೈಲಟ್​ನ್ನು ನೋಡಿದ್ದೆ. ಅಂದಿನಿಂದ ನಾನು  ಕೂಡ ಪೈಲಟ್​ ಆಗಬೇಕೆಂಬ ಕನಸು ಕಂಡಿದ್ದೆ ಎಂದು ಶಿವಾಂಗಿ ತಮ್ಮ ಮಾತು ಹಂಚಿಕೊಂಡರು.

ಮಾಜಿ ಸಿಎಂ ದೇವರಾಜ್ ಅರಸು ಮಗಳ ಸೀರೆಯನ್ನು ಎಳೆಸಿದ್ದ ವ್ಯಕ್ತಿ ವಿಶ್ವನಾಥ್: ಸಾ.ರಾ.ಮಹೇಶ್​ ಗಂಭೀರ ಆರೋಪ

ನಾನು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೆ, ಕೊನೆಗೂ ಆ ಕ್ಷಣ ಬಂದಿದೆ. ನಾನು ಕಂಡಿದ್ದ ಕನಸು ನಿಜವಾಗಿದೆ. ನನಗೆ ನಿಜಕ್ಕೂ ಬಹಳ ಸಂತಸವಾಗುತ್ತಿದೆ. ಹೆಮ್ಮೆಯಾಗುತ್ತಿದೆ. ಎಲ್ಲಾ ಸಿಬ್ಬಂದಿಗಳು ನನಗೆ ಸಹಾಯ ಮಾಡಿ, ಪ್ರೋತ್ಸಾಹ ನೀಡಿದ್ದಾರೆ. ನಾನು ಸದ್ಯ ಮೂರನೇ ಹಂತದ ತರಬೇತಿ ಮುಗಿಸಬೇಕಿದೆ ಎಂದರು.

ಶಿವಾಂಗಿ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್​ ಆಗಲು ಪದವಿ ಪಡೆಯಲಿದ್ದಾರೆ. ಇವರು ಬಿಹಾರದ ಮುಜಾಫರ್​​ನಗರದವರು. ಶಿವಾಂಗಿ ತಮ್ಮ ಶಾಲಾ ತರಬೇತಿಯನ್ನುಮುಜಾಫರ್​ನಗರದ ಡಿಎವಿ ಪಬ್ಲಿಕ್​ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.

ಕಾಕ್​ಪಿಟ್​​ನಲ್ಲಿ ಕೆಲಸ ಮಾಡುತ್ತಿರುವ ಮೊದಲ ಮಹಿಳೆ ​ ಶಿವಾಂಗಿ. ಕೊಚ್ಚಿ ನೌಕಾ ನೆಲೆಯಲ್ಲಿ ಕಾರ್ಯಾಚರಣೆಯ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತೀಯ ನೌಕಾಪಡೆಯ ಡಾರ್ನಿಯರ್​​​ ಕಣ್ಗಾವಲು ವಿಮಾನವನ್ನು ಹಾರಿಸಲಿದ್ಧಾರೆ.

ಸಾಮಾನ್ಯರಂತೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ, ತಮ್ಮ ಲಗ್ಗೇಜನ್ನು ತಾವೇ ಹೊತ್ತ ಸ್ವೀಡನ್​​​ನ ರಾಜ, ರಾಣಿಹಕ್ಕಿಯಂತೆ ಹಾರಾಡುವುದು ಇದು ಒಂದು ವಿಭಿನ್ನ ಅನುಭವ ನೀಡುತ್ತದೆ. ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಯಿತು. 5 ವರ್ಷಗಳ ಹಿಂದೆ ಈ ಸಾಧನೆ ಸಾಧ್ಯವಾಗುತ್ತದೆ ಎಂದು ಯಾರೊಬ್ಬರು ಅಂದುಕೊಂಡಿರಲಿಲ್ಲ. ಆದರೆ ಮಹಿಳೆಯರು ಯುದ್ಧ ವಿಮಾನಗಳಲ್ಲಿ ಪೈಲಟ್​ ಆಗಿ ಹಾಗೂ ಸಬ್​ಮೆರಿನ್​​​ನಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬ ನನಗೆ ಭರವಸೆ ಇತ್ತು ಎಂದು ಹೇಳಿದರು.

First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading