• Home
  • »
  • News
  • »
  • national-international
  • »
  • Cow Dung Tractor: ಸಗಣಿಯಿಂದ ಓಡುತ್ತೆ ಟ್ರ್ಯಾಕ್ಟರ್‌! ಬ್ರಿಟಿಷ್‌ ಕಂಪನಿಯಿಂದ ಅಭೂತಪೂರ್ವ ಸಂಶೋಧನೆ

Cow Dung Tractor: ಸಗಣಿಯಿಂದ ಓಡುತ್ತೆ ಟ್ರ್ಯಾಕ್ಟರ್‌! ಬ್ರಿಟಿಷ್‌ ಕಂಪನಿಯಿಂದ ಅಭೂತಪೂರ್ವ ಸಂಶೋಧನೆ

ಟ್ರ್ಯಾಕ್ಟರ್ (ಸಾಂದರ್ಭಿಕ ಚಿತ್ರ)

ಟ್ರ್ಯಾಕ್ಟರ್ (ಸಾಂದರ್ಭಿಕ ಚಿತ್ರ)

ಈ ಟ್ರ್ಯಾಕ್ಟರ್‌ಗೆ ಬೇಕಾಗುವ ಇಂಧನವನ್ನು ಹಸುವಿನ ಸಗಣಿಯನ್ನು ಮಿಥೇನ್‌ ಆಗಿ ಪರಿವರ್ತಿಸಿ ಸುಲಭವಾಗಿ ಉತ್ಪಾದಿಸಬಹುದು ಎನ್ನುತ್ತದೆ ಕಂಪನಿ. 

  • News18 Kannada
  • Last Updated :
  • New Delhi, India
  • Share this:

ಕೃಷಿಗೆ ಸಂಬಂಧಿಸಿದ ವಿಧಾನಗಳಲ್ಲಿ, ಉಪಕರಣಗಳಲ್ಲಿ, ವಿವಿಧ ತಂತ್ರಜ್ಞಾನಗಳಲ್ಲಿ ಸಾಕಷ್ಟು ಸಂಶೋಧನೆಗಳು ಆಗುತ್ತಲೇ ಇರುತ್ತವೆ. ಇರುವಂಥ ಸೌಕರ್ಯಗಳನ್ನೇ ಬಳಸಿಕೊಂಡು ಆಗಾಗ ಯಶಸ್ವಿ ಪ್ರಯೋಗಗಳು ನಡೆಯುತ್ತಿರುತ್ತವೆ. ಕೃಷಿಕರಿಗೆ ಅನುಕೂಲವಾಗುವಂತಹ, ಕಡಿಮೆ ಖರ್ಚಿನಲ್ಲಿ ಉಪಯೋಗಿಸುವಂತಹ ಸಾಧನಗಳ ಅನ್ವೇಷಣೆ ನಿಜಕ್ಕೂ ರೈತರಿಗೆ (Farmre's) ಸಹಾಯಕ. ನ್ಯೂ ಹಾಲೆಂಡ್‌ (New Holland) ಇಂಥದ್ದೇ ಒಂದು ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದೆ. ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡುವಂತಹ, ಡೀಸೇಲ್‌ ಇಲ್ಲದೆಯೇ ದ್ರವೀಕೃತ ಮಿಥೇನ್​ನಿಂದಲೇ (Methane) ಚಲಿಸುವಂತಹ ವಿಶ್ವದ ಮೊದಲ ಟ್ರಾಕ್ಟರ್‌ ಒಂದನ್ನು ಅಭಿವೃದ್ಧಿಪಡಿಸಿದೆ.


ಸಗಣಿಯಿಂದ ಓಡುತ್ತೆ ಟ್ರ್ಯಾಕ್ಟರ್‌ !
ಒಂದು ದಶಕಕ್ಕೂ ಹೆಚ್ಚು ಕಾಲ ಬಯೋಮಿಥೇನ್ ಉತ್ಪಾದನೆಯನ್ನು ಸಂಶೋಧಿಸುತ್ತಾ ಅಭಿವೃದ್ಧಿಪಡಿಸುತ್ತಿರುವ ಬ್ರಿಟಿಷ್ ಕಂಪನಿ ಬೆನ್ನಮನ್‌ನಿಂದ ಈ ಅದ್ಭುತ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.


ಅಂದಹಾಗೆ ಈ ಟ್ರ್ಯಾಕ್ಟರ್‌ ಹಸುವಿನ ಸಗಣಿಯಿಂದ ಉತ್ಪಾದಿಸಲಾಗುವ ದ್ರವೀಕೃತ ಮೀಥೇನ್‌ನಿಂದ ಚಲಿಸುತ್ತದೆ. ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೇ ಡೀಸೇಲ್‌ಗೆ ಖರ್ಚು ಮಾಡುವ ಹಣವನ್ನೂ ಉಳಿಸುತ್ತದೆ.


ಮೀಥೇನ್‌ ಬಳಸಿ ಟ್ರ್ಯಾಕ್ಟರ್‌ ಹೇಗೆ ಓಡುತ್ತೆ?
ಈ ಟ್ರ್ಯಾಕ್ಟರ್‌ಗೆ ಬೇಕಾಗುವ ಇಂಧನವನ್ನು ಹಸುವಿನ ಸಗಣಿಯನ್ನು ಮಿಥೇನ್‌ ಆಗಿ ಪರಿವರ್ತಿಸಿ ಸುಲಭವಾಗಿ ಉತ್ಪಾದಿಸಬಹುದು ಎನ್ನುತ್ತದೆ ಕಂಪನಿ. 100 ಹಸುಗಳ ಸಗಣಿಯ ಉಪ-ಉತ್ಪನ್ನಗಳನ್ನು ಬಯೋಮಿಥೇನ್ ಶೇಖರಣಾ ಘಟಕದಲ್ಲಿ ಫ್ಯೂಜಿಟಿವ್ ಮಿಥೇನ್ ಎಂಬ ಇಂಧನವಾಗಿ ಪರಿವರ್ತಿಸಲಾಗುತ್ತದೆ.


ಟ್ರಾಕ್ಟರ್‌ನಲ್ಲಿ ಅಳವಡಿಸಲಾಗಿರುವ ಕ್ರಯೋಜೆನಿಕ್ ಟ್ಯಾಂಕ್, ದ್ರವರೂಪದಲ್ಲಿ ಮಿಥೇನ್ ಅನ್ನು -162 ಡಿಗ್ರಿ °C ನಲ್ಲಿ ಇರಿಸುತ್ತದೆ. ಇದು ವಾಹನಕ್ಕೆ ಡೀಸೆಲ್‌ನಷ್ಟು ಶಕ್ತಿಯನ್ನು ನೀಡುತ್ತದೆ.


ಡೀಸೆಲ್ ಗೆ ಸಮಾನಾದ ಪವರ್‌ ಹೊಂದಿದೆ!
270hp ಪವರ್‌ ಹೊಂದಿರುವ ಈ ಟ್ರ್ಯಾಕ್ಟರ್ ಡೀಸೆಲ್-ಚಾಲಿತ ಆವೃತ್ತಿಗಳ ಕಾರ್ಯಕ್ಷಮತೆಗೆ ಸಮನಾಗಿ ಹೊಂದಿಕೆಯಾಗಿದೆ ಎಂದು ಹೇಳಲಾಗುತ್ತಿದೆ.


ಇನ್ನು ಈ ಟ್ರ್ಯಾಕ್ಟರ್‌, ಡೀಸೆಲ್ ನಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣಕ್ಕಿಂತಲೂ ಕಡಿಮೆ ಹೊರಸೂಸುವಿಕೆಯನ್ನು ಹೊಂದಿದೆ. ಅದರ ಪ್ರಾಯೋಗಿಕ ಚಾಲನೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು 2,500 ರಿಂದ 500 ಮೆಟ್ರಿಕ್ ಟನ್‌ಗಳಿಗೆ ಕಡಿತಗೊಂಡಿದೆ ಎನ್ನಲಾಗಿದೆ.


ವಿಶ್ವದಲ್ಲೇ ಮೊದಲು!
T7 ಲಿಕ್ವಿಡ್ ಮಿಥೇನ್-ಇಂಧನದ ಟ್ರಾಕ್ಟರ್ ಯಶಸ್ವಿಯಾಗಿರುವುದು ವಿಶ್ವದಲ್ಲೇ ಮೊದಲಾಗಿದೆ. ಜಾಗತಿಕ ಕೃಷಿ ಉದ್ಯಮವನ್ನು ಡಿಕಾರ್ಬನೈಸ್ ಮಾಡುವ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಸಾಕಾರಗೊಳಿಸುವತ್ತ ಮತ್ತೊಂದು ಹೆಜ್ಜೆಯಾಗಿದೆ ಎಂದು ಬೆನ್ನಮನ್ ಸಹ-ಸಂಸ್ಥಾಪಕ ಕ್ರಿಸ್ ಮಾನ್ ಹೇಳಿದ್ದಾರೆ. ಕಂಪನಿಯು ತಂತ್ರಜ್ಞಾನದ ವ್ಯಾಪಕ ಬಳಕೆಯ ಬಗ್ಗೆಯೂ ಅಧ್ಯಯನ ನಡೆಸುತ್ತಿದೆ ಎಂಬುದಾಗಿ ಕ್ರಿಸ್‌ಮಾನ್‌ ಹೇಳಿದ್ದಾರೆ.


ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಅರ್ಹತೆ ಇದೆಯಂತೆ, 'ಕೈ' ನಾಯಕನಿಗೆ ಈ ಕ್ಷೇತ್ರವೇ ಸೇಫ್ ಅಂತೆ!


ಡೈರಿ ಫಾರ್ಮ್‌ಗಳು ಮತ್ತು ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಂತಹ ಸೈಟ್‌ಗಳಿಂದ ಆಗುವ ಹೊರಸೂಸುವಿಕೆ ಬಗ್ಗೆ ಸದ್ಯ ಅಧ್ಯಯನ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಸಾರಿಗೆ ಮತ್ತು ಕೃಷಿಗೆ ಬಯೋಮಿಥೇನ್‌ ಬಳಸುವ ಬಗ್ಗೆ ಕೂಡ ಅಧ್ಯಯನ ಮಾಡಲಾಗುತ್ತಿದೆ. ಏರುತ್ತಿರುವ ವೆಚ್ಚಗಳು ಮತ್ತು ಇಂಧನ ಬೆಲೆಗಳ ಹಿನ್ನೆಲೆಯಲ್ಲಿ ನಾವು ನಮ್ಮ ಕೃಷಿ ಉದ್ಯಮವನ್ನು ಇಂಧನ ಮುಕ್ತಗೊಳಿಸಿದರೆ ರೈತರಿಗೆ ಹೆಚ್ಚಿನ ಸಹಾಯವಾಗುತ್ತದೆ.


ಇದನ್ನೂ ಓದಿ: Ayodhya Temple: ನೀವು ರಾಮ ಮಂದಿರದ ಪೂಜಾರಿನಾ? ಅಮಿತ್ ಶಾಗೆ ಖರ್ಗೆ ಮಾತಿನೇಟು!


ಅಲ್ಲದೇ, ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದರ ಜೊತೆಗೆ ನಾವು ಗ್ರಾಮೀಣ ಸಮುದಾಯಗಳಿಗೆ ದೊಡ್ಡ ಆರ್ಥಿಕ ಉತ್ತೇಜನವನ್ನು ಒದಗಿಸಬಹುದು. ಇದರ ಜೊತೆಗೆ ಹೆಚ್ಚಿನ ಆಹಾರ ಭದ್ರತೆ ಕೂಡ ಸಾಧ್ಯವಾಗುತ್ತದೆ" ಎಂಬುದಾಗಿ LEP ನ ಅಧ್ಯಕ್ಷ ಮಾರ್ಕ್ ಡಡ್ಡ್ರಿಡ್ಜ್ ಹೇಳಿದ್ದಾರೆ.


ಗ್ಯಾಸ್‌ನಿಂದ ಹಿಡಿದು, ತೋಟ, ಹೊಲಗಳಿಗೆ ಹಾಕುವ ಸಾವಯವ ಗೊಬ್ಬರ ತನಕ ಸಾಕಷ್ಟು ಉಪಯೋಗಕ್ಕೆ ಬರುವ ಸಗಣಿಯಿಂದ ಇಂಥದ್ದೊಂದು ಟ್ರ್ಯಾಕ್ಟರ್‌ ಓಡುತ್ತೆ ಅಂತಾದರೆ ಅದು ದೊಡ್ಡ ಆವಿಷ್ಕಾರವೇ ಹೌದು. ಒಟ್ಟಾರೆಯಾಗಿ ಕೃಷಿ ಸಾಧನಗಳ ಸಂಶೋಧನೆ ರೈತರಿಗೆ ವರದಾನವಾಗುತ್ತದೆ. ಆದ್ರೆ ಇದು ಎಷ್ಟರ ಮಟ್ಟಿಗೆ ರೈತ ಸ್ನೇಹಿಯಾಗುತ್ತದೆ ಅನ್ನೋದನ್ನು ಕಾದು ನೋಡಬೇಕಷ್ಟೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು