ಬಿಹಾರದ 12 ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಮೋದಿ ; ನಿತೀಶ್​ ಪರ ಮೊದಲ ಬಾರಿ ಮತಯಾಚನೆ

ಇದೇ ಮೊದಲ ಬಾರಿ ನಿತೀಶ್​ ಕುಮಾರ್​ ಪರ ಪ್ರಧಾನಿ ಮೋದಿ ಮತಯಾಚಿಸುತ್ತಿದ್ದಾರೆ

ಮೋದಿ-ನಿತೀಶ್​ ಕುಮಾರ್​

ಮೋದಿ-ನಿತೀಶ್​ ಕುಮಾರ್​

 • Share this:
  ಪಾಟ್ನಾ (ಅ.16): ಬಿಹಾರಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ 12ಕ್ಕೂ ಹೆಚ್ಚು ಸಮಾವೇಶದಲ್ಲಿ ಅವರು ಮತಯಾಚಿಸಲಿದ್ದಾರೆ. ಒಂದೇ ದಿನ ಮೂರು ರ್ಯಾಲಿಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಇದರಲ್ಲಿ ಒಮ್ಮೆ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.  ಇದೇ ಅಕ್ಟೋಬರ್​ನಿಂದ ನವೆಂಬರ್​ವರೆಗೆ ನಡೆಯುವ ಬಿಹಾರ ಚುನಾವಣೆಗೆ ಈಗಾಗಲೇ ಬಿಜೆಪಿ ನೇತೃತ್ವದ ಎನ್​ಡಿಎ ಸಿದ್ಧತೆ ಆರಂಭಿಸಿದೆ.

  ಅ.23ರಿಂದ ಸಸರಾಮ್​ನಿಂದ ಪ್ರಧಾನಿ ಮೋದಿ ಮೊದಲ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅವರು ಗಯ ಮತ್ತು ಭಾಗಲಪುರದಲ್ಲಿಯೂ ಪ್ರಚಾರ ನಡೆಸಲಿದ್ದಾರೆ. ನವೆಂಬರ್​ ಮೂರರಂದು ಅರಾರಿಯಾದಲ್ಲಿ ಕೊನೆಯ ಪ್ರಚಾರ ನಡೆಸಲಿದ್ದಾರೆ.

  ಬಿಹಾರ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್​ ವಹಿಸಿದ್ದಾರೆ. ರಾಜ್ಯದಲ್ಲಿ ಮೊದಲ ದಿನದ ಮತದಾನದಂದು ಅಂದರೆ ಅ.28ರಂದು ಪ್ರಧಾನಿ ದರ್ಬಾಂಗ್​ ಮುಜಾಫರ್​ಪುರ್​ ಮತ್ತು ಪಾಟ್ನಾಗೆ ಭೇಟಿ ನೀಡಲಿದ್ದಾರೆ ಎಂದು ಫಡ್ನಾವೀಸ್​ ತಿಳಿಸಿದ್ದಾರೆ.

  ಇದೇ ಮೊದಲ ಬಾರಿ ನಿತೀಶ್​ ಕುಮಾರ್​ ಪರ ಪ್ರಧಾನಿ ಮೋದಿ ಮತಯಾಚಿಸುತ್ತಿದ್ದಾರೆ. 2013ರಲ್ಲಿ ನರೇಂದ್ರ ಮೋದಿ, ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ನಿತೀಶ್​ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರ ಈ ವಿರೋಧ ಮೈತ್ರಿಯೊಂದಿಗೆ ಅಂತ್ಯವಾಯಿತು.

  2005 ಮತ್ತು 2010ರಲ್ಲಿ ಎನ್​ಡಿಎ ಜೊತೆಗೆ ಮೈತ್ರಿ ಇದ್ದಾಗಲೂ ನಿತೀಶ್​ ಕುಮಾರ್​, ಮೋದಿ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಿರಲಿಲ್ಲ. ಕಾರಣ ಇದರಿಂದ ಮುಸ್ಲಿಂ ಮತಗಳು ವಿಭಜನೆಯಾಗುತ್ತದೆ ಎಂದು.

  2017ರಲ್ಲಿ ಲಾಲೂ ಯಾದವ್​ ಮತ್ತು ಕಾಂಗ್ರೆಸ್​ನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಿತೀಶ್​ ಕುಮಾರ್​ ಅಧಿಕಾರ ಗದ್ದುಗೆಗೆ ಏರಿದ್ದರು, ಈ ಸಂದರ್ಭದಲ್ಲಿ ಮೋದಿ ಅವರ ಬಗ್ಗೆ ಅವರ ಅಭಿಪ್ರಾಯವೂ ಬದಲಾಯಿತು. ಅಂದಿನಿಂದ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಬಗ್ಗೆ ಮಾತನಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ನಾಯಕರಿಬ್ಬರು ಒಟ್ಟಿಗೆ ಪ್ರಚಾರ ನಡೆಸಿದ್ದರು.
  Published by:Seema R
  First published: