HOME » NEWS » National-international » FIRST TIME THAT MUMBAI HAS REPORTED OVER 5000 CASES IN A SINGLE DAY SESR

Covid 19: ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೋನಾ ಹಾವಳಿ; ಮುಂಬೈನಲ್ಲಿ ಒಂದೇ ದಿನದಲ್ಲಿ ದಾಖಲೆ ಪ್ರಕರಣ

ಇಂದು ಒಂದೇ ದಿನದಲ್ಲಿ 5,185 ಹೊಸ ಪ್ರಕರಣಗಳು ವರದಿಯಾಗಿ,ದ್ದು ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ 48ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿ ಅಂಶ ತಿಳಿಸಿದೆ

news18-kannada
Updated:March 24, 2021, 9:08 PM IST
Covid 19: ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೋನಾ ಹಾವಳಿ; ಮುಂಬೈನಲ್ಲಿ ಒಂದೇ ದಿನದಲ್ಲಿ ದಾಖಲೆ ಪ್ರಕರಣ
ಸಾಂದರ್ಭಿಕ ಚಿತ್ರ
  • Share this:
ಕೋವಿಡ್​ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಆತಂಕ ಮೂಡಿಸಿದೆ. ವಾಣಿಜ್ಯನಗರಿಯಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮುಂಬೈನಲ್ಲಿ  5000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಇನ್ನು ದೇಶದಲ್ಲಿ ಅತಿಹೆಚ್ಚು ಸೋಂಕಿಗೆ ತುತ್ತಾಗಿರುವ 10 ಜಿಲ್ಲೆಗಳಲ್ಲಿ ಮಹಾರಾಷ್ಟ್ರದ 9 ಜಿಲ್ಲೆಗಳು ಸ್ಥಾನ ಪಡೆದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಒಂದೇ ದಿನದಲ್ಲಿ 5,185 ಹೊಸ ಪ್ರಕರಣಗಳು ವರದಿಯಾಗಿ,ದ್ದು ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ 48ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿ ಅಂಶ ತಿಳಿಸಿದೆ. ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಪುಣೆಯಲ್ಲಿ ಲಾಕ್​​ಡೌನ್​ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಇಲ್ಲಿನ ಆಡಳಿತವು ಇದನ್ನು ತಳ್ಳಿ ಹಾಕಿದ್ದು, ಕೋವಿಡ್​ ನಿಯಮ ಉಲ್ಲಂಘಿಸುವ ವಿರುದ್ಧ ಕ್ರಮವಹಿಸುವ ಕುರಿತು ಚಿಂತಿಸಲಾಗಿದೆ ಎಂದಿದ್ದಾರೆ. ನಗರದಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳು, ಕೋಚಿಂಗ್​ ತರಗತಿಗಳು ಬಂದ್​ ಆಗಿವೆ.



ಮುಂಬೈನಲ್ಲಿ ಹೋಳಿ ಸಂಭ್ರಮಕ್ಕೂ ತಡೆ ನೀಡಲಾಗಿದ್ದು, ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್​ ರ್ಯಾಂಡಮ್​ ಪರೀಕ್ಷೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಮತ್ತು ಪಂಜಾಬ್​ನಲ್ಲಿ ಕೋವಿಡ್​ ಹೆಚ್ಚಳದ ಬಗ್ಗೆ ಇಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿತು. ಸೋಂಕಿನ ಪ್ರಮಾಣ ಹೆಚ್ಚಳದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್​ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಪುಣೆಮ ನಾಗ್ಪುರ್​, ಮುಂಬೈ, ಥಾಣೆ ಮತ್ತು ನಾಸಿಕ್​ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ತಿಳಿಸಿದ್ದರು.
Youtube Video

ಕಳೆದ ಡಿಸೆಂಬರ್​ನಲ್ಲಿ ಪತ್ತೆಯಾಗಿದ್ದ ಡಬಲ್​ ಮ್ಯೂಟೆಶನ್​ ಕೊರೋನಾ ವೈರಸ್​ ಸೋಂಕು ಮಹಾರಾಷ್ಟ್ರದ 200 ಜನರಲ್ಲಿ ಕಂಡು ಬಂದಿದೆ ಎಂದು ಸಚಿವಾಲಯ ದೃಢಪಡಿಸಿದೆ. ಇದೇ ಕಾರಣದಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ವರದಿ ಪ್ರಕಾರ ಮಹಾರಾಷ್ಟ್ರದಲ್ಲಿ ಇಂದು 28,699 ಪ್ರಕರಣ ದಾಖಲಾದರೆ, ಪಂಜಾಬ್​ನಲ್ಲಿ 2,254 ಮತ್ತು ಕರ್ನಾಟಕದಲ್ಲಿ 2,010 ಸಕ್ರಿಯ ಪ್ರಕರಣಗಳು ದಾಖಲಾಗಿದೆ.
Published by: Seema R
First published: March 24, 2021, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories