2020ರಲ್ಲಿ ಭಾರತದ ಆರ್ಥಿಕತೆ ಐತಿಹಾಸಿಕ ಅಧಃಪತನ: ಐಎಂಎಫ್ ಅಂದಾಜು

ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ರಾಷ್ಟ್ರಗಳೂ ಕೂಡ ಆರ್ಥಿಕವಾಗಿ ಹಿನ್ನಡೆ ಹೊಂದುತ್ತವೆ. ಚೀನಾದ ಆರ್ಥಿಕ ಬೆಳವಣಿಗೆ ಈ ವರ್ಷದ ಶೇ. 1ಕ್ಕೆ ಸೀಮಿತವಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಜೂನ್ 24): ಕಳೆದ ಒಂದು ವರ್ಷದಿಂದ ನಿರಂತರವಾಗಿ ಕುಸಿಯುತ್ತಲೇ ಇರುವ ಭಾರತದ ಆರ್ಥಿಕತೆ ಈಗ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಕ್ಕು ಜರ್ಝರಿತಗೊಳ್ಳುತ್ತಿದೆ. ಈ ವರ್ಷ ಭಾರತದ ಆರ್ಥಿಕತೆಯ ಬೆಳವಣಿಗೆ ಇರುವುದಿಲ್ಲ. ಬದಲಾಗಿ ಆರ್ಥಿಕತೆ ಶೇ. 4.5ರಷ್ಟು ಕುಸಿಯುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ. ಅಂದರೆ, ಭಾರತದ ಆರ್ಥಿಕತೆಯ ಬೆಳವಣಿಗೆ -4.5% ಇರಲಿದೆ. ಆದರೆ, ಐಎಂಎಫ್ ಪ್ರಕಾರ ಖುಷಿಯ ವಿಚಾರವೆಂದರೆ ಈ ಕೊರೋನಾ ಪಿಡುಗು ಬೇಗ ನಿವಾರಣೆಯಾದರೆ 2021ರಲ್ಲಿ ಭಾರತದ ಆರ್ಥಿಕತೆ ಶೇ. 6ರಷ್ಟು ಅಭಿವೃದ್ಧಿ ಸಾಧಿಸುವ ಸಾಧ್ಯತೆ ಇದೆಯಂತೆ.

ಭಾರತದ ಈ ಪರಿಯ ಕುಸಿತ ನಿಜವೇ ಆದರೆ ಅದು ಐತಿಹಾಸಿಕ ಎನಿಸಲಿದೆ. ಐಎಂಎಫ್ ಬಳಿ ಭಾರತದ ಆರ್ಥಿಕತೆಯ ಬೆಳವಣಿಗೆಯ ದತ್ತಾಂಶ 1961ರಿಂದ ಮಾತ್ರ ಇದೆ. ಅಲ್ಲಿಂದೀಚೆ ಭಾರತದ ಆರ್ಥಿಕತೆ ಇಷ್ಟೊಂದು ಪ್ರಮಾಣದಲ್ಲಿ ಯಾವತ್ತೂ ಕುಸಿದಿಲ್ಲವಂತೆ.

2019ರಲ್ಲಿ ಭಾರತದ ಪ್ರಗತಿ ದರ ಶೇ. 4.2 ಇತ್ತು. ಈ ವರ್ಷ ಭಾರತದ ಆರ್ಥಿಕತೆ 1.9 ಪ್ರತಿಶತದಷ್ಟು ಬೆಳವಣಿಗೆ ಹೊಂದಬಹುದು ಎಂದು ಏಪ್ರಿಲ್ ತಿಂಗಳಲ್ಲಿ ಐಎಂಎಫ್ ಅಂದಾಜು ಮಾಡಿತ್ತು. ಆದರೆ, ಸುದೀರ್ಘ ಲಾಕ್​ಡೌನ್ ಅವಧಿ, ಹಾಗೂ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲದಿರುವುದರಿಂದ ಐಎಂಎಫ್ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ ಭಾರತದ ಆರ್ಥಿಕತೆ ಪ್ರಗತಿ ಶೇ. 8.7ರಷ್ಟು ಕುಸಿತ ಕಾಣುವಂತಾಗಬಹುದು.

ಇದನ್ನೂ ಓದಿ: ಸತತ 12 ವರ್ಷಗಳಿಂದ ತಮ್ಮ ವೇತನ ಹೆಚ್ಚಿಸಿಕೊಳ್ಳದ ಮುಕೇಶ್​ ಅಂಬಾನಿ; ಕಾರಣವೇನು ಗೊತ್ತೆ?ಇದೇ ವೇಳೆ, ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ರಾಷ್ಟ್ರಗಳೂ ಕೂಡ ಆರ್ಥಿಕವಾಗಿ ಹಿನ್ನಡೆ ಹೊಂದುತ್ತವೆ. ಚೀನಾದ ಆರ್ಥಿಕ ಬೆಳವಣಿಗೆ ಈ ವರ್ಷದ ಶೇ. 1ಕ್ಕೆ ಸೀಮಿತವಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
First published: