• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • DNA Test for Cow: ದೇಶದಲ್ಲೇ ಮೊದಲ ಬಾರಿಗೆ ಹಸುವಿನ ಡಿಎನ್​ಎ ಟೆಸ್ಟ್ ಮಾಡಿಸಿದ ಪೊಲೀಸರು​! ಇದರ ಹಿಂದಿದೆ ರೋಚಕ ಕಹಾನಿ

DNA Test for Cow: ದೇಶದಲ್ಲೇ ಮೊದಲ ಬಾರಿಗೆ ಹಸುವಿನ ಡಿಎನ್​ಎ ಟೆಸ್ಟ್ ಮಾಡಿಸಿದ ಪೊಲೀಸರು​! ಇದರ ಹಿಂದಿದೆ ರೋಚಕ ಕಹಾನಿ

ಹಸುವಿಗೆ ಡಿಎನ್​ಎ ಟೆಸ್ಟ್​

ಹಸುವಿಗೆ ಡಿಎನ್​ಎ ಟೆಸ್ಟ್​

ದೇಶದಲ್ಲಿ ಇದೇ ಮೊದಲಬಾರಿಗೆ ಹಸುವಿಗೆ ಡಿಎನ್​ಎ ಟೆಸ್ಟ್ ಮಾಡಿಸಲಾಗಿದ್ದು, ವೈಜ್ಞಾನಿಕ ವಿಧಾನದ ಮೂಲಕ ಕಾಣೆಯಾಗಿದ್ದ ಹಸುವನ್ನು ಅದರ ಮಾಲೀಕರಿಗೆ ಪೊಲೀಸರು ಮರಳಿ ಕೊಡಿಸಿದ್ದಾರೆ.

  • Share this:

ಜೈಪುರ್​ : ಕೆಲವೊಮ್ಮೆ ಮೃತ ದೇಹಗಳನ್ನು (Dead Body) ಗುರುತು ಪತ್ತೆ ಹಚ್ಚಲು, ಮಕ್ಕಳ -ಪೋಷಕರನ್ನು (Children- Parents) ಪತ್ತೆ ಹಚ್ಚಲು ಪೊಲೀಸರು ಡಿಎನ್​ಎ ಟೆಸ್ಟ್ (DNA Test) ಮಾಡಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇದೇ ಮೊದಲ ಬಾರಿಗೆ ಹಸುವಿಗೆ ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ಈ ಆಶ್ಚರ್ಯಕರ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದ್ದು, ಈ ವೈಜ್ಞಾನಿಕ ವಿಧಾನದ ಮೂಲಕ ಕಾಣೆಯಾಗಿದ್ದ ಹಸುವನ್ನು ಅದರ ಮಾಲೀಕರಿಗೆ ಮರಳಿ ಕೊಡಿಸಲಾಗಿದೆ. ಇದರಿಂದ ತಮ್ಮ ಪ್ರೀತಿಯ ಹಸು ಮರಳಿ ತಮ್ಮನ್ನು ಸೇರಿದ್ದರಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.


ರಾಜಸ್ಥಾನದ ಚುರು ಜಿಲ್ಲೆಯ ರಾಮನಗರ್​ ಬಾಸ್ ಹಳ್ಳಿಯಲ್ಲಿ​ ಫೆಬ್ರವರಿ 11,2021 ರಂದು ದುಲಾರಾಮ್ ದಾರಾ ಎಂಬುವವರ ಹಸು ಕಾಣೆಯಾಗಿತ್ತು. ನಂತರ ದುಲಾರಾಮ್​ ಪೊಲೀಸರಿಗೆ ದೂರು ನೀಡಿದ್ದರು. ನಂತರ ಮೂರು ಬೇರೆ ಬೇರೆ ಅಧಿಕಾರಿಗಳು ತನಿಖೆ ನಡೆಸಿದರೂ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ವೃದ್ಧ ಪ್ರತಿಭಟಿಸಿದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್‌ ನಮೂನೆ ನೀಡಿದ್ದರು. ಆದರೆ ಪೊಲೀಸರು ಎಷ್ಟೇ ಹುಡುಕಾಡಿದರೂ ಹಸು ಪತ್ತೆಯಾಗಿರಲಿಲ್ಲ.


ಇದನ್ನೂ ಓದಿ:  Model: ಕರೆಂಟ್, ನೀರು ಇಲ್ಲದ ಸ್ಲಂನ ಬಾಲಕಿಗೆ ಒಲಿದ ಅದೃಷ್ಟ, 14 ವರ್ಷದ ಹುಡುಗಿ ಈಗ ಬ್ಯೂಟಿ ಬ್ರಾಂಡ್ ಮಾಡಲ್!


10 ತಿಂಗಳ ನಂತರ ಸಿಕ್ಕಿದ ಹಸು


10 ತಿಂಗಳ ನಂತರ, ಅಂದರೆ ಡಿಸೆಂಬರ್ 8, 2021 ರಂದು, ಯಾರೋ ದುಲಾರಾಮ್​ಗೆ ಕರೆ ಮಾಡಿ ಹೇಳಿದರು ನಿಮ್ಮ ಹಸು ಮಾರುಕಟ್ಟೆಯಲ್ಲಿದೆ ಹೋಗಿ ಪರಿಶೀಲಿಸಿ ಎಂದಿದ್ದಾರೆ. ಇದನ್ನು ಕೇಳಿ 70 ವರ್ಷದ ಮುದುಕನಿಗೆ ತುಂಬಾ ಸಂತೋಷವಾಗಿದೆ. ತಕ್ಷಣ ಮಾರುಕಟ್ಟೆಯಲ್ಲಿ ಹಸು ಏನನ್ನೋ ತಿನ್ನುತ್ತಿರುವುದು ಕಾಣಿಸಿತು. ಅದನ್ನು ನೋಡಿದ ಕೂಡಲೇ ಅದು ತನ್ನ ಹಸು ಎಂಬುದು ಅವರಿಗೆ ಅರ್ಥವಾಯಿತು. ಅವರು ಅದನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ನಂತರ ಒಂದು ಗುಂಪು ಬಂದು ದುಲಾರಾಮ್​ನನ್ನು ಥಳಿಸಿ ಹಸುವನ್ನು ತೆಗೆದುಕೊಂಡು ಹೋಗಿದ್ದಾರೆ.
ದುಷ್ಕರ್ಮಿಗಳಿಂದ ದಾಳಿ


ಈ ದಾಳಿಯಲ್ಲಿ ದಾರಾ ಅವರ ಬಾಯಿಯಿಂದ ಎರಡು ಹಲ್ಲುಗಳೂ ಉದುರಿದವು. ಆದ್ದರಿಂದ ಅವರು ಡಿಸೆಂಬರ್ 9, 2021 ರಂದು ಪೊಲೀಸರಿಗೆ ದೂರು ನೀಡಿದರು. ಆದರೆ ಅವರು ದೂರು ದಾಖಲಿಸಲಿಲ್ಲ. ನಂತರ ಎಸ್ಪಿ ಅವರನ್ನು ಭೇಟಿ ಮಾಡಿದರು. ಈ ಪ್ರಕರಣವನ್ನು 21 ಡಿಸೆಂಬರ್ 2021 ರಂದು ಎಸ್ಪಿ ಆದೇಶದ ನಂತರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ಅದರೊಂದಿಗೆ ತನಿಖಾಧಿಕಾರಿ ಮತ್ತು ಪೊಲೀಸ್ ಠಾಣೆಯನ್ನೂ ಬದಲಾಯಿಸಿದರು. ಆದರೂ ಪೊಲೀಸ್ ಠಾಣೆಯಲ್ಲೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ದಾರಾ ಜೈಪುರ ಡಿಜಿಪಿಯನ್ನು ಭೇಟಿಯಾದರು. ಪ್ರಕರಣವನ್ನು ದುಂಗರಗಢ ಪೊಲೀಸ್ ಠಾಣೆಗೆ ವರ್ಗಾಯಿಸಿದರು. ಅಲ್ಲೂ ನ್ಯಾಯ ಸಿಗಲಿಲ್ಲ.


ಟವರ್ ಮೇಲೆ ಹತ್ತಿ ಪ್ರತಿಭಟನೆ


2022 ನವೆಂಬರ್ 30 ರಂದುರಾಜಸ್ಥಾನ ಚುನಾವಣಾ ಪ್ರಚಾರದ ಅಂಗವಾಗಿ ಸಿಎಂ ಅಶೋಕ್ ಗೆಹ್ಲೋಟ್ ಸರ್ದಾರ್ ಸಹರ್​ಗೆ ಬಂದಿದ್ದರು. ಆ ಸಮಯದಲ್ಲಿ, ದಾರ ಟೆಲಿಫೋನ್ ಟವರ್ ಹತ್ತಿ ತನ್ನ ಹಸುವನ್ನು ದುಷ್ಕರ್ಮಿಗಳಿಂದ ಕೊಡಿಸುವಂತೆ ಒತ್ತಾಯಿಸಿದರು. ತಾರಾನಗರ ಡಿಎಸ್ಪಿ ಓಂಪ್ರಕಾಶ ಗೋದಾರ ಅವರು ಹಸುವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ ನಂತರ ಟವರ್​ ಮೇಲಿಂದ ಕೆಳಗೆ ಇಳಿದರು.


ಇದನ್ನೂ ಓದಿ:  Husband and Wife: ಹೆಂಡ್ತಿ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದ ವರ! 25 ಲಕ್ಷ ಹಣ, ಕಾರು, ಚಿನ್ನ ಕೊಟ್ಟರೂ ವರದಕ್ಷಿಣೆ ಕಿರುಕುಳ!


ಹಸುವಿನ ಗುರುತು ಪತ್ತೆ ಹಚ್ಚಲು ಡಿಎನ್​ಎ ಟೆಸ್ಟ್


ಡಿಎಸ್ಪಿ ಅವರು ಸರ್ದಾರ್ ಸಹರ್‌ನಲ್ಲಿ ಪಶುವೈದ್ಯರನ್ನು ಭೇಟಿ ಮಾಡಿ, ನಂತರ ದಾರಾ ಅವರ ಮನೆಯಲ್ಲಿ ಕರುದಿಂದ ಡಿಎನ್‌ಎ ಪರೀಕ್ಷೆಯ ಮಾದರಿಗಳನ್ನು ಪಡೆದರು. ದುಷ್ಕರ್ಮಿಗಳು ಕೊಂಡೊಯ್ದ ಹಸುವಿನ ಮಾದರಿಗಳನ್ನೂ ತೆಗೆದುಕೊಳ್ಳಲಾಯಿತು. ಜನವರಿ 3, 2023 ರಂದು, ಎರಡು ಮಾದರಿಗಳು ಹೈದರಾಬಾದ್‌ನಲ್ಲಿರುವ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಗಳು ಬಂದಿದ್ದು, ಅದರ ಪ್ರಕಾರ, ಹಸುವು ಕರುವಿನ ತಾಯಿ ಎಂದು ತೀರ್ಮಾನಿಸಲಾಯಿತು. ನಂತರ ಹಸುವನ್ನು ದಾರಾಗೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಆ ಹಸುವಿಗೆ ಸೇರಿದ ಇನ್ನೂ 2 ಕರುಗಳನ್ನು ಗುರುತಿಸಿ ದುಲಾರಾಮ್​ಗೆ ನೀಡಿದ್ದಾರೆ.


ಕುಟುಂಬದಲ್ಲಿ ಸಂಭ್ರಮ


ಆ ಹಸುವಿನ ಸಂಸಾರ ಒಂದಾಗುತ್ತಿದ್ದಂತೆ ದಾರ ಜೊತೆಯಲ್ಲಿ ಅವನ ಹೆಂಡತಿ, ಮಗಳೂ ಸಂಬ್ರಮ ವ್ಯಕ್ತಪಡಿಸಿದ್ದಾರೆ. " ಆ ಹಸು ನಮ್ಮದು. ಅದನ್ನು ತೆಗೆದುಕೊಂಡು ಹೋಗಿದ್ದವರು ಕಳ್ಳರು. ಹಸುವನ್ನು ಮರಳಿ ಪಡೆಯಲು ನನ್ನ ತಂದೆ ತುಂಬಾ ಶ್ರಮಿಸಿದ್ದಾರೆ. ನಮಗೆ ಯಾರೂ ಸಹಾಯಕ್ಕೆ ಬಂದಿಲ್ಲ. ಅದನ್ನು ಡಿಎಸ್ಪಿ ಓಂಪ್ರಕಾಶ ಗೋದಾರ ಮೂಲಕ ಈಗ ಅದು ನಮ್ಮ ಮನೆಗೆ ವಾಪಸ್ ಬಂದಿದೆ " ದುಲಾರಾಮ್​ ಮಗಳು ಅನಿತಾ ಹೇಳಿದ್ದಾರೆ.

top videos
    First published: