ನವದೆಹಲಿ: 2023ರ ಗಣರಾಜ್ಯೋತ್ಸವ (Republic Day) ಪರೇಡ್ಗೆ (Parade) ರಿಕ್ಷಾ ಎಳೆಯುವವರಿಂದ (Rickshaw Pullers) ಹಿಡಿದು ತರಕಾರಿ ಮಾರಾಟಗಾರರವರೆಗೆ (Vegetable Vendors) ವಿಶೇಷವಾಗಿ ಆಹ್ವಾನಿಸಲಾಗಿದೆ. ಶ್ರಮಜೀವಿಗಳು (ಕಾರ್ಮಿಕರು) ಮತ್ತು ಅವರ ಕುಟುಂಬಸ್ಥರು, ಕರ್ತವ್ಯ ಪಥದ (Vegetable Vendors) ನಿರ್ವಹಣಾ ಸಿಬ್ಬಂದಿ ಮತ್ತು ರಿಕ್ಷಾ ಚಾಲಕರು, ಸಣ್ಣ ದಿನಸಿ ವ್ಯಾಪಾರಿಗಳು ಮತ್ತು ತರಕಾರಿ ಮಾರಾಟಗಾರರು ಸೇರಿದಂತೆ ಇತರ ಸಮುದಾಯದ ಜನರು ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳಲಿದ್ದಾರೆ. ಈ ವರ್ಷ ಗಣರಾಜ್ಯೋತ್ಸವ ಆಚರಣೆ ಜನ ಸಾಮಾನ್ಯರ ಕಾರ್ಯಕ್ರಮವಾಗಿದೆ. ಈ ಬಾರಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ತವ್ಯ ಪಥ್ನಲ್ಲಿ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ
ಅಲ್ಲದೇ ಈಜಿಪ್ಟ್ನಿಂದ 120 ಮಂದಿ ಕವಾಯತು ತಂಡ ಪರೇಡ್ನಲ್ಲಿ ಭಾಗವಹಿಸಲಿದೆ. ಈ ಹಿಂದೆ ರಾಜಪಥ ಎಂದು ಕರೆಯಲಾಗುತ್ತಿದ್ದ ಕರ್ತವ್ಯ ಪಥ್ನಲ್ಲಿ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಪರೇಡ್ ಇದಾಗಿದೆ. ಕಳೆದ ಬಾರಿಗಿಂತ ಈ ಸಲ ಪರೇಡ್ ಆಸನಗಳ ಸಂಖ್ಯೆಯನ್ನು 45,000 ಕ್ಕೆ ಇಳಿಸಲಾಗಿದೆ. ಇದರಲ್ಲಿ 32,000 ಆಸನಗಳಿದ್ದು, ಉಳಿದ 10% ಸೀಟ್ಗಳನ್ನು ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಲಭ್ಯವಿದೆ.
ವಿವಿಐಪಿಗಳ ಆಮಂತ್ರಣ ಪತ್ರ ಕಡಿತ
ಈ ಕುರಿತಂತೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಅವರು, ಈ ಬಾರಿ ನಾವು ವಿವಿಐಪಿಗಳ ಆಮಂತ್ರಣ ಪತ್ರಗಳನ್ನು ಕಡಿತಗೊಳಿಸಿದ್ದೇವೆ. ಈ ಹಿಂದೆ ನಮಗೆ ಸುಮಾರು 50,000 ಆಹ್ವಾನಗಳು ಬಂದಿದ್ದವು, ಅವುಗಳನ್ನು 12,000 ಕ್ಕೆ ಇಳಿಸಲಾಗಿದೆ ಎಂದು ರಂಜನ್ ಹೇಳಿದರು. ಮೇಕ್ ಇನ್ ಇಂಡಿಯಾ ಉತ್ಪನ್ನಗಳಾದ ಮೇಕ್ ಬ್ಯಾಟಲ್ ಟ್ಯಾಂಕ್, NAG ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್, ಆಕಾಶ್ ಕ್ಷಿಪಣಿ, ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಪರೇಡ್ ಗಮನಹರಿಸಲಿದೆ.
ಮತ್ತು ಕೆಂಪು ಕೋಟೆಯಲ್ಲಿ ನಡೆಯಲಿದೆ ಅನೇಕ ಕಾರ್ಯಕ್ರಮ
ಬುಡಕಟ್ಟು ಸಂಸ್ಕೃತಿ, ರಕ್ಷಣಾ ಸಚಿವಾಲಯಗಳ ಕಾರ್ಯಕ್ರಮಗಳು ಮತ್ತು ಕೆಂಪು ಕೋಟೆಯಲ್ಲಿ ಭಾರತ್ ಪರ್ವ್ ಸಮಯದಲ್ಲಿ ವಿವಿಧ ರಾಜ್ಯಗಳ ಕಲಾ ಪ್ರಕಾರಗಳು ಮತ್ತು ಆಹಾರ ಪದಾರ್ಥಗಳ ಪ್ರದರ್ಶನಗಳು ಸಹ ಇರುತ್ತವೆ. ಫ್ಲೈಪಾಸ್ಟ್ 18 ಹೆಲಿಕಾಪ್ಟರ್ಗಳು, 8 ಟ್ರಾನ್ಸ್ಪೋರ್ಟರ್ ಏರ್ಕ್ರಾಫ್ಟ್ಗಳು ಮತ್ತು 23 ಫೈಟರ್ಗಳ ಪ್ರದರ್ಶನ ಕೂಡ ಒಳಗೊಂಡಿರುತ್ತದೆ.
ಈ ಬಾರಿ ಗಣರಾಜ್ಯೋತ್ಸವ ಪರೇಡ್ಗೆ ಜನ ಸಾಮಾನ್ಯರಿಗೆ ಮೊದಲ ಆದ್ಯತೆ
ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನಡೆಯುತ್ತಿರುವ ಕೇಂದ್ರ ಸರ್ಕಾರಿ ಸರ್ಕಾರ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಸಾಮಾನ್ಯ ಜನರಿಗೆ ಪ್ರಾತಿನಿಧ್ಯವನ್ನು ನೀಡಲು ಒತ್ತು ನೀಡಲಾಗುತ್ತಿದೆ. ಕಳೆದ ವರ್ಷದ ಗಣರಾಜ್ಯೋತ್ಸವದ ಪರೇಡ್ನಲ್ಲಿಯೂ ಸಹ, ಆಟೋರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು ಮತ್ತು ಮುಂಚೂಣಿಯ ಕಾರ್ಮಿಕರಿಗೆ ರಾಷ್ಟ್ರೀಯ ಮಹಾ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನವನ್ನು ನೀಡಲಾಗಿತ್ತು.
ಇದನ್ನೂ ಓದಿ: Republic Day: ಜನವರಿ 26ರಂದೇ ಗಣರಾಜ್ಯೋತ್ಸವವನ್ನು ಏಕೆ ಆಚರಿಸ್ತಾರೆ? ಮೊದಲನೇ ರಿಪಬ್ಲಿಕ್ ಡೇ ಹೇಗಿತ್ತು
ಅಲ್ಪಸಂಖ್ಯಾತರಿಗೆ ಹೆಚ್ಚು ಪದ್ಮಶ್ರೀ ಪ್ರಶಸ್ತಿ
ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಅಲ್ಪಸಂಖ್ಯಾತ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಮೂಲಕ ಪದ್ಮಶ್ರೀ ಪ್ರಶಸ್ತಿಯ ಪರಿಕಲ್ಪನೆಯು ಹೆಚ್ಚು ಗಮನ ಸೆಳೆದಿತ್ತು. ಕಳೆದ ಬಾರಿ ಕಲಾವಿದರು, ಸಮಾಜ ಸೇವಕರು, ಸಂಗೀತಗಾರರು, ಕ್ರೀಡಾಪಟುಗಳು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಸೇರಿದಂತೆ ಅನೇಕ ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ