ಪ್ರಪೋಸ್ ಮಾಡಿ ಮದುವೆ ಆಗು ಎಂದರೆ ಆಗಲ್ಲ ಎಂದ! ಮನನೊಂದು ನೇಣಿಗೆ ಶರಣಾದ 16ರ ಯುವತಿ!

ಯುವಕ ಮನೋಜ್ ಕುಮಾರ್​ ಎಂಬಾತನನ್ನು ಅಮ್ರೋಹ್​ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 16 ವರ್ಷ ಪ್ರಾಯದ ಯುವತಿ ಮದುವೆ ಪ್ರಸ್ತಾಪವನ್ನು ಮನೋಜ್​ ಕುಮಾರ್​ ತಿರಸ್ಕರಿಸಿದ ಎಂಬ ಕಾರಣಕ್ಕೆ ಆಕೆ ಆತ್ಮಹತ್ಯೆ (Suicide) ಮೂಲಕ ಬದುಕು ಕೊನೆಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ.

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

  • Share this:
    Girl Suicide: ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬಳು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಅಮ್ರೋಹಾ ಜಿಲ್ಲಿಯಲ್ಲಿ ನಡೆದಿದೆ. ಮನಸಾರೆ ಇಷ್ಟಪಟ್ಟ ಯುವಕ ಮದುವೆಗೆ ಒಪ್ಪಿಲ್ಲವೆಂದು 16 ವರ್ಷ ಪ್ರಾಯದಾಕೆ ಸಾವಿನತ್ತ ಮುಖಮಾಡಿದ್ದಾಳೆ. ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಯುವಕ ಮನೋಜ್ ಕುಮಾರ್​ ಎಂಬಾತನನ್ನು ಅಮ್ರೋಹ್​ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 16 ವರ್ಷ ಪ್ರಾಯದ ಯುವತಿ ಮದುವೆ ಪ್ರಸ್ತಾಪವನ್ನು ಮನೋಜ್​ ಕುಮಾರ್​ ತಿರಸ್ಕರಿಸಿದ ಎಂಬ ಕಾರಣಕ್ಕೆ ಆಕೆ ಆತ್ಮಹತ್ಯೆ ಮೂಲಕ ಬದುಕು ಕೊನೆಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ.

    ಮೊದಲಿಗೆ ಮನೋಜ್ ಕುಮಾರ್​ ಬಳಿ ಯುವತಿ ತನನ್ನು ವಿವಾಹವಾಗುದರ ಬಗ್ಗೆ ಕೇಳಿದ್ದಾಳೆ. ಆದರೆ ಇದಕ್ಕೆ ಮನೋಜ್​ ಒಪ್ಪಿಗೆ ಸೂಚಿಸಿಲ್ಲ. ಈ ವೇಳೆ ಬೇಸರಗೊಂಡ ಆಕೆ ನಾನು ಆತ್ಮಹತ್ಯೆ ಮಾಡುತ್ತೇನೆಂದು ಹೇಳಿದ್ದಾಳೆ. ಅದಕ್ಕೆ ಮನೋಜ್​ ಕುಮಾರ್​ ‘‘ನಿನಗೆ ಬೇಕಾದನ್ನು ಮಾಡು‘’ ಎಂದು ಉತ್ತರಿಸಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    Read Also- Facebook: ರೇ-ಬನ್ ಜೊತೆಗೂಡಿ ಸ್ಮಾರ್ಟ್​ಗ್ಲಾಸ್ ಪರಿಚಯಿಸಲಿರುವ ಫೇಸ್​ಬುಕ್; ಏನಿದರೆ ವಿಶೇಷತೆ?

    ಪೊಲೀಸರು ಮಾಹಿತಿಯಂತೆ, ಯುವತಿ ಮನೋಜ್​ ಕುಮಾರ್​ನ ಬಳಿ ತನನ್ನು ವಿವಾಹವಾಗು ಎಂದು ಒತ್ತಡಹಾಕುತ್ತಿದ್ದಳು ಎಂದು ಹೇಳಿದ್ದಾರೆ.

    ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಪೂನಂ ಈ ಬಗ್ಗೆ ಮಾತನಾಡಿ "ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ದರಿಯಾಪುರ ಗ್ರಾಮದ ನಿವಾಸಿ ಮನೋಜ್ ಕುಮಾರ್ ನನ್ನು ನಾವು ಬಂಧಿಸಿದ್ದೇವೆ. ಯುವತಿ ಯೊಂದಿಗೆ ತನಗೆ ಉತ್ತಮ ಸಂಬಂಧವಿದೆ ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ಆದಾಗ್ಯೂ, ಅವಳು ಮದುವೆಗೆ ಒತ್ತಡ ಹೇರುತ್ತಿದ್ದಳು. ಸೆಪ್ಟೆಂಬರ್ 4 ರಂದು ನನಗೆ ಪ್ರೇಮ ನಿವೇದನೆ (Propose) ಮಾಡಿದಳು. ಮನೋಜ್​ ಅದಕ್ಕೆ ಒಪ್ಪಿಗೆ ಸೂಚಿಸದಕ್ಕೆ ಆತ್ಮಹತಯೆ ಮಾಡಿಕೊಂಡಿದ್ದಾಳೆ.

    ಮೃತನ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಯುವತಿ ನೇಣಿಗೆ ಶರಣಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

    ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ 6 ವರ್ಷದ ಯವತಿ ಶುಕ್ರವಾರದಂದು ನಾಪತ್ತೆಯಾಗಿದ್ದಳು. ಟ್ಯೂಷನ್ ಗೆ ಹೋಗುತ್ತಿದ್ದಾಕೆ ಶುಕ್ರವಾರದಂದು ಮನೆಗೆ ಹಿಂತಿರುಗಿರಲಿಲ್ಲ. ನಂತರ ಆಕೆಯನ್ನು ಹುಡುಕಾಡಿದಾಗ ಮರದ ಬಳಿ ಆಕೆಯ ಸೈಕಲ್ ನಿಲ್ಲಿಸಿರುವುದು ಗೊತ್ತಾಗಿದೆ. ಅಲ್ಲೇ ಇದ್ದ ಮರಕ್ಕೆ ನೇಣು ಹಾಕುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    Read Also- Tea: ಆರೋಗ್ಯಕರ ತೂಕ ಹೆಚ್ಚಳಕ್ಕಾಗಿ 6 ವಿಧದ ಚಹಾ ಇಲ್ಲಿದೆ

    ಸದ್ಯ ಪೊಲೀಸರು ಯುವಕಕನ್ನು ಬಂಧಿಸಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಯುವಕ ಹೇಳಿದಂತೆ ಆಕೆ ಪ್ರೊಪೋಸ್​ ಮಾಡಿದ್ದನ್ನು ತಿರಸ್ಕರಿಸಿದ್ದು, ಮತ್ತು ವಿವಾಹ ವಾಗುವ ವಿಚಾರವನ್ನು ತಲ್ಲಿಹಾಕಿದ್ದು ಯುವತಿಯ ಆತ್ಮಹ್ಯತೆಗೆ ಪ್ರಮುಖ ಕಾರಣವಾಗಿದೆ.
    Published by:Harshith AS
    First published: