Assembly Election2021: ಅಸ್ಸಾಂ-ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭ; ಜನ ತಮ್ಮ ಹಕ್ಕು ಚಲಾಯಿಸಲು ಮೋದಿ ಕರೆ
ಕೆಲವು ಸೂಕ್ಷ್ಮ ವಲಯಗಳಲ್ಲಿ ಹಿಂಸಾಚಾರದ ಭಯದ ನಡುವೆಯೂ ಮತದಾರರು ಹಲವಾರು ಪ್ರದೇಶಗಳಲ್ಲಿ ಮತದಾನ ಮಾಡಲು ಸರದಿಯಲ್ಲಿ ನಿಂತಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.54 ಕೋಟಿಗೂ ಹೆಚ್ಚು ಮತದಾರರು ಇಂದು ಸಿದ್ಧರಾಗಿದ್ದರೆ.
ಪಶ್ಚಿಮ ಬಂಗಾಳದಲ್ಲಿ ಸಾಲಾಗಿ ನಿಂತು ಮತ ಚಲಾಯಿಸುತ್ತಿರುವ ಮತದಾರರು.
ನವ ದೆಹಲಿ (ಮಾರ್ಚ್ 27); ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇಂದಿನಿಂದ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಬೆಳಗ್ಗೆ 7 ರಿಂದಲೇ ಮತದಾನ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಹೊರಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಕರೆ ನೀಡಿದ್ದಾರೆ. ಕೆಲವು ಸೂಕ್ಷ್ಮ ವಲಯಗಳಲ್ಲಿ ಹಿಂಸಾಚಾರದ ಭಯದ ನಡುವೆಯೂ ಮತದಾರರು ಹಲವಾರು ಪ್ರದೇಶಗಳಲ್ಲಿ ಮತದಾನ ಮಾಡಲು ಸರದಿಯಲ್ಲಿ ನಿಂತಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.54 ಕೋಟಿಗೂ ಹೆಚ್ಚು ಮತದಾರರು ಇಂದು ಸಿದ್ಧರಾಗಿದ್ದರೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ 730 ಅರೆಸೈನಿಕ ಪಡೆಗಳ ತುಕಡಿಯನ್ನು ನೇಮಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಪೂರ್ವ ರಾಜ್ಯಗಳು ಹಾಗೂ ಬಂಗಾಳದ ನಕ್ಸಲ್ ಪೀಡಿತ ಪ್ರದೇಶವಾದ ‘ಜಂಗಲ್ಮಹಲ್’ ಪ್ರದೇಶವು ಈ ಬಾರಿ ಬಿಜೆಪಿ ಪಾಲಾಗಲಿದೆ ಎನ್ನಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇಂದು 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ 30 ಕ್ಷೇತ್ರಗಳೂ ಜಂಗಲ್ಮಹಲ್ ಪ್ರದೇಶದಲ್ಲಿರುವುದು ಇಂತಹ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಇಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ನೇರ ಹಣಾಹಣಿ ಇದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪ್ರದೇಶದ ಹೆಚ್ಚಿನ ಸಂಸದೀಯ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರಿಂದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಪಕ್ಷದ ಉನ್ನತ ಮೂಲಗಳು ಭಾವಿಸಿದೆ ಎನ್ನಲಾಗುತ್ತಿದೆ.
ಮಾಹಿತಿಯ ಪ್ರಕಾರ, 92 ಅರೆಸೈನಿಕ ಪಡೆಗಳನ್ನು ಚುನಾವಣೆಗಾಗಿ ನೇಮಕ ಮಾಡಲಾಗಿದೆ. ಸೂಕ್ಷ್ಮ ಪ್ರದೇಶವಾದ ಬಂಕುರಾದಲ್ಲಿ 4, ಜರ್ಗ್ರಾಮ್ನಲ್ಲಿ 144, ಪಶ್ಚಿಮ ಮಿಡ್ನಾಪೋರ್ನಲ್ಲಿ 139, ಪೂರ್ವ ಮಿಡ್ನಾಪೋರ್ನಲ್ಲಿ 169 ಮತ್ತು ಪುರುಲಿಯಾದಲ್ಲಿ 186 ಅರೆಸೇನಾ ತುಕಡಿಯನ್ನು ನಿಯೋಜಿಸಲಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ