News18 India World Cup 2019

ಪಾಕಿಸ್ತಾನದಲ್ಲೂ ತೆರೆ ಕಂಡಿದೆ 'ಕೆ.ಜಿ.ಎಫ್​': ನೆರೆ ರಾಷ್ಟ್ರದಲ್ಲೂ ರಾಕಿ ಭಾಯ್​ ಹವಾ ಶುರು..!

ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಆರಂಭವಾಗಿದೆ ರಾಕಿಭಾಯ್​ ಹವಾ... ಪ್ರಶಾಂತ್​ ನೀಲ್​ ನಿರ್ದೇಶನದ ಹಾಗೂ ಯಶ್​ ಅಭಿನಯದ 'ಕೆ.ಜಿ.ಎಫ್​' ಸಿನಿಮಾ ಈಗ ಪಾಕಿಸ್ತಾನದ ರಾಜಧಾನಿ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ತೆರೆಕಂಡಿದೆ.

Anitha E | news18
Updated:January 11, 2019, 4:04 PM IST
ಪಾಕಿಸ್ತಾನದಲ್ಲೂ ತೆರೆ ಕಂಡಿದೆ 'ಕೆ.ಜಿ.ಎಫ್​': ನೆರೆ ರಾಷ್ಟ್ರದಲ್ಲೂ ರಾಕಿ ಭಾಯ್​ ಹವಾ ಶುರು..!
ಪಾಕಿಸ್ತಾನದಲ್ಲೂ ತೆರೆ ಕಂಡಿದೆ ಕನ್ನಡದ 'ಕೆ.ಜಿ.ಎಫ್​'
Anitha E | news18
Updated: January 11, 2019, 4:04 PM IST
-ಅನಿತಾ ಈ, 

'ಬಾಹುಬಲಿ' ನಂತರ  ಭಾರತೀಯ ಸಿನಿ ರಂಗ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ  ಮಾಡಿದ್ದು ಚಂದನವನದ 'ಕೆ.ಜಿ,ಎಫ್'​.  ಹೌದು, ಇಲ್ಲಿ ಎರಡೂ ಸಿನಿಮಾಗಳನ್ನು ಹೋಲಿಕೆ ಮಾಡುತ್ತಿಲ್ಲ. ಆದರೆ ಈ ಎರಡೂ ಸಿನಿಮಾಗಳು ದಕ್ಷಿಣ ಭಾರತೀಯ ಸಿನಿ ರಂಗದ ಹೆಸರನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ ಎಂದು ಮಾತ್ರ ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?

'ಬಾಹುಬಲಿ'ಗೆ ವಿಶ್ವದೆಲ್ಲೆಡೆ ಮನ್ನಣೆ ಸಿಕ್ಕಂತೆ ಈಗ ಕನ್ನಡದ 'ಕೆ.ಜಿ.ಎಫ್​' ಸಿನಿಮಾಗೂ ನಾನಾ ರಾಷ್ಟ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಕನ್ನಡದ 'ಕೆ.ಜಿ.ಎಫ್​'ನ ಹಿಂದಿ ವರ್ಷನ್​ ಸಿನಿಮಾ ಪಾಕಿಸ್ತಾನದಲ್ಲೂ ಸದ್ದು ಮಾಡೋಕೆ ಆರಂಭಿಸಿದೆ.

ಲಾಹೋರ್​ನಲ್ಲಿ 'ಕೆ.ಜಿ.ಎಫ್​' ಸಿನಿಮಾ ಪ್ರದರ್ಶನದ ವಿವರ


ಕನ್ನಡ ರಾಕಿ ಭಾಯ್​ ಕ್ರೇಜ್​ ಈಗ ಪಾಕಿಸ್ತಾನಿಗಳನ್ನೂ ಬಿಟ್ಟಿಲ್ಲ. ಅದಕ್ಕೆ ಅವರೂ ಸಹ ಈಗ ರಾಕಿ ಭಾಯ್​ಗೆ ಸಲಾಂ ಎನ್ನುತ್ತಿದ್ದಾರೆ. ಹೌದು, ಪಾಕಿಸ್ತಾನದ ಇಸ್ಲಾಮಾಬಾದ್​ ಕ್ಲಬ್​ ಸಿನೆಮಾಸ್​, ಲಾಹೋರ್​ನ ಎಂಪೋರಿಯಂ ಮಾಲ್​ನ ಯೂನಿವರ್ಸಲ್​ ಸಿನೆಮಾಸ್, ಇಂಪಿರೀಯಲ್​ ಸಿನೆಮಾಸ್​, ಸಿನೆ ಸ್ಟಾರ್​ ಟೌನ್​ಶಿಪ್​, ಸಿನೆಸ್ಟಾರ್​ ಎಟಿಸಿ, ಕ್ಷಿನ್ವಾ ಮಾಲ್​ನ ಸಿನೆ ಸ್ಟಾರ್​, ಪಶ್ಚಿಮ ಪಂಜಾಬ್​ನ ಮುಲ್ತಾನ್​ ನಗರದ​ ಸಿನೆಸ್ಟಾರ್​, ರಾವಲ್​ಪಿಂಡಿಯಲ್ಲಿ ಒಡಿಯನ್​ ಸಿನೆಪ್ಲೆಕ್ಸ್​ನಲ್ಲಿ 'ಕೆ.ಜಿ.ಎಫ್'​ನ ಹಿಂದಿ ವರ್ಷನ್​ ರಾರಾಜಿಸುತ್ತಿದೆ.
Loading...

ಇದನ್ನೂ ಓದಿ: ಯಶ್​ ಹುಟ್ಟುಹಬ್ಬ: ನೆಚ್ಚಿನ ನಟನ ಮನೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಸ್ಥಿತಿ ಚಿಂತಾಜನಕ

ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳದ್ದೇ ಸದ್ದು ಹೆಚ್ಚು, ಆದರೆ ಈ ಬಾರಿ ಇಂಗ್ಲಿಷ್​ ಹಾಗೂ ಹಿಂದಿ ಸಿನಿಮಾಗಳ ಜತೆಗೆ ಕನ್ನಡದ ಸಿನಿಮಾ ಸಹ ಭಾರತದ ಗಡಿ ದಾಟಿ ಪಾಕಿಸ್ತಾನ ತಲುಪಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯವೆ. ಇದಕ್ಕೆಲ್ಲ ಕಾರಣ ಅಂದರೆ 'ಕೆ.ಜಿ.ಎಫ್​' ಸಿನಿಮಾದ ನಿಜವಾದ ಹೀರೋ ನಿರ್ದೇಶಕ ಪ್ರಶಾಂತ್​ ನೀಲ್​.

ಕೋಲಾರ್​ ಗೋಲ್ಡ್​ ಫೀಲ್ಡ್​ನಿಂದ ಬಂದ ಕನ್ನಡದ ಚಿನ್ನದಂತ ಸಿನಿಮಾ 'ಕೆ.ಜಿಎಫ್​' ಈಗಾಗಲೇ ಹೊಸ ದಾಖಲೆಗಳನ್ನು ಬರೆದಿದ್ದು, ಕನ್ನಡದಲ್ಲೇ ನೂರು ಕೋಟಿಯ ಗಡಿ ದಾಟಿ, ವಿಶ್ವದಾದ್ಯಂತ 200 ಕೋಟಿ ಗಳಿಸಿರುವ ಚಂದನವನದ ಏಕೈಕ ಚಿತ್ರವಾಗಿದೆ.

PHOTOS: ಪಾಕಿಸ್ತಾನದಲ್ಲಿ ಎಲ್ಲೆಲ್ಲಿ ಹೇಗಿದೆ ಗೊತ್ತಾ 'ಕೆ.ಜಿ.ಎಫ್'​ ಹವಾ: ಇಲ್ಲಿವೆ ಕೆಲವು ಚಿತ್ರಗಳು..!'ಕೆ.ಜಿ.ಎಫ್​' ನಟ ಯಶ್​ ಐಟಿ ಅಧಿಕಾರಿಗಳು ನಡೆಸಿದ ವಿಚಾರಣೆ ನಂತರ ಮಾತನಾಡಿದ್ದೇನು ಗೊತ್ತಾ..?

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...