ಕರೊನಾ ವೈರಸ್​ಗೆ ತುತ್ತಾಗಿರುವ ಚೀನಾದಲ್ಲಿರುವ ಭಾರತೀಯ ಮಹಿಳೆ; ಸಹಾಯದ ನಿರೀಕ್ಷೆಯಲ್ಲಿ...

ಶೆನ್ಜೆನ್​ನ ಇಂಟರ್​ನ್ಯಾಷನಲ್​ ಸ್ಕೂಲ್​ ಆಫ್​​ ಸೈನ್ಸ್​ ಅಂಡ್​ ಟೆಕ್ನಾಲಜಿಯಲ್ಲಿ ಪ್ರಾಥಮಿಕ ಕಲಾ ಶಾಲಾ ಶಿಕ್ಷಕಿಯಾಗಿ ಮಹೇಶ್ವರಿ ಕಾರ್ಯನಿರ್ವಹಿಸುತ್ತಿದ್ದಾರೆ, ಕರೊನಾ ವೈರಸ್​ನ ನ್ಯೋಮೊನಿಯಾದಿಂದ ಅವರು ಬಳಲುತ್ತಿದ್ದು, ಮೊದಲ ಹಂತದ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದು, ಅಂಗಾಂಗ ಕಾರ್ಯವೈಫಲ್ಯತೆ ಮತ್ತು ಸೆಫ್ಟಿಕ್​ ಶಾಕ್​ಗೆ ಅವರು ಒಳಗಾಗಿದ್ದಾರೆ.

news18-kannada
Updated:January 25, 2020, 12:28 PM IST
ಕರೊನಾ ವೈರಸ್​ಗೆ ತುತ್ತಾಗಿರುವ ಚೀನಾದಲ್ಲಿರುವ ಭಾರತೀಯ ಮಹಿಳೆ; ಸಹಾಯದ ನಿರೀಕ್ಷೆಯಲ್ಲಿ...
ಕರೊನಾ ವೈರಸ್​ಗೆ ತುತ್ತಾಗಿರುವ ಮಹಿಳೆ
  • Share this:
ನವದೆಹಲಿ (ಜ.25): ಚೀನಾದಲ್ಲಿ ಆಂತಕ ಮೂಡಿಸಿರುವ ಕರೊನಾ ವೈರಸ್​ಗೆ ಭಾರತೀಯ ಮಹಿಳೆಯೊಬ್ಬರು ತುತ್ತಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿರುವ ಅವರು  ವೈದ್ಯಕೀಯ ಚಿಕಿತ್ಸೆಯ ವೆಚ್ಚದ ನಿರೀಕ್ಷೆಯಲ್ಲಿದ್ದಾರೆ.

ಪ್ರೀತಿ ಮಹೇಶ್ವರಿ ಕರೊನಾ ವೈರಸ್​ಗೆ ತುತ್ತಾಗಿರುವ ಮಹಿಳೆ. ಚೀನಾದಲ್ಲಿ ಶಿಕ್ಷಕಿಯಾಗಿರುವ ಈಕೆ ವೈರಸ್​ನಿಂದ ಸೋಂಕಿಗೀಡಾಗಿದ್ದು, ಚಿಕಿತ್ಸೆಗೆ 1 ಕೋಟಿ ನಿರೀಕ್ಷೆಯಲ್ಲಿದ್ದಾರೆ. ಪ್ರೀತಿಯ ಸಹೋದಯ ಬೆಂಗಳೂರಿನ ಅಮೇಜಾನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಕಿತ್ಸೆ ವೆಚ್ಚಕ್ಕಾಗಿ ಬೀಜಿಂಗ್​ನಲ್ಲಿರು ಭಾರತದ ರಾಯಭಾರಿ ಕಚೇರಿ ಬಾಗಿಲು ತಟ್ಟಿದ್ದಾರೆ. ಇದರ ಜೊತೆಗೆ ಭಾರತದಲ್ಲಿ ಆರೋಗ್ಯ ಸಹಾಯಕ್ಕಾಗಿ ಕ್ರೌಡ್​ ಫಂಡಿಂಗ್​ ಮೊರೆ ಕೂಡ ಹೋಗಿದ್ದಾರೆ.

ಶೆನ್ಜೆನ್​ನ ಇಂಟರ್​ನ್ಯಾಷನಲ್​ ಸ್ಕೂಲ್​ ಆಫ್​​ ಸೈನ್ಸ್​ ಅಂಡ್​ ಟೆಕ್ನಾಲಜಿಯಲ್ಲಿ ಪ್ರಾಥಮಿಕ ಕಲಾ ಶಾಲಾ ಶಿಕ್ಷಕಿಯಾಗಿ ಮಹೇಶ್ವರಿ ಕಾರ್ಯನಿರ್ವಹಿಸುತ್ತಿದ್ದಾರೆ, ಕರೊನಾ ವೈರಸ್​ನ ನ್ಯೋಮೊನಿಯಾದಿಂದ ಅವರು ಬಳಲುತ್ತಿದ್ದು, ಮೊದಲ ಹಂತದ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದು, ಅಂಗಾಂಗ ಕಾರ್ಯವೈಫಲ್ಯತೆ ಮತ್ತು ಸೆಫ್ಟಿಕ್​ ಶಾಕ್​ಗೆ ಅವರು ಒಳಗಾಗಿದ್ದಾರೆ.

ಶೆನ್ಜೆನ್​ ಶೆಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ವೆಂಟಿಲೇಟರ್​ ಸಹಾಯದಿಂದ ಉಸಿರಾಡುತ್ತಿದ್ದಾರೆ.

ಜ.11ರಂದು ಆಸ್ಪತ್ರೆಗೆ ದಾಖಲಾದ ಇವರ ಚಿಕಿತ್ಸೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ಅವರ ಚಿಕಿತ್ಸೆಗೆ ಚೀನಾದಲ್ಲಿ 10 ಲಕ್ಷ ಯೂನೊ (1 ಕೋಟಿ ರೂ) ತಗುಲುತ್ತಿದೆ. ಇದಕ್ಕಾಗಿ ImpactGuru.com. ಮೂಲಕ ಕ್ರೌಡ್​ ಫಂಡಿಂಗ್​ ಮೊರೆ ಹೋಗಿದ್ದಾರೆ. ಪ್ರೀತಿ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ವೆಚ್ಚ ಕುಟುಂಬದ ಸಾಮಾರ್ಥ್ಯಕ್ಕಿಂತ ಅಧಿಕವಿದೆ ಎಂದು ತಾಪ ತಿಳಿಸಿದ್ದಾರೆ.

ImpactGuru.com. ಮೂಲಕ 15.27 ಲಕ್ಷ ಹಣ ಸಂಗ್ರಹ ಮಾಡಲಾಗಿದೆ. ಇನ್ನು ಚಿಕಿತ್ಸೆಗೆ ಪ್ರೀತಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಅವರ ಹೃದಯ ಬಡಿತ ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಕೂಡ ಅವರ ಸ್ಥಿತಿ ಗಂಭೀರವಾಗಿದ್ದು, ಗುಣಮುಖರಾಗಲು ದೀರ್ಘ ಸಮಯ ಬೇಕು. ಅಗತ್ಯ ಬಿದ್ದಲ್ಲಿ ಅವರನ್ನು ಚಿಕಿತ್ಸೆಗೆ ಭಾರತಕ್ಕೆ ಕರೆತರಲು ಕುಟುಂಬ ಚಿಂತಿಸುತ್ತಿದೆ

ಇದನ್ನು ಓದಿ: ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆಚೀನಾದಲ್ಲಿ ಹರಡಿರುವ ಕರೊನಾ ವೈರಸ್​ಗೆ ಭಾರತೀಯರು ತುತ್ತಾಗಿದ್ದಾರಾ ಎಂಬುದನ್ನು ತಿಳಿಯಲು ಎರಡು ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ, ಚೀನಾದಲ್ಲಿರುವ ಭಾರತೀಯ ಸಂಬಂಧಿಗಳೊಂದಿಗೆ ಬೀಜಿಂಗ್​ ಕಚೇರಿ ಸಂಪರ್ಕಿಸುತ್ತಿದೆ
First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ