ಡೌನ್​​ ಸಿಂಡ್ರೋಮ್​​ನಿಂದ ಬಳಲುತ್ತಿದ್ದ ಮಗು ದತ್ತು ಪಡೆದ ಭಾರತದ ಮೊದಲ ದಂಪತಿ: 4 ವರ್ಷದ ಬಾಲೆ ಬೆಳವಣಿಗೆ ಬಗ್ಗೆ ಹೇಳಿದ್ದೇನು?

ಗಾಜಿಯಾಬಾದ್​​ ನಿವಾಸಿಯೊಬ್ಬರ ಮುಗುವಾದ ವೇದಾಳನ್ನು ಈ ದಂಪತಿಯೇ ಬೆಳಸತೊಡಗಿತು. ಈ ಮಗುವಿಗೀಗ 4 ವರ್ಷ. ಬೆಳವಣಿಗೆ ಕೊರತೆಯಿಂದ ಬಳಲುತ್ತಿದ್ದ ಈ ಮಗುವನ್ನು ಉತ್ಸಾಹದಿಂದ ಬೆಳೆಸುತ್ತಿರುವ ಈ ದಂಪತಿಗಳಿಗೆ ಸಾಮಾಜಿಕ ಜಾಲತಾಣದಲ್ಲೀ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಭಾರೀ ಸಂಸತ ವ್ಯಕ್ತಪಡಿಸಿದ್ಧಾರೆ.

news18-kannada
Updated:May 31, 2020, 1:51 PM IST
ಡೌನ್​​ ಸಿಂಡ್ರೋಮ್​​ನಿಂದ ಬಳಲುತ್ತಿದ್ದ ಮಗು ದತ್ತು ಪಡೆದ ಭಾರತದ ಮೊದಲ ದಂಪತಿ: 4 ವರ್ಷದ ಬಾಲೆ ಬೆಳವಣಿಗೆ ಬಗ್ಗೆ ಹೇಳಿದ್ದೇನು?
ನ್ಯೂನತೆ ಇದ್ದ ಮಗುವನ್ನು ದತ್ತು ಪಡೆದಿದ್ದ ದಂಪತಿ ಕವಿತಾ ಮತ್ತು ಹಿಮಾಂಶು
  • Share this:
ನವದೆಹಲಿ(ಮೇ.31): ಬೆಳವಣಿಗೆ ಕೊರತೆಯ ಡೌನ್​​ ಸಿಂಡ್ರೋಮ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಮಗುವೊಂದನ್ನು ದತ್ತು ಪಡೆದು ಬೆಳೆಸುತ್ತಿರುವ ಭಾರತದ ಮೊದಲ ದಂಪತಿ ಎಂಬ ಮೆಚ್ಚುಗೆಗೆ ಪಾತ್ರರಾದವರು. ಈ ದಂಪತಿ ಹಸೆರು ಹಿಮಾಂಶು ಮತ್ತು ಕವಿತಾ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

ಉತ್ತರ ಪ್ರದೇಶ ಮೂಲದ ಈ ದಂಪತಿ ವಿವಾಹವಾಗಿದ್ದು 2012ರಲ್ಲಿ. ಇವರು ವಿವಾಹದ ಬಳಿಕ ಒಂದು ಮಗುವನ್ನು ದತ್ತು ಪಡೆಯಬೇಕೆಂಬ ಉದ್ದೇಶ ಹೊಂದಿದ್ದರು. ಮದುವೆಯಾದ ಸುಮಾರು 4 ವರ್ಷಗಳ ಬಳಿಕ 2017ರಲ್ಲಿ ಗಾಜಿಯಾಬಾದ್​ನಲ್ಲಿ 16 ತಿಂಗಳ ಮಗುವೊಂದನ್ನು ದತ್ತು ಪಡೆದರು. ಆ ಮಗು ಹೆಸರು ವೇದಾ.
 View this post on Instagram
 

Your child is so “lucky” to get adopted. You have done an amazing job by adopting her. . 🖐🏻Please, STOP calling or telling children who got adopted that they are “LUCKY”. . 🔸Every child deserves a home, parents and safe environment to grow. . 🔸We are not saviours here. . 🔸Children who get adopted don’t have to feel grateful or lucky. —————————————————————————— Adoption will be a taboo in India till the time people will sympathise with kids who get adopted by calling them “lucky” and expect them to be “grateful” for that. That’s WRONG.. . Going through trauma or difficult times at the early age, without parents when you need them the most doesn’t make them “lucky”, NEITHER getting in a family. . 💗We are the lucky ones, we are grateful that she chose us as her parents and it’s our privilege to be her parents. . So next time tell parents that their child is strong, beautiful, courageous, brave, anything but “LUCKY”. . #LetsLearnAboutAdoption . . . . . . #changingperceptions #breakingthestigma #adoptionawareness #meetthedetermined #wecouldhavemissedthis #lovemakesafamily #extrachromieveda #adoptivemom #adoptionislove #theluckyfew #meetthedetermined #extrachromosome #blessedwiththebest #trisomy21 #diversityandinclusion #adoptionisbeautiful #morealikethandifferent #adoptionislove #motherhoodintheraw #downsyndromeadoption #downsyndromeawareness #adoptionrocks #changingthefaceofbeauty #breakingstereotypes #specialneedsadoption #thisismotherhood #downrightperfect #upsyndrome #wouldntchangeathing


A post shared by Kavita Baluni (@extrachromieveda) on


ಗಾಜಿಯಾಬಾದ್​​ ನಿವಾಸಿಯೊಬ್ಬರ ಮುಗುವಾದ ವೇದಾಳನ್ನು ಈ ದಂಪತಿಯೇ ಬೆಳಸತೊಡಗಿತು. ಈ ಮಗುವಿಗೀಗ 4 ವರ್ಷ. ಬೆಳವಣಿಗೆ ಕೊರತೆಯಿಂದ ಬಳಲುತ್ತಿದ್ದ ಈ ಮಗುವನ್ನು ಉತ್ಸಾಹದಿಂದ ಬೆಳೆಸುತ್ತಿರುವ ಈ ದಂಪತಿಗಳಿಗೆ ಸಾಮಾಜಿಕ ಜಾಲತಾಣದಲ್ಲೀ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಭಾರೀ ಸಂಸತ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: Mann ki Baat: ಕೋವಿಡ್​​-19 ವಿರುದ್ಧ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರ ಪಾತ್ರವಿದೆ - ಪ್ರಧಾನಿ ನರೇಂದ್ರ ಮೋದಿ

ಇನ್ನು, ವೇದಾಳ ಬೆಳವಣಿಗೆ ಬಗ್ಗೆ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಕವಿತಾ, ನಾನು ಬಾಲ್ಯದಿಂದಲೂ ಬೀದಿ ಬದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳ ಅಸಹಾಯಕತೆ ಕಂಡು ನಾನು ಮರುಕ ಪಡುತ್ತಿದ್ದೆ. ಆಗ ನಾನು ಇಂತಹ ಮಕ್ಕಳನ್ನು ದತ್ತು ಪಡೆದು ಮರುಜೀವ ನೀಡಬೇಕೆಂದು ಬಯಸಿದೆ. ಈಗ ವೇದಾಳನ್ನು ದತ್ತು ತೆಗೆದುಕೊಂಡ ನಂತರ ನಮಗೆ ಈಕೆ ಮರುಜನ್ಮ ನೀಡಿದ್ಧಾಳೆ ಎಂದು ಸಂತಸ ವ್ಯಕ್ತಪಡಿಸಿದ್ಧಾರೆ.

ಇನ್ನು, ಈ ರೀತಿ ಅಂಗಾಂಗ ದೋಷವಿರುವ ಮಕ್ಕಳಲ್ಲಿ ಸ್ನಾಯುಗಳ ಬೆಳವಣಿಗೆ ಬಹಳ ನಿಧಾನವಿರುತ್ತದೆ. ಸದ್ಯ ವೇದಾ ವಿಶೇಷ ಥೆರಪಿಗಳನ್ನು ಕೊಡಿಸುತ್ತಿದ್ದೇವೆ. ಶೀಘ್ರವೇ ಎಲ್ಲ ಮಕ್ಕಳಂತೆ ತಾನೂ ಸಾಮಾನ್ಯ ಬೆಳವಣಿಗೆಯ ಹಾದಿಗೆ ಮರಳುವ ಆಶಯವಿದೆ ಎಂದು ಕವಿತಾ ಹೇಳಿಕೊಂಡಿದ್ದಾರೆ.

ವೇದಾ ಈಕೆಯ ನೂನ್ಯತೆ ನಡುವೆಯೇ ನಮಗೆ ಸಂತೋಷ ಹಂಚುತ್ತಿದ್ದಾಳೆ. ಎಲ್ಲರಂತೆ ಅಲ್ಲದೇ ವಿಭಿನ್ನವಾಗಿ ಆಟವಾಡುತ್ತಾಳೆ. ಆಕೆಗೆ ಏನು ಅನಿಸುತ್ತದೋ ಅದನ್ನು ಮಾಡಿ ನಮನ್ನು ಸಂತೋಷ ಪಡಿಸುತ್ತಾಳೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
First published: May 31, 2020, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading