‘ಮಹಿಳೆಯರಿಗೆ ತಾಲಿಬಾನ್ ಅಧಿಕ ನೋವು ನೀಡಲಿದೆ’: ಅಫ್ಘಾನಿಸ್ತಾನ ವಾಯುಸೇನೆಯ ಪ್ರಥಮ ಮಹಿಳಾ ಪೈಲಟ್ 

ತಾಲಿಬಾನ್ ಹೆಂಗಸರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿಕೊಂಡಿದ್ದರೂ, ಅಫ್ಘಾನಿಸ್ತಾನ ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯವನ್ನು ತಾಲಿಬಾನ್ ಖಂಡಿತವಾಗಿಯೂ ಕಿತ್ತುಕೊಳ್ಳಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಅಫ್ಘಾನಿಸ್ತಾನ ವಾಯುಸೇನೆಯ ಪ್ರಥಮ ಮಹಿಳಾ ಪೈಲಟ್ 

ಅಫ್ಘಾನಿಸ್ತಾನ ವಾಯುಸೇನೆಯ ಪ್ರಥಮ ಮಹಿಳಾ ಪೈಲಟ್ 

  • Share this:

ಅಫ್ಘಾನಿಸ್ತಾನ ವಾಯುಸೇನೆಯ ಪ್ರಥಮ ಮಹಿಳಾ ಪೈಲಟ್ ನಿಲೂಫರ್ ರೆಹಮಾನಿ, ಇತ್ತೀಚೆಗೆ ತಾಲಿಬಾನ್ ದೇಶದಲ್ಲಿ ಮಹಿಳೆಯರ ಭದ್ರತೆಯ ಬಗ್ಗೆ ನೀಡಿರುವ ಭರವಸೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್ ದೇಶವನ್ನು ವಶಪಡಿಸಿಕೊಳುತ್ತಿದ್ದಂತೆ, ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಮತ್ತೆ ಅತ್ಯಂತ ಭಯಾನಕ ಸ್ಥಳವಾಗಲಿದೆ ಎಂದು ತಜ್ಞರು ಮತ್ತು ಕಾರ್ಯಕರ್ತರು ಹೇಳಿದ್ದಾರೆ. ಕಳೆದ ಕೆಲವು ವಾರಗಳಿಂದಲೇ ಅಲ್ಲಿ ಹಲವಾರು ಸಾವುನೋವುಗಳು ಹಾಗೂ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಇದೇ ಸಂದರ್ಭದಲ್ಲಿ, ಸಾವಿರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಮೇ ಅಂತ್ಯದವರೆಗೆ ಓಡಿ ಹೋಗಿರುವವರಲ್ಲಿ 80 ಶೇಕಡಾ ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ದ ಯುನೈಟೆಡ್ ನೇಶನ್ಸ್ ರೆಫ್ಯೂಜಿ ಏಜೆನ್ಸಿ ತಿಳಿಸಿದೆ.


ತಾಲಿಬಾನಿಗಳು ಷರಿಯಾ ಕಠಿಣ ವ್ಯಾಖ್ಯಾನವನ್ನು ಹೇರುತ್ತಾರೆ ಮತ್ತು ತಮಗೆ ಕೆಲಸಕ್ಕೆ ಹೋಗಲು ಹಾಗೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಬಿಡುವುದಿಲ್ಲ ಎಂದು ಹಲವಾರು ಮಹಿಳೆಯರು ಹೇಳಿದ್ದಾರೆ. 1996ರಿಂದ 2001ರವರೆಗಿನ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ತಾಲಿಬಾನಿಗಳು ಕ್ರೂರವಾದ ಕಾನೂನುಗಳನ್ನು ಹೇರಿದ್ದರು. ಮಹಿಳೆಯರು ಸಂಪೂರ್ಣವಾಗಿ ತಮ್ಮ ಮುಖ ಮುಚ್ಚಿಕೊಳ್ಳದೆ ಮತ್ತು ಪುರುಷ ಸಂಬಂಧಿ ಜೊತೆಗಿಲ್ಲದೆ ಮನೆಯಿಂದ ಹೊರಗೆ ಕಾಲಿಟ್ಟರೆ, ಅವರನ್ನು ತಾಲಿಬಾನಿ ಧಾರ್ಮಿಕ ಪೊಲೀಸರು ಸಾರ್ವಜನಿಕವಾಗಿ ಥಳಿಸುತ್ತಿದ್ದರು.


ತಾಲಿಬಾನ್ ಹೆಂಗಸರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿಕೊಂಡಿದ್ದರೂ, ಅಫ್ಘಾನಿಸ್ತಾನ ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯವನ್ನು ತಾಲಿಬಾನ್ ಖಂಡಿತವಾಗಿಯೂ ಕಿತ್ತುಕೊಳ್ಳಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ:Anand Singh: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್; ಅಧಿಕಾರ ಸ್ವೀಕಾರ

ಆದರೆ, ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್, ತಾಲಿಬಾನ್ ತಾನು ಸ್ವಾಧೀನಪಡಿಸಿಕೊಂಡ ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುತ್ತಿತ್ತು ಎಂದು ಹೇಳಿದ್ದಾರೆ.


ತಾಲಿಬಾನಿ ಹೋರಾಟಗಾರರು, ವಾರಾಂತ್ಯದಲ್ಲಿ, ವಿಶ್ವವಿದ್ಯಾನಿಲಯ ಪ್ರವೇಶಿಸಲು ಪ್ರಯತ್ನಸಿದ ಮಹಿಳೆಯರನ್ನು ತಡೆದ ಕುರಿತು ಹೆರಾತ್ ವರದಿ ಮಾಡಿರುವ ಬಗ್ಗೆ, ಶಾಹಿನ್ ಇಂತಹ ನಡವಳಿಕೆಯು ತಾಲಿಬಾನ್ ನೀತಿಯನ್ನು ಉಲ್ಲಂಘಿಸಿದೆ ಮತ್ತು ವೈಯುಕ್ತಿಕ ಆರೋಪಗಳನ್ನು ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ.


ಅಫ್ಘಾನಿಸ್ತಾನದ ಮೊದಲ ಮಹಿಳಾ ಪೈಲೆಟ್ ಆಗಿದ್ದ ರೆಹಮಾನಿ ಪ್ರಕಾರ, ತಾಲಿಬಾನಿಗಳು “ಮಹಿಳೆಯರಿಗೆ ಹೆಚ್ಚು ನೋವು ಕೊಡುತ್ತಾರೆ”, ತಾಲಿಮಾನಿಗಳು ಈಗ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳುವ ಬಗ್ಗೆ ರೆಹಮಾನಿಗೆ ಸಂದೇಹವಿದೆ.


ಫಾಕ್ಸ್ ನ್ಯೂಸ್ ಪ್ರಕಾರ, ತನ್ನ ವೃತ್ತಿಜೀವನ ಪ್ರತಿ ಹಂತದಲ್ಲೂ ಬೆಂಬಲ ನೀಡಿದ ಕಾರಣಕ್ಕಾಗಿ, ತನ್ನ ಕುಟುಂಬ ಹಾಗೂ ಹೆತ್ತವರು ತಾಲಿಬಾನಿಗಳ ಟಾರ್ಗೆಟ್‌ ಆಗಿದ್ದರು. 2001ರಲ್ಲಿ ತಾಲಿಬಾನಿಗಳ ಪತನದ ಬಳಿಕ, ಅಫ್ಘಾನಿಸ್ತಾನ ವಾಯುಪಡೆಯ ಮೊದಲ ಮಹಿಳಾ ಪೈಲೆಟ್ ಆಗಿದ್ದ ಅವರು, 2015ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕಕ್ಕೆ ಪರಾರಿಯಾಗಿದ್ದರು.


“ದುರಾದೃಷ್ಟವಶಾತ್ ನನ್ನ ಕುಟುಂಬ ಇನ್ನೂ ಅಲ್ಲೇ ಇದೆ. ಅಫ್ಘಾನಿಸ್ತಾನದಲ್ಲಿ ಏನಾಯಿತು ಎಂದು ತಿಳಿದ ಬಳಿಕ, ನನಗೆ ನಿದ್ರೆ ಮಾಡಲೂ ಸಾಧ್ಯವಾಗುತ್ತಿಲ್ಲ. ನನ್ನ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಭದ್ರತೆಯ ಬಗ್ಗೆ ನಾನು ತುಂಬಾ ಭಯಗೊಂಡಿದ್ದೇನೆ. ಇದು ಕೇವಲ ನನ್ನ ವಿಷಯ ಮಾತ್ರವಲ್ಲ” ಎಂದು 29 ವಯಸ್ಸಿನ ನಿಲೂಫರ್ ರೆಹಮಾನಿ ತಿಳಿಸಿದ್ದಾರೆ.


ಇದನ್ನೂ ಓದಿ:Drugs Case- ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ: ಎಫ್ಎಸ್ಎಲ್ ವರದಿಯಲ್ಲಿ ರಾಗಿಣಿ, ಸಂಜನಾ ಪಾಸಿಟಿವ್

ತಾನು ಪೈಲೆಟ್ ಆಗಿರುವುದಕ್ಕೆ ಮತ್ತು “ಅಫ್ಘಾನ್ ಮಹಿಳೆಯರ ಧ್ವನಿ” ಆಗಿರುವುದಕ್ಕೆ ರೆಹಮಾನಿಗೆ ಹೆಮ್ಮೆ ಇದೆ. ಸದ್ಯದ ಪರಿಸ್ಥಿತಿಯಿಂದ ಯಾರಾದರೂ ಅಫ್ಘಾನಿಸ್ತಾನವನ್ನು ಹೊರಗೆ ತಂದೇ ತರುತ್ತಾರೆ ಎಂಬ ಭರವಸೆ ಅವರಿಗಿದೆ.


ಅಸೋಸಿಯೇಟೆಡ್‌ ಪ್ರೆಸ್‍ನ ಇತ್ತೀಚಿನ ವರದಿಯ ಪ್ರಕಾರ, ತಾಲಿಬಾನ್ ಈಗ, ಶಿರ ವಸ್ತ್ರವನ್ನು ಧರಿಸಿ ಮಹಿಳೆಯರಿಗೆ ಮರಳಿ ಕೆಲಸಕ್ಕೆ ಹೋಗಲು ಮತ್ತು ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಪ್ರೋತ್ಸಾಹ ನೀಡುತ್ತಿದೆ. ಆದರೆ ಇದು ಎಲ್ಲಾ ಪ್ರಾಂತ್ಯಗಳಿಗೂ ಅನ್ವಯಿಸುವುದಿಲ್ಲ.
ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ, ತಮ್ಮ ಮನೆಯ ಹೆಣ್ಣು ಮಕ್ಕಳನ್ನು ತಾಲಿಬಾನ್ ಹೋರಾಟಗಾರರಿಗೆ ಮದುವೆ ಮಾಡಿಸಲು ಒಪ್ಪಿಸುವಂತೆ ಒತ್ತಾಯ ಹೇರುತ್ತಿರುವ ಸುದ್ದಿಗಳು ಕೂಡ ಇತ್ತೀಚೆಗೆ ವರದಿಯಾಗುತ್ತಿವೆ. ಆದರೆ ತಾಲಿಬಾನ್ ವಕ್ತಾರ ಮುಜಾಹಿದ್ ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿ ಹಾಕಿರುವುದನ್ನು ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

Published by:Latha CG
First published: