Navaratri Festival: ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್‍ನಲ್ಲಿ 400 ವರ್ಷಗಳ ಹಿಂದಿನ ಪ್ರಪ್ರಥಮ ದುರ್ಗಾ ಪೂಜೆಯ ಥೀಮ್ 

ಬಾಂಗ್ಲಾ ದೇಶದ ರಾಜ್‍ಶಾಹಿ ಜಿಲ್ಲೆಯ ಬಾಗಮ್ರಾ ಉಪಜಿಲಾದ ತಾಹೇಪುರದ ರಾಜ ಕಂಗ್ಸಾ ನಾರಾಯಣ್ ದೇವಾಲಯದಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆಯನ್ನು ಆರಂಭಿಸಲಾಯಿತು.

ಬಾಂಗ್ಲಾ ದೇಶದ ರಾಜ್‍ಶಾಹಿ ಜಿಲ್ಲೆಯ ಬಾಗಮ್ರಾ ಉಪಜಿಲಾದ ತಾಹೇಪುರದ ರಾಜ ಕಂಗ್ಸಾ ನಾರಾಯಣ್ ದೇವಾಲಯದಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆಯನ್ನು ಆರಂಭಿಸಲಾಯಿತು.

ಬಾಂಗ್ಲಾ ದೇಶದ ರಾಜ್‍ಶಾಹಿ ಜಿಲ್ಲೆಯ ಬಾಗಮ್ರಾ ಉಪಜಿಲಾದ ತಾಹೇಪುರದ ರಾಜ ಕಂಗ್ಸಾ ನಾರಾಯಣ್ ದೇವಾಲಯದಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆಯನ್ನು ಆರಂಭಿಸಲಾಯಿತು.

  • Share this:
ಇಡೀ ದೇಶವು ನವರಾತ್ರಿ  (Navaratri Festival) ಹಬ್ಬದ ರಂಗಿನಲ್ಲಿ ಮುಳುಗಿ ಹೋಗಿದೆ. 9 ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಆಚರಣೆಗಳು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೂ, ಜನರ ಭಕ್ತಿ ಮತ್ತು ಉತ್ಸಾಹಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಮ್ಮ ದೇಶದ ಪೂರ್ವ ಭಾಗದಲ್ಲಿ, ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು (Durga Puja) ಬಹಳ ವಿಶೇಷವಾಗಿ ಸಂಭ್ರಮಿಸಲಾಗುತ್ತದೆ. ಅದು ಆ ರಾಜ್ಯದ ದೊಡ್ಡ ಹಬ್ಬವಾಗಿದೆ. ದೇವಿಯ ವಿವಿಧ ಅವತಾರಗಳನ್ನು ಆರಾಧಿಸುವ ಆಚರಣೆಗಾಗಿ, ವಿಭಿನ್ನ ಥೀಮ್‍ಗಳಲ್ಲಿ ದೊಡ್ಡ ದೊಡ್ಡ ಪೆಂಡಾಲ್‍ಗಳನ್ನು ಹಾಕಲಾಗುತ್ತದೆ. ಅಂತಹದ್ದೇ ಒಂದು ಪೆಂಡಾಲನ್ನು ಪಶ್ಚಿಮ ಬಂಗಾಲದ ಬೆಹಲಾದಲ್ಲಿ ಹಾಕಲಾಗಿದ್ದು, ಅದರ ಥೀಮ್ ರಾಜ್‍ಶಾಹಿ ದುರ್ಗಾ ಪೂಜೆ. ರಾಜ್‍ಶಾಹಿ ಈಗ ಬಾಂಗ್ಲಾ ದೇಶದ ಭಾಗವಾಗಿದೆ. ಅಲ್ಲಿಯೇ , ಸುಮಾರು 415 ವರ್ಷಗಳ ಹಿಂದೆ ದುರ್ಗಾ ಪೂಜೆಯ ಆಧುನಿಕ ಆಚರಣೆ ಆರಂಭವಾಯಿತು ಎಂಬುವುದು ಹಲವರ ನಂಬಿಕೆ.

ಬರಿಶಾ ಸರ್ಬೋಜನಿನ್ ದುರ್ಗೋತ್ಸವ್ ಕಮಿಟಿಯ ಸದಸ್ಯರಾದ ತನ್ಮಯ್ ಚಟರ್ಜಿ, ಸುದ್ದಿ ಸಂಸ್ಥೆ ಎಎನ್‍ಐ ಜೊತೆ ಮಾತನಾಡುತ್ತಾ, ಈ ಪೆಂಡಾಲಿನ ಥೀಮ್ ರಾಜಶಾಹಿ ಪ್ರದೇಶದಲ್ಲಿ ಸುಮಾರು 415 ವರ್ಷಗಳ ಹಿಂದೆ ಮೊದಲು ಆರಂಭವಾದ ದುರ್ಗಾ ಪೂಜೆಯನ್ನು ಆಧರಿಸಿದೆ. ಜನಪ್ರಿಯ ಕಲಾವಿದ ಸುಭ್ರತಾ ಗಂಗೋಪಾಧ್ಯಾಯ ಈ ಪೆಂಡಾಲ್‍ಗಳಿಗಾಗಿ ದುರ್ಗಾ ವಿಗ್ರಹಗಳನ್ನು ತಯಾರಿಸಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಬಾಂಗ್ಲಾ ದೇಶದ ರಾಜ್‍ಶಾಹಿ ಜಿಲ್ಲೆಯ ಬಾಗಮ್ರಾ ಉಪಜಿಲಾದ ತಾಹೇಪುರದ ರಾಜ ಕಂಗ್ಸಾ ನಾರಾಯಣ್ ದೇವಾಲಯದಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆಯನ್ನು ಆರಂಭಿಸಲಾಯಿತು. ಕ್ರಿ .ಶ 1480ರಲ್ಲಿ , ರಾಜಾ ಕಂಗ್ಸಾ ನಾರಾಯಣ್ ರಾಯ್ ಬಹದ್ದೂರ್, ತನ್ನನ್ನು ರಾಕ್ಷಸರ ಪ್ರಭಾವದಿಂದ ತಪ್ಪಿಸಿಕೊಳ್ಳಲು ದೇವಾಲಯ ನಿರ್ಮಿಸಿದರು. ಭಾರತೀಯ ಉಪಖಂಡದಲ್ಲಿ ದುರ್ಗಾ ಪೂಜೆಯ ಆಚರಣೆಯು ಈ ದೇವಸ್ಥಾನದಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Navaratri Special: ಕೊಲ್ಕತ್ತಾದಲ್ಲಿ ನವರಾತ್ರಿ ವೈಭವ, ವಿಭಿನ್ನ ಪೆಂಡಾಲ್- ಅದ್ಧೂರಿ ಆಚರಣೆ

ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರನು ರಾವಣನನ್ನು ಕೊಲ್ಲಲು ಸ್ವತಃ ದುರ್ಗಾ ಪೂಜೆ ಆಯೋಜಿಸಿದ್ದನು ಎಂದು ಹಿಂದೂ ಪುರಾಣದಲ್ಲಿ ಹೇಳಲಾಗಿದೆ. ರಾಜಾ ಕಂಗ್ಸಾ ನಾರಾಯಣ್ ರಾಯ್ ಬಹಾದ್ದೂರ್, ಕಾಳಿ ಪೂಜೆಯ ಸಮಯದಲ್ಲಿ ಈ ಹಬ್ಬವನ್ನು ಆಧುನಿಕ ರೀತಿಯಲ್ಲಿ ಆಯೋಜಿಸಿದನು ಎನ್ನಲಾಗುತ್ತದೆ.

ಬಂಗಾಳದ ಹೆಚ್ಚಿನ ಭಾಗವು ಮೊಘಲರ ಆಳ್ವಿಕೆಗೆ ಒಳಪಟ್ಟಾಗ , ರಾಜಾ ಕಂಗ್ಸಾ ನಾರಾಯಣ್ ರಾಯ್ ಬಹದ್ದೂರ್ , ಸುಬೇ ಬಾಂಗ್ಲಾದ ದಿವಾನನಾಗಿ ನೇಮಿಸಲ್ಪಟ್ಟನು. ಆದರೆ ಆತ ತಾಹೇರ್‍ಪುರಕ್ಕೆ ಮರಳಿಕ್ಕಾಗಿ ಎಲ್ಲವನ್ನು ತ್ಯಜಿಸಿ, ತನ್ನನ್ನು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಅರ್ಪಿಸಿಕೊಂಡನು. ಆತ ಅಮರನಾಗಲು ಅನೇಕ ಯಜ್ಞಗಳನ್ನು ಮಾಡಲು ಆರಂಭಿಸಿದನು ಮತ್ತು ಅರ್ಚಕರ ಅಭಿಪ್ರಾಯಗಳನ್ನು ಕೇಳಿದನು.

ಇದನ್ನೂ ಓದಿ: ಬೆಂಗಳೂರಿನ ಸಿಲೆಟಿ ಸಮುದಾಯದಿಂದ ದುರ್ಗಾ ಉತ್ಸವ

ದುರ್ಗಾ ಉತ್ಸವದ ಹೊರತಾಗಿ , ಯಾವ ಸಮರ್ಪಣೆಯೂ ಅವರಿಗೆ ಸೂಕ್ತವಲ್ಲ ಎಂದು ಪಂಡಿತ್ ರಮೇಶ್ ಶಾಸ್ತ್ರೀ ರಾಜನಿಗೆ ಸಲಹೆ ನೀಡಿದರು. ಇತರ ಅರ್ಚಕರು ಮತ್ತು ರಾಜಾ ನಾರಾಯಣ್ , ಪಂಡಿತ್ ರಮೇಶ್ ಶಾಸ್ತ್ರಿಯ ಸಲಹೆಯನ್ನು ಒಪ್ಪಿದರು. ಮತ್ತು ಆಧುನಿಕ ಶರತ್ಕಾಲದ ಕೋಟೆ ಉತ್ಸವವನ್ನು ಆಯೋಜಿಸಲಾಯಿತು. ಈ ಸಂಪ್ರದಾಯವನ್ನು ಈಗಲೂ ಬಂಗಾಳಿಗಳು ಆಚರಿಸುತ್ತಿದ್ದಾರೆ ಎಂದು ಬಾಂಗ್ಲಾ ದೇಶದ ದಿ ಡೈಲಿ ಅಬ್ಸರ್‍ವರ್ ವರದಿ ಮಾಡಿದೆ.
Published by:Anitha E
First published: