HOME » NEWS » National-international » FIRST CHIP SHORTAGE AND NOW RUBBER DEFICIT GLOBAL AUTO MAKERS WITNESS PRODUCTION DISRUPTION STG

ಮೊದಲು ಚಿಪ್ ಕೊರತೆ, ಈಗ ರಬ್ಬರ್ ಕೊರತೆ, ಉತ್ಪಾದನೆ ಕೊರತೆಗೆ ಸಾಕ್ಷಿಯಾಗುತ್ತಿರುವ ಮೋಟಾರು ತಯಾರಕರು!

news18-kannada
Updated:April 19, 2021, 7:19 PM IST
ಮೊದಲು ಚಿಪ್ ಕೊರತೆ, ಈಗ ರಬ್ಬರ್ ಕೊರತೆ, ಉತ್ಪಾದನೆ ಕೊರತೆಗೆ ಸಾಕ್ಷಿಯಾಗುತ್ತಿರುವ ಮೋಟಾರು ತಯಾರಕರು!
ನಿಸ್ಸಾನ್​ ಮ್ಯಾಗ್​ನೈಟ್​ ಪ್ರೊಡಕ್ಷನ್​ (Image: Arjit Garg/News18.com)
  • Share this:
ಹಡಗುಗಳ ಮಾರ್ಗಗಳ ಸಮಸ್ಯೆ ಈಗ ಇನ್ನೊಂದು ಸಂಕಷ್ಟಕ್ಕೆ ದೂಡಿದೆ. ಈಗ ನೈಸರ್ಗಿಕ ರಬ್ಬರ್ ಆಮದು ಮಾಡಿಕೊಳ್ಳಲು ದೊಡ್ಡ ಅಡ್ಡಿಯಾಗಿದೆ. ಮೋಟಾರುಗಳಲ್ಲಿ ಲೋಹದ ಮೇಲೆ ಮತ್ತು ವಾಹನಗಳ ಟೈರ್‌ಗಳಲ್ಲಿ ರಬ್ಬರ್ ಅನ್ನು ಪ್ರಮುಖವಾಗಿ ಬಳಸಲಾಗುತ್ತಿದೆ.

ಕೋವಿಡ್ 19 ನಿಂದಾಗಿ ಜಗತ್ತಿನಾದ್ಯಂತ ವಾಹನ ಉತ್ಪಾದಕರು ಇಲ್ಲಿಯವರೆಗೆ ಸಾಕಷ್ಟು ಬಿಡಿ ಭಾಗಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಈಗ ರಬ್ಬರ್ ಸರಬರಾಜಿನ ಕೊರತೆ ಇದಕ್ಕೆ ಹೊಸ ಸೇರ್ಪಡೆಯಾಗಿದೆ. ಹಡಗುಗಳ ಮಾರ್ಗಗಳ ಸಮಸ್ಯೆ ಈಗ ಇನ್ನೊಂದು ಸಂಕಷ್ಟಕ್ಕೆ ದೂಡಿದೆ. ಈಗ ನೈಸರ್ಗಿಕ ರಬ್ಬರ್ ಆಮದು ಮಾಡಿಕೊಳ್ಳಲು ದೊಡ್ಡ ಅಡ್ಡಿಯಾಗಿದೆ. ಮೋಟಾರುಗಳಲ್ಲಿ ಲೋಹದ ಮೇಲೆ ಮತ್ತು ವಾಹನಗಳ ಟೈರ್ಗಳಲ್ಲಿ ರಬ್ಬರ್ ಅನ್ನು ಪ್ರಮುಖವಾಗಿ ಬಳಸಲಾಗುತ್ತಿದೆ.

ಫೋಮ್, ಪ್ಲಾಸ್ಟಿಕ್ ಮತ್ತು ಲೋಹದ ಭಾಗಗಳು ಸೇರಿದಂತೆ ಆಸನಗಳನ್ನು ತಯಾರಿಸಲು ಬೇಕಾದ ಹಲವಾರು ವಸ್ತುಗಳ ಕೊರೆತಯು ಸಹ ಉಂಟಾಗಿದೆ. ಜಾಗತಿಕ ಆರ್ಥಿಕತೆಯ ಮುನ್ನಡೆಗೆ ಆಟೋಮೊಬೈಲ್ ಕ್ಷೇತ್ರದ ಕೊಡುಗೆ ಅಪರಿಮಿತವಾಗಿದೆ. ಪೂರೈಕೆ ಕೊರತೆ ಮತ್ತು ಸರಣಿ ಅಡೆತಡೆಗಳು ಈಗ ಆ ಕ್ಷೇತ್ರದ ಅಸ್ಥಿತ್ವವಕ್ಕೆ ಧಕ್ಕೆಯನ್ನುಂಟು ಮಾಡಿದೆ.

ಈಗಾಗಲೇ ಕೋವಿಡ್ 19 ತನ್ನ ದೈತ್ಯ ಸ್ವರೂಪವನ್ನು ಪ್ರದರ್ಶಿಸಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಅಲ್ಲದೇ ಎಲ್ಲಾ ವಿಭಾಗದಲ್ಲೂ ಹಾನಿಯನ್ನುಂಟು ಮಾಡುತ್ತಿದೆ. ಕಳೆದ ವರ್ಷದಿಂದ ಇಲ್ಲಿಯವೆರಗೂ ಆಟೋ ಮೊಬೈಲ್ ಉದ್ಯಮವು ಅತ್ಯಂತ ಕಠಿಣ ಸಂದರ್ಭಗಳನ್ನು ಎದುರಿಸಿ ದೊಡ್ಡ ಹೊಡೆತವನ್ನೇ ಕಂಡಿದೆ. ಹಲವಾರು ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ ಇನ್ನೂ ಕೆಲವು ಕಡೆ ಕಡಿತಗೊಳಿಸಿವೆ. ಇದರಿಂದಾಗಿ ಶತಕೋಟಿ ಡಾಲರ್ ಆದಾಯ ನಷ್ಟದಲ್ಲಿ ಮುಕ್ತಾಯಗೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: Ranbir Kapoor- Alia Bhatt: ಕೊರೋನಾದಿಂದ ಗುಣಮುಖರಾಗುತ್ತಿದ್ದಂತೆ ಮಾಲ್ಡೀವ್ಸ್​ಗೆ ಹಾರಿದ ರಣಬೀರ್ ಕಪೂರ್- ಆಲಿಯಾ ಭಟ್

ಜಾಗತಿಕ ಪೂರೈಕೆಯಲ್ಲಿ ಸಮಸ್ಯೆ ಮತ್ತು ಚೀನಾದಂತಹ ದೇಶಗಳು ಘಟಕಗಳಲ್ಲಿ ದಾಸ್ತಾನು ಮಾಡುತ್ತಿರುವುದರಿಂದ ರಬ್ಬರ್ ಬೆಲೆಗಳು ಹೆಚ್ಚಾಗುತ್ತಿವೆ. ಅಮೆರಿಕದಲ್ಲಿನ ಆಟೋಮೊಬೈಲ್ ದಿಗ್ಗಜರು ಸಹ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಘಟಕಗಳ ದಾಸ್ತಾನುಗಳಿಗೆ ಮುಂದಾಗಿದ್ದಾರೆ.

ಫಿಯೆಟ್, ಫೋರ್ಡ್ ಮೋಟಾರ್ಸ್ ಮತ್ತು ಸ್ಟೆಲ್ಲಾಂಟಿಸ್ ಸೇರಿದಂತೆ ಹೆಸರಾಂತ ಕಾರು ತಯಾರಕರು ರಬ್ಬರ್ ಪೂರೈಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವುಗಳ ಉತ್ಪಾದನೆಯಲ್ಲಿ ಗಮನಾರ್ಹ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಅತಿದೊಡ್ಡ ಟೈರ್ ತಯಾರಕರಲ್ಲಿ ಒಬ್ಬರಾದ ಮೈಕೆಲಿನ್ ಅವರು ಬಂದರು ಅಡೆತಡೆಗಳ ಸಮಸ್ಯೆಯಿಂದ ಹೊರ ಬರಲು ವಾಯುಸಾರಿಗೆಯ ನೆರವನ್ನು ಪಡೆದಿದ್ದಾರೆ.ಈಗ ಉಂಟಾಗುತ್ತಿರುವ ರಬ್ಬರ್ ಕೊರತೆಯು ವಾಹನಗಳ ಉತ್ಪಾದನೆಗೆ ಮತ್ತಷ್ಟು ಅಡ್ಡಿಯಾಗಲಿದೆ. ಅಲ್ಲದೇ ಕೊರೊನಾ ಹೊಡೆತದಿಂದ ಸರಬರಾಜು ಸರಪಳಿ ಕೂಡಲೇ ಸುಧಾರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇಲ್ಲಿ ಇನ್ನೊಂದು ಚಿಂತಿಸಬೇಕಾದ ವಿಷಯವೊಂದಿದೆ. ರಬ್ಬರ್ ಮರಗಳಿಂದ ರಬ್ಬರ್ ತೆಗೆಯಲು ರಬ್ಬರ್ ಮರಗಳ ಪ್ರೌಢಿಮೆಗಾಗಿ 7 ವರ್ಷಗಳು ಕಾಯಬೇಕು.

ಇನ್ನು Bloomberg ಪ್ರಕಾರ ಪೂರೈಕೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸುವುದು ಸದ್ಯಕ್ಕೆ ಕಷ್ಟ. ಈ ನಿಟ್ಟಿನಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ಯಾವ ಬದಲಿ ವ್ಯವಸ್ಥೆಯನ್ನು ಆಶ್ರಯಿಸಬಹುದು ಎನ್ನುವುದನ್ನು ಕಾದು ನೋಡಬೇಕಿದೆ.
Published by: Kavya V
First published: April 19, 2021, 7:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories