Covid-19 Cases: ಬೆಕ್ಕಿನಿಂದ ಮಾನವನಿಗೆ ಮೊದಲ ಕೋವಿಡ್ ಸೋಂಕು!

ಜಗತ್ತಿನಾದ್ಯಂತ ಕೋವಿಡ್ ನಿಂದ ಜನಜೀವನ 3 ವರ್ಷಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಮತ್ತೇ ಈಗ ಥೈಲ್ಯಾಂಡಿನಲ್ಲಿ ಬೆಕ್ಕಿನಿಂದ ಮಾನವನಿಗೆ ಈ ಕೋವಿಡ್ ಸೋಂಕು ತಗುಲಿರುವ ವಿಷಯ ಬೆಳಕಿಗೆ ಬಂದಿದ್ದು ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಗತ್ತಿನಾದ್ಯಂತ ಕೋವಿಡ್ (Covid - 19) ನಿಂದ ಜನಜೀವನ 3 ವರ್ಷಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಮತ್ತೇ ಈಗ ಥೈಲ್ಯಾಂಡಿನಲ್ಲಿ (Thailand) ಬೆಕ್ಕಿನಿಂದ (Cat) ಮಾನವನಿಗೆ ಈ ಕೋವಿಡ್ ಸೋಂಕು ತಗುಲಿರುವ ವಿಷಯ ಬೆಳಕಿಗೆ ಬಂದಿದ್ದು ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಈ ಸುದ್ಧಿಯು ಆಕಸ್ಮಿಕವಾಗಿ ವರದಿ ಆಗಿದೆ ಎಂದು ಥೈಲ್ಯಾಂಡಿನ ಪ್ರಿನ್ಸ್ ಆಫ್ ಸಾಂಗ್‌ಕ್ಲಾ ವಿಶ್ವವಿದ್ಯಾಲಯದ ಸಹ-ಲೇಖಕ ಮತ್ತು ಸಾಂಕ್ರಾಮಿಕ ರೋಗ ಸಂಶೋಧಕ ಸರನ್ಯೂ ಚುಸ್ರಿ ವರದಿಯಲ್ಲಿ ತಿಳಿಸಿದ್ದಾರೆ.  ಅಧ್ಯಯನದ ಪ್ರಕಾರ, ಆಗಸ್ಟ್‌ನಲ್ಲಿ SARS-CoV-2 ಗೆ ಪರೀಕ್ಷೆ ಮಾಡಿಸಿಕೊಂಡಾಗ ತಂದೆ ಮತ್ತು ಮಗ ಇಬ್ಬರಿಗೂ ಪಾಸಿಟಿವ್ (Positive) ಎಂದು ಗೊತ್ತಾದ ಕೂಡಲೇ ಅವರಿಬ್ಬರೂ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದರು.

ಸಾಕುಪ್ರಾಣಿ ಬೆಕ್ಕಿಗೂ ಕೋವಿಡ್ ಪಾಸಿಟಿವ್
ಆ ಕುಟುಂಬದವರು ಸಾಕಿರುವ ಬೆಕ್ಕಿಗೂ ಕೂಡ ಪರೀಕ್ಷೆ ಮಾಡಿದಾಗ ಆ ಸಾಕುಪ್ರಾಣಿ ಬೆಕ್ಕಿಗೂ ಪಾಸಿಟಿವ್ ಎಂದು ತಿಳಿದಿದೆ. ಈ ವರದಿಯು, ಪ್ರಕೃತಿಯಲ್ಲಿ ಬೆಕ್ಕು-ಮಾನವರ ನಡುವೆ ಈ ತರದ ಪ್ರಕರಣಗಳು ಅಪರೂಪದಲ್ಲಿ ಅಪರೂಪ ಎಂದು ಉಲ್ಲೇಖಿಸಿದೆ.

ಬೆಕ್ಕಿನಿಂದ ಮಾನವನಿಗೆ ಕೋವಿಡ್ -19 ಸೋಂಕು
ಬೆಕ್ಕಿನಿಂದ ಮಾನವನಿಗೆ ಕೋವಿಡ್ -19 ಸೋಂಕಿತ ಪ್ರಕರಣವು ಥೈಯ್ಲೆಂಡ್‌ನಲ್ಲಿ ವರದಿಯಾಗಿದೆ ಎಂದು ವಿಜ್ಞಾನ ಜರ್ನಲ್ ನೇಚರ್ ಬುಧವಾರ ಜೂನ್ 6 ರಂದು ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಇದನ್ನು ಉಲ್ಲೇಖಿಸಿದೆ.

ಇದನ್ನೂ ಓದಿ: Five Burnt Alive: ಅಳಿಲಿನಿಂದಾಗಿ ಹೋಯ್ತು 5 ಜೀವ, ಸ್ಥಳದಲ್ಲೇ ಸಜೀವ ದಹನ!

ಈ ವರದಿಯಲ್ಲಿ ಮಾಡಿದ ಅಧ್ಯಯನದ ಫಲಿತಾಂಶಗಳು ಕರೋನ ವೈರಸ್ ಈಗ ಸಾಂಕ್ರಾಮಿಕದ ವ್ಯಾಪಕ ಸ್ವರೂಪವನ್ನು ಪಡೆಯುತ್ತಿದೆ. ಇದು ನಿಸರ್ಗದ ಸೃಷ್ಟಿಯಾಗಿದೆ. ಆದರೆ ಇಂತಹ ಹೆಚ್ಚಿನ ಪ್ರಕರಣಗಳು ವರದಿಯಾಗದಿರುವುದು ಆಶ್ಚರ್ಯಕರವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬೆಕ್ಕಿನಿಂದ ಮಾನವನಿಗೆ ಸೋಂಕು ಹರಡುವುದು ಹೇಗೆ
ಬೆಕ್ಕನ್ನು ಪರೀಕ್ಷೆ ಮಾಡುವಾಗ, ಆಗ ಬೆಕ್ಕು ಪಶುವೈದ್ಯರ ಮುಖಕ್ಕೆ ಸೀನಿತು. ಶಸ್ತ್ರಚಿಕಿತ್ಸಕ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿದ್ದರು ಆದರೆ ಕಣ್ಣಿಗೆ ಯಾವುದೇ ರಕ್ಷ ಕವಚ ಹಾಕಿರಲಿಲ್ಲ. ಇದಾದ ಮೂರು ದಿನಗಳ ನಂತರ, ಆ ವೈದ್ಯರಲ್ಲಿ ಜ್ವರ, ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡವು. ಆಗ ಸ್ವತಃ ಆ ವೈದ್ಯರೇ, ಪರೀಕ್ಷೆ ಮಾಡಿಸಿದಾಗ ವರದಿಯು ಪಾಸಿಟಿವ್ ಎಂದಿತ್ತು.

ಆ ವೈದ್ಯರ ಯಾವುದೇ ನಿಕಟ ಸಂಪರ್ಕಗಳು ಪಾಸಿಟಿವ್ ಆಗಿರಲಿಲ್ಲ. ಆಗ ಅವರು ಬೆಕ್ಕಿನಿಂದ ಸೋಂಕಿಗೆ ಒಳಗಾಗಿದ್ದಾರೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಜೆನೆಟಿಕ್ ವಿಶ್ಲೆಷಣೆಯಲ್ಲೂ ಸಹ ಪಶುವೈದ್ಯರು ಮತ್ತು ಬೆಕ್ಕು ಇಬ್ಬರೂ ಒಂದೇ ರೂಪಾಂತರದ ಸೋಂಕನ್ನು ಹೊಂದಿದ್ದಾರೆ ಎಂಬುಂದು ತಿಳಿದು ಬಂದಿದೆ. ವೈರಲ್ ಜೀನೋಮಿಕ್ ಅನುಕ್ರಮಗಳು ಸಹ ಒಂದೇ ಆಗಿವೆ.

ಈ ಬಗ್ಗೆ ವರದಿ ಏನು ಹೇಳಿದೆ
ಆದರೂ ಈ ವರದಿಯು ಒಂದು ಎಚ್ಚರಿಕೆಯ ಮಾತನ್ನು ಹೇಳಿದೆ. ಅದೇನೆಂದರೇ 'ಪ್ರಕೃತಿಯಲ್ಲಿ ಬೆಕ್ಕು-ಮಾನವ ಪ್ರಸರಣವು ಬಹುಶಃ ಅಪರೂಪ ಎಂದು ಹೇಳಿದೆ. ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಲಿಯೋ ಪೂನ್, ಪ್ರಾಯೋಗಿಕ ಅಧ್ಯಯನಗಳಲ್ಲಿ ಹೇಳಿರುವಂತೆ ಸೋಂಕಿತ ಬೆಕ್ಕುಗಳು 'ಹೆಚ್ಚು ವೈರಸ್ ಅನ್ನು ಉಂಟು ಮಾಡುವುದಿಲ್ಲ ಅಥವಾ ಮಾಡಿದರೂ ಕೂಡ ಆ ವೈರಸ್ ಗಳು ಕೆಲವೇ ದಿನಗಳು ಮಾತ್ರ ಇರುತ್ತವೆ' ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಅದೇನೇ ಇದ್ದರೂ, ಕೋವಿಡ್ -19 ಸೋಂಕಿಗೆ ಒಳಗಾಗಿರುವ ಸೋಂಕಿತ ಬೆಕ್ಕುಗಳನ್ನು ನಿರ್ವಹಿಸುವಾಗ ಐಗಾರ್ಡ್‌ಗಳ ಬಳಕೆ ಸೇರಿದಂತೆ ಎಲ್ಲಾ ಸಂಭವನೀಯ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಲಿಯೋ ಪೂನ್ ಅವರು ಎಲ್ಲರಿಗೂ ಎಚ್ಚರಿಕೆ ಮಾತನ್ನು ಮತ್ತೆ ಮತ್ತೆ ಹೇಳಿದ್ದಾರೆ.

ಸಾಕು ಪ್ರಾಣಿಗಳನ್ನು ಸಾಕುವವರೇ ಎಚ್ಚರವಹಿಸಿ
ಬೆಕ್ಕುಗಳನ್ನು ಹೊರತುಪಡಿಸಿ, ಇತರ ಮನೆಯ ಪ್ರಾಣಿಗಳು- ನಾಯಿಗಳು, ಪೆಟ್‌ಗಳು ಮತ್ತು ಮೊಲಗಳು - ಕೋವಿಡ್ ಸೋಂಕಿಗೆ ಒಳಗಾಗಬಹುದು ಆದರೆ ಈ ವೈರಸ್ ಮನುಷ್ಯರಿಗೆ ಹರಡುವ ಅಪಾಯ ಬಹಳ ಕಡಿಮೆ. ಆದರೂ ಕೂಡ ನಮ್ಮ ಕಾಳಜಿಯಲ್ಲಿ ನಾವಿರಬೇಕಾಗಿರುವುದು ಉತ್ತಮವಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಸಾಕಣೆ ಮಾಡಿದ ಮಿಂಕ್‌ ಪ್ರಾಣಿಗಳಿಂದ ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಮತ್ತು ಹಾಂಗ್ ಕಾಂಗ್‌ನಲ್ಲಿ ಹ್ಯಾಮ್ಸ್ಟರ್‌ಗಳಿಂದ ಬಂದಂತಹ ವರದಿಗಳೂ ಆಗಿವೆ.

ಇದನ್ನೂ ಓದಿ: Street Dog: ಈ ಮೂಕಪ್ರಾಣಿಯ ಜೀವ ಉಳಿಸಲು ಹಳ್ಳಿಗರು ಏನೆಲ್ಲಾ ಮಾಡಿದ್ದಾರೆ ನೋಡಿ!

ಯುನೈಟೆಡ್ ಸ್ಟೇಟ್ಸ್‌ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು, "ನಿಮ್ಮ ಸಾಕುಪ್ರಾಣಿಗಳಿಂದ ಕೋವಿಡ್ -19 ಪಡೆಯುವ ಬಗ್ಗೆ ನೀವು ಹೆಚ್ಚೇನು ಚಿಂತೆ ಪಡಬೇಕಾಗಿಲ್ಲ. ಅವುಗಳು, ನಿಮ್ಮಿಂದ ಸೋಂಕು ಪಡೆಯುವ ಬಗ್ಗೆ ಚಿಂತಿಸಬೇಕು" ಎಂದು ವರದಿಯಲ್ಲಿ ತಿಳಿಸಿವೆ. ನಿಮ್ಮ ಮನೆಯಲ್ಲೂ ಸಾಕು ಪ್ರಾಣಿ ಬೆಕ್ಕು ಇದ್ದರೆ ಹುಷಾರು. ಕೋವಿಡ್ ಬರಬಹುದು. ಬಿ ಕೇರ್ ಫುಲ್.
Published by:Ashwini Prabhu
First published: