Tokyo Olympic: ಟೊಕಿಯೋ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಮೊದಲ ಕೊರೊನಾ ಕೇಸ್.. ಹೆಚ್ಚಾದ ಸೋಂಕಿನ ಭೀತಿ!

ಸದ್ಯ ಸೋಂಕಿತ ವ್ಯಕ್ತಿಯನ್ನು ಹೋಟೆಲ್​​ವೊಂದರಲ್ಲಿ ಐಸೋಲೇಷನ್​ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಟೊಕಿಯೋ ಒಲಿಂಪಿಕ್ಸ್​​​​ ಆರಂಭವಾಗಲು ಇನ್ನೇನು 6 ದಿನಗಳಿರುವಾಗಲೇ ಕೊರೊನಾ ಕರಿನೆರಳು ಕ್ರೀಡಾಹಬ್ಬದ ಸಂಭ್ರಮವನ್ನು ಮಂಕಾಗಿಸಿದೆ. ಕ್ರೀಡೆಗಳು ನಡೆಯುವ ಪ್ರದೇಶವಾದ ಒಲಿಂಪಿಕ್ಸ್​​ ಹಳ್ಳಿಯಲ್ಲಿ ಮೊದಲ ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆಯಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಸ್ಕ್ರೀನಿಂಗ್​ ಟೆಸ್ಟಿಂಗ್​ ವೇಳೆ ವ್ಯಕ್ತಿಯೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಟೊಕಿಯೊ ಒಲಿಂಪಿಕ್ಸ್​​ ಆಯೋಜಕರ ಸಂಘದ ವಕ್ತಾರ ಮಾಸ ಟಕಾಯ ತಿಳಿಸಿದ್ದಾರೆ. ಈಗಾಗಲೇ ಸಾವಿರಾರು ಕ್ರೀಡಾಪಟುಗಳು, ಕೋಚ್​ಗಳು, ಸಿಬ್ಬಂದಿ ಕ್ರೀಡಾ ತಾಲೀಮಿನಲ್ಲಿ ತೊಡಗಿದ್ದು, ಸೋಂಕಿನ ಭೀತಿ ಶುರುವಾಗಿದೆ.

ಸದ್ಯ ಸೋಂಕಿತ ವ್ಯಕ್ತಿಯನ್ನು ಹೋಟೆಲ್​​ವೊಂದರಲ್ಲಿ ಐಸೋಲೇಷನ್​ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕು ಹರಡಿದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಯಾರಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ. ಹೀಗಾಗಲೇ ಕೊರೊನಾ ಕಾರಣದಿಂದ ಒಲಿಂಪಿಕ್ಸ್​​ನ್ನು ಒಂದು ವರ್ಷ ಮುಂದೂಡಲಾಗಿದ್ದು, ಅಗತ್ಯ ಕ್ರಮಗಳೊಂದಿಗೆ ಈ ವರ್ಷ ನಡೆಸಲು ಟೊಕಿಯೋ ಮುಂದಾಗಿದೆ. ಆದರೆ ಆರಂಭದಲ್ಲೇ ವಿಘ್ನ ಎದುರಾಗಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.

ಕ್ರೀಡಾಕೂಟದ ಆಯೋಜಕರ ತಂಡದಲ್ಲಿದ್ದ ವಿದೇಶಿ ವ್ಯಕ್ತಿಗೆ ಸೋಂಕು ತಗುಲಿದೆ ಎಂಬುವುದನ್ನು ಜಪಾನೀಸ್​ ಮಾಧ್ಯಮಗಳು ವರದಿ ಮಾಡಿವೆ. ಜುಲೈ 23ರಿಂದ ಆಗಸ್ಟ್​​ 8ರವರೆಗೆ ಒಲಿಂಪಿಕ್ಸ್​​ ನಡೆಯಲಿದ್ದು, ಈ ವೇಳೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡರೂ ಶೀಘ್ರವೇ ಕ್ರಮ ಕೈಗೊಳ್ಳಲು ಮುಂಜಾಗ್ರತೆ ವಹಿಸಲಾಗಿದೆ. ಕೊರೊನಾ ಸ್ಫೋಟ ತಪ್ಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವದಾಗಿ ಆಯೋಜಕರು ಹೇಳಿದ್ದಾರೆ. ಭಾರತದಿಂದಲೂ ನೂರಾರು ಆಟಗಾರರು ಈಗಾಗಲೇ ಟೊಕಿಯೋದಲ್ಲಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: