ನವದೆಹಲಿ(ಜುಲೈ 27): ವಿಶ್ವದ ಅತ್ಯಂತ ಪ್ರಬಲ ಯುದ್ಧವಿಮಾನಗಳಲ್ಲೊಂದೆನಿಸಿದ ಫ್ರಾನ್ಸ್ ನಿರ್ಮಿತ ರಫೇಲ್ ಜೆಟ್ಗಳು ಇನ್ನೆರಡು ದಿನದಲ್ಲಿ ಭಾರತಕ್ಕೆ ಆಗಮಿಸಲಿವೆ. ಐದು ರಫೇಲ್ ಜೆಟ್ಗಳು ಈಗ ಫ್ರಾನ್ಸ್ನಿಂದ ಹೊರಟಿವೆ. 7,000 ಕಿಮೀ ದೂರದ ಭಾರತಕ್ಕೆ ಬರುತ್ತಿರುವ ಇವು ಯುಎಇ ದೇಶದ ಅಲ್ ಧಫಿರಾ ವಾಯುನೆಲೆಯಲ್ಲಿ ಸ್ವಲ್ಪ ಹೊತ್ತು ನಿಲ್ಲಲಿವೆ. ಹಾಗೆಯೇ, ಆಗಸ ಮಾರ್ಗದಲ್ಲೇ ಇದಕ್ಕೆ ಇಂಧನ ಹಾಕಲಾಗುತ್ತದೆ.
ಬುಧವಾರ ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರಲಿವೆ. ಅದಾದ ಬಳಿಕ ಹರಿಯಾಣದ ಅಂಬಾಲದಲ್ಲಿರುವ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಲಡಾಖ್ನಲ್ಲಿರುವ ಚೀನಾ ಗಡಿಭಾಗದ ಬಳಿ ತತ್ಕ್ಷಣಕ್ಕೆ ಈ ಜೆಟ್ ವಿಮಾನಗಳನ್ನ ನಿಯೋಜಿಸಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುತ್ತದೆ.
Rafale aircrafts maneuvered by the world’s best pilots, soar into the sky. Emblematic of new heights in India-France defence collaboration #ResurgentIndia #NewIndia@IAF_MCC @MeaIndia @rajnathsingh @Dassault_OnAir @DefenceMinIndia @PMOIndia@JawedAshraf5 @DDNewslive @ANI pic.twitter.com/FrEQYROWSv
— India in France (@Indian_Embassy) July 27, 2020
ಕಳೆದ ವರ್ಷ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ದೇಶದಲ್ಲಿ ಮೊದಲ ರಫೇಲ್ ಯುದ್ಧವಿಮಾನವನ್ನು ಹತ್ತಿ ಹಾರಾಟದ ಅನುಭವ ಗಳಿಸಿದ್ದರು. ಫ್ರಾನ್ಸ್ ದೇಶದ ಡಸಾಲ್ಟ್ ಸಂಸ್ಥೆಯೊಂದಿಗೆ 36 ರಫೇಲ್ ಯುದ್ಧವಿಮಾನದ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇನ್ನೊಂದು ವರ್ಷದಲ್ಲಿ ಎಲ್ಲಾ 36 ಜೆಟ್ಗಳು ಭಾರತದ ಕೈಸೇರಲಿವೆ. ಈ ಯುದ್ಧವಿಮಾನ ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳಲ್ಲೊಂದೆನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ