ಮುಂಬೈನಲ್ಲಿ ಅಗ್ನಿ ದುರಂತ: ಹೊತ್ತಿ ಉರಿದ ಮಾಲ್​​; ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ

ಇನ್ನು, ಯಾವ ಕಾರಣಕ್ಕೆ ಅಘ್ನಿ ಅವಘಡ ಸಂಭವಿಸಿದೆ ಎಂಬ ಕಾರಣ ತಿಳಿದು ಬಂದಿಲ್ಲ. ಅದೃಷ್ಟವಶಾತ್​​ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಿಕೊಂಡಿದ್ದೇವೆ. ಹಾಗೆಯೇ ತನಿಖೆಯನ್ನು ಚುರುಗೊಳಿಸಿದ್ದೇವೆ ಎಂದರು ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು.

news18-kannada
Updated:February 15, 2020, 5:29 PM IST
ಮುಂಬೈನಲ್ಲಿ ಅಗ್ನಿ ದುರಂತ: ಹೊತ್ತಿ ಉರಿದ ಮಾಲ್​​; ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ
ಸಿಟಿ ಮಾಲ್​​ಗೆ ಬೆಂಕಿ
  • Share this:
ನವದೆಹಲಿ(ಫೆ.15): ಪ್ರತಿಷ್ಠಿತ ಮಾಲ್​​ವೊಂದರಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಥಾಣೆಯ ಕಪುರಬವ್ಡಿ ಎಂಬ ನಗರದಲ್ಲಿರುವ ಲೇಕ್​​ ಸಿಟಿ ಮಾಲ್​​ನಲ್ಲಿ ಈ ಅಗ್ನಿ ದುರಂತ ನಡೆದಿದ್ದು, ಅದೃಷ್ಟವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗುತ್ತಿದೆ. 


ಮೊದಲಿಗೆ ಲೇಕ್​ ಮಾಲ್​ನ ಮೊದಲನೇ ಫ್ಲೋರ್​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದೆ. ನಂತರ ಇದಕ್ಕಿದ್ದಂತೆಯೇ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ. ಈ ಸುದ್ದಿ ತಿಳಿಸಿದ ಕೂಡಲೇ ಮಾಲ್​​ ಸಮೀಪವಿರುವ ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಇನ್ನು, ಯಾವ ಕಾರಣಕ್ಕೆ ಅಘ್ನಿ ಅವಘಡ ಸಂಭವಿಸಿದೆ ಎಂಬ ಕಾರಣ ತಿಳಿದು ಬಂದಿಲ್ಲ. ಅದೃಷ್ಟವಶಾತ್​​ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಿಕೊಂಡಿದ್ದೇವೆ. ಹಾಗೆಯೇ ತನಿಖೆಯನ್ನು ಚುರುಗೊಳಿಸಿದ್ದೇವೆ ಎಂದರು ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು.ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾಂಗ್ರೆಸ್​ ನಾಯಕರ ಪ್ರಯತ್ನ ವಿಫಲ; ಸಿದ್ದರಾಮಯ್ಯ ಸೇರಿ ಹಲವರು ಪೊಲೀಸ್​ ವಶಕ್ಕೆ

ಈ ಹಿಂದೆ ಒಂದು ವಾರಕ್ಕೆ ಮುನ್ನ ಗುಜರಾತ್​​ನಲ್ಲಿ ಅಹಮದಾಬಾದ್​​ನಲ್ಲಿ ಇಂತಹುದ್ದೇ ಘಟನೆ ನಡೆದಿತ್ತು. ಜವಳಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇಲ್ಲಿನ ನರೋಲ್ ಪ್ರದೇಶದಲ್ಲಿನ ನಂದನ್ ಡೆನಿಮ್ ಎಂಬ ಜವಳಿ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ 16 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದರು.
First published: February 15, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading