ಮುಂಬೈನ ಮಾಲ್​ನಲ್ಲಿ ಬೃಹತ್ ಬೆಂಕಿ ಅವಘಡ; 3500 ಜನರ ಸ್ಥಳಾಂತರ

ಮಾಲ್​ನ ಪಕ್ಕದ ಕಟ್ಟಡದಲ್ಲಿದ್ದ ಸುಮಾರು 3,500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಮಾಲ್​ನಲ್ಲಿದ್ದ ಸುಮಾರು 300 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

news18-kannada
Updated:October 23, 2020, 9:46 AM IST
ಮುಂಬೈನ ಮಾಲ್​ನಲ್ಲಿ ಬೃಹತ್ ಬೆಂಕಿ ಅವಘಡ; 3500 ಜನರ ಸ್ಥಳಾಂತರ
ಬೆಂಕಿ ನಂದಿಸುತ್ತಿರುವ ದೃಶ್ಯ
  • Share this:
ಮುಂಬೈ(ಅ.23): ವಾಣಿಜ್ಯ ನಗರಿ ಮುಂಬೈನ ನಾಗ್ಪಾದ ಪ್ರದೇಶದಲ್ಲಿರುವ ಮಾಲ್​ವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಗುರುವಾರ ಈ ದುರಂತ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಐದು ಹಂತದಲ್ಲಿ ಬೆಂಕಿ ಆರಿಸಲು ಯತ್ನಿಸಿದ್ದಾರೆ, ಬೆಂಕಿ ನಂದಿಸುವ ವೇಳೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡ 12 ಗಂಟೆಗಳ ಬಳಿಕ ಮುಂಬೈ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಮಾಲ್​ನ ಪಕ್ಕದ ಕಟ್ಟಡದಲ್ಲಿದ್ದ ಸುಮಾರು 3,500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಮಾಲ್​ನಲ್ಲಿದ್ದ ಸುಮಾರು 300 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬೆಂಕಿ ಅವಘಡ ಸಂಭವಿಸಲು ಕಾರಣ ಏನೆಂಬುದು ಇನ್ನೂ ಸಹ ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ಮತ್ತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶ; ರೈತನ ಕಣ್ಣಲ್ಲಿ ನೀರು

ಮಾಲ್​ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಜ್ವಾಲೆಯನ್ನು ನಂದಿಸಲು 10 ಅಗ್ನಿಶಾಮಕ ವಾಹನಗಳು ಮತ್ತು ಏಳು ಜೆಟ್ಟಿಗಳು ಸ್ಥಳಕ್ಕೆ ಧಾವಿಸಿದ್ದವು. ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂಬೈನಲ್ಲಿ ಗುರುವಾರ ಸಂಭವಿಸಿದ ಎರಡನೇ ಬೆಂಕಿ ಅವಘಡ ಇದಾಗಿದೆ. ಈ ಹಿಂದೆ ಉಪನಗರ ಕುರ್ಲಾದ ಗಾರ್ಮೆಂಟ್ಸ್​​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಾಹ್ನ ಸುಮಾರು 3.15ರ ಸಮಯದಲ್ಲಿ ಕಾಮನಿ ಅಗ್ನಿಶಾಮಕ ಕೇಂದ್ರದ ಬಳಿಕ ಸುಂದರ್ ಬಾಗ್ ರಸ್ತೆಯಲ್ಲಿರುವ ಗಾರ್ಮೆಂಟ್​ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Published by: Latha CG
First published: October 23, 2020, 9:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading