ದೀಪಿಕಾ ಪಡುಕೋಣೆ ಮನೆ ಹೊಂದಿರುವ ಮುಂಬೈನ ಬ್ಯೂಮಾಂಡ್ ಟವರ್​ನಲ್ಲಿ ಭಾರೀ ಅಗ್ನಿ ಅವಘಡ


Updated:June 13, 2018, 6:53 PM IST
ದೀಪಿಕಾ ಪಡುಕೋಣೆ ಮನೆ ಹೊಂದಿರುವ ಮುಂಬೈನ ಬ್ಯೂಮಾಂಡ್ ಟವರ್​ನಲ್ಲಿ ಭಾರೀ ಅಗ್ನಿ ಅವಘಡ

Updated: June 13, 2018, 6:53 PM IST
-ನ್ಯೂಸ್ 18

ಮುಂಬೈ(ಜೂ.13): ಮುಂಬೈನ ವೊರ್ಲಿ ಪ್ರದೇಶದ ಪ್ರತಿಷ್ಠಿತ ಬ್ಯೂಮಾಂಡ್ ಟವರ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಬಿ ವಿಂಗ್​ನ 33ನೇ ಮಹಡಿಯಲ್ಲಿ ಅಗ್ನಿ ಕಾಣಿಸಿಕೊಂಡಿದ್ದು,  ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ನಿರತವಾಗಿವೆ.

ಇದೇ ಕಟ್ಟಡದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಹ ಫ್ಲ್ಯಾಟ್ ಮತ್ತು ಕಚೇರಿ ಹೊಂದಿದ್ದು, ಯಾವುದೇ ಹಾನಿಯಾಗಿಲ್ಲ.  ಘಟನೆ ನಡೆದಾಗ ದೀಪಿಕಾ ಮನೆಯಲ್ಲಿರಲಿಲ್ಲ ಎಂದು ಅಗ್ನಿಶಾಮಕದಳ ಮತ್ತು ಆಪ್ತಮೂಲಗಳು ತಿಳಿಸಿವೆ. ಇದುವರೆಗೂ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ನಮ್ಮ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ ಎಂದು ಮುಂಬೈ ಪೊಲೀಸ್  ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ತಿಳಿಸಲಾಗಿದೆ.

ಕಟ್ಟಡದಿಂದ ದಟ್ಟ ಹೊಗೆ ಹೊರಸೂಸುತ್ತಿದ್ದು, ಅಗ್ನಿಯ ತೀವ್ರತೆಗೆ ಸಾಕ್ಷಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಬೆಂಕಿ ಕಾಣಿಸಿಕೊಂಡ ಟವರ್ ಬಿ ನಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದ ಎರಡು ಟವರ್​ಗಳಲ್ಲಿ ಸ್ಥಳಾಂತರ ಕಾರ್ಯ ನಡೆಯುತ್ತಿದೆ. 10 ಅಗ್ನಿಶಾಮಕ ದಳ, ಎರಡು ಶೀಘ್ರ ಕಾರ್ಯಾಚರಣೆ ವಾಹನ, 5 ಜಂಬೋ ಟ್ಯಾಂಕರ್ ಮತ್ತು ಒಂದು ಆಂಬ್ಯುಲೆನ್ಸ್ ಸ್ಥಳದಲ್ಲಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...