Fire Accident: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಜನ ಸಾವು, 19 ಜನರಿಗೆ ಗಾಯ

Sivakasi Fire Accident: ಶಿವಕಾಶಿ ಬಳಿ ಇರುವ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 6 ಜನ ಸಾವನ್ನಪ್ಪಿದ್ದು, 19 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ

ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ

  • Share this:
ಚೆನ್ನೈ (ಫೆ. 26): ತಮಿಳುನಾಡಿನ ಶಿವಕಾಶಿಯಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಪಟಾಕಿ ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಪಟಾಕಿ ಬಾಕ್ಸ್​ಗಳು ಸಿಡಿದ ಪರಿಣಾಮ ಈ ಅವಘಡ ಸಂಭವಿಸಿದೆ. ಇನ್ನೂ 19 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಭಾರತದಲ್ಲಿ ಅತಿಹೆಚ್ಚು ಪಟಾಕಿಗಳು ಉತ್ಪತ್ತಿಯಾಗುವ ಶಿವಕಾಶಿಯಲ್ಲಿ ಇಂತಹ ದುರಂತ ಹೊಸದೇನಲ್ಲ. ಇಲ್ಲಿನ ಪಟಾಕಿ ಕಾರ್ಖಾನೆಗಳಲ್ಲಿ ಆಗಾಗ ಈ ರೀತಿಯ ಅವಘಡಗಳು ನಡೆಯುತ್ತಲೇ ಇರುತ್ತವೆ. ಇದೇ ತಿಂಗಳ ಆರಂಭದಲ್ಲಿ ಕೂಡ ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿತ್ತು. ಅದಾದ ಬಳಿಕ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಮತ್ತೊಂದು ದುರಂತ ನಡೆದಿದೆ.

ಶಿವಕಾಶಿ ಬಳಿ ಇರುವ ಕಲೈಯರ್ಕುರಿಚಿ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 6 ಜನ ಸಾವನ್ನಪ್ಪಿದ್ದು, 19 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಪಟಾಕಿ ತಯಾರಿಕೆಗಾಗಿ ಸಿಡಿಮದ್ದುಗಳನ್ನು ಸಂಗ್ರಹಿಸಲಾಗಿದ್ದ 10 ಶೆಡ್​ಗಳಿಗೂ ಬೆಂಕಿ ಆವರಿಸಿದೆ.ಈ ಘಟನೆಯ ಬಳಿಕ ಪಟಾಕಿ ಘಟಕದ ಮಾಲೀಕ ಥಾಂಕಾರಜ್ ಎಂ. ಪುದುಪಟ್ಟಿ ಎಂಬುವವರು ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾರೆ. ಪಟಾಕಿ ತಯಾರಿಸಲು ಲೈಸೆನ್ಸ್​ ಪಡೆದಿದ್ದ ಘಟಕದ 20 ಕೊಠಡಿಗಳಲ್ಲಿ 15 ಕೊಠಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಈ ಅವಘಡ ಉಂಟಾದ ಸ್ಥಳದಿಂದ 10 ಕಿ.ಮೀ ದೂರದಲ್ಲಿರುವ ಅಮತೂರ್ ಗ್ರಾಮದಲ್ಲಿ ಸಹ ಸ್ಫೋಟ ಮತ್ತು ಕಂಪನಗಳ ಶಬ್ದ ಕೇಳಿದ್ದು, ಜನರು ಕಂಗಾಲಾಗಿ ಮನೆಯಿಂದ ಹೊರಗೆ ಓಡಿಹೋಗಿದ್ದಾರೆ.

ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸಿಡಿಯಲು ನಿಖರ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಶಿವಕಾಶಿಯ ಅಚ್ಚಂಕುಲಂ ಪಟಾಕಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು 20ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದರು. ಅದಾದ ಬಳಿಕ ಇದೇ ತಿಂಗಳು ಶಿವಕಾಶಿಯಲ್ಲಿ ನಡೆಯುತ್ತಿರುವ 2ನೇ ಪಟಾಕಿ ದುರಂತ ಇದಾಗಿದೆ.
Published by:Sushma Chakre
First published: