HOME » NEWS » National-international » FIRE ACCIDENT MASSIVE FIRE BREAKS IN DELHI OKHLA SLUM OVER 20 SHANTIES GUTTED SCT

Fire Accident: ದೆಹಲಿಯಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ; 20ಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮ

Delhi Fire Accident: ದೆಹಲಿಯ ಸಂಜಯ್ ಕಾಲೋನಿಯ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.

Sushma Chakre | news18-kannada
Updated:February 7, 2021, 11:40 AM IST
Fire Accident: ದೆಹಲಿಯಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ; 20ಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮ
ದೆಹಲಿಯಲ್ಲಿ ಬೆಂಕಿ ಅವಘಡ
  • Share this:
ನವದೆಹಲಿ (ಫೆ. 7): ರಾಷ್ಟ್ರ ರಾಜಧಾನಿ ನವದೆಹಲಿಯ ಹರಿಕೇಶ್ ನಗರ ಮೆಟ್ರೋ ಸ್ಟೇಷನ್​ ಬಳಿ ಬೆಂಕಿ ಅಪಘಾತ ಸಂಭವಿಸಿದ್ದು, 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಓಖ್ಲಾ ಎರಡನೆ ಹಂತದ ಸಂಜಯ್ ಕಾಲೋನಿಯ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 26ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಆರಿಸಿವೆ. ಇಲ್ಲಿನ ಕತ್ರಾನ್‌ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸುತ್ತಮುತ್ತಲೂ ಇದ್ದ ಗುಡಿಸಲುಗಳಿಗೆ ಬೆಂಕಿ ಹರಡಿದೆ.


ನಸುಕಿನ ಜಾವ ಹರಡಿದ ಬೆಂಕಿಯಿಂದ 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತನಿಖೆ ನಡೆಸಲಾಗುತ್ತಿದೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಲಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30ರಿಂದ 40 ಜನರು ಬೆಂಕಿಯಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಿ, ಹೊರಗೆ ಕರೆತರಲಾಗಿದೆ.ಬಟ್ಟೆಗಳ ಕಟ್​ ಪೀಸ್​ಗಳ ರಾಶಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಅದು ಸುತ್ತಮುತ್ತಲೂ ಆವರಿಸಿದೆ. ಆ ಸ್ಥಳದ ಆಸುಪಾಸಿನಲ್ಲಿ 20ರಿಂದ 22 ಗುಡಿಸಲುಗಳನ್ನು ಹಾಕಿಕೊಂಡು ಕಾರ್ಮಿಕರು ವಾಸ ಮಾಡುತ್ತಿದ್ದರು. ಆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಆ ಜಾಗದಲ್ಲಿ ನಿಂತಿದ್ದ ಟ್ರಕ್​ಗೂ ಬೆಂಕಿ ಹೊತ್ತಿಕೊಂಡಿದ್ದು, ಟ್ರಕ್ ಸಂಪೂರ್ಣವಾಗಿ ಸುಟ್ಟುಹೋಗಿದೆ.
Published by: Sushma Chakre
First published: February 7, 2021, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories