ದೆಹಲಿಯಲ್ಲಿ ನಿನ್ನೆ ಮಧ್ಯರಾತ್ರಿ ಭಾರೀ ಬೆಂಕಿ ದುರಂತ; 1,000ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ

ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ 1,000ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ರಾತ್ರಿ ಗುಡಿಸಲುಗಳಲ್ಲಿ ಎಲ್ಲರೂ ಮಲಗಿರುವ ವೇಳೆ ಈ ದುರಂತ ಸಂಭವಿಸಿದೆ.

Sushma Chakre | news18-kannada
Updated:May 26, 2020, 3:15 PM IST
ದೆಹಲಿಯಲ್ಲಿ ನಿನ್ನೆ ಮಧ್ಯರಾತ್ರಿ ಭಾರೀ ಬೆಂಕಿ ದುರಂತ; 1,000ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ
ತುಘಲಕಾಬಾದ್​ನಲ್ಲಿ ಅಗ್ಮಿ ದುರಂತ
  • Share this:
ನವದೆಹಲಿ (ಮೇ 26): ರಾಷ್ಟ್ರ ರಾಜಧಾನಿ ನವದೆಹಲಿಯ ತುಘಲಕಾಬಾದ್ ಕೊಳಗೇರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 1,000ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಇದರಿಂದಾಗಿ ನೂರಾರು ಕುಟುಂಬಗಳು ಮನೆಯಿಲ್ಲದೆ ಬೀದಿಗೆ ಬಿದ್ದಿವೆ.

ಸೋಮವಾರ ಮಧ್ಯರಾತ್ರಿ 12.30ಕ್ಕೆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ಸಿಕ್ಕ ಕೂಡಲೆ 28 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿವೆ. ಬೆಳಗಿನ ಜಾವ 4 ಗಂಟೆಯವರೆಗೂ ಬೆಂಕಿ ಆರಿಸಲಾಗಿದ್ದು, ಈ ದುರಂತದಲ್ಲಿ ಯಾವೊಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಕೂಡ ಇನ್ನೂ ಪತ್ತೆಯಾಗಿಲ್ಲ.ಇದನ್ನೂ ಓದಿ: ಲಾಕ್‌ಡೌನ್ ಮಾಡಿಯೂ ವಿಫಲವಾದ ಏಕೈಕ ದೇಶ ಭಾರತ, ಅದಕ್ಕಾಗಿಯೇ ಮೋದಿ ಹಿಂದೆಸರಿದಿದ್ದಾರೆ: ರಾಹುಲ್ ಗಾಂಧಿ

ರಾತ್ರಿ ಗುಡಿಸಲುಗಳಲ್ಲಿ ಎಲ್ಲರೂ ಮಲಗಿರುವ ವೇಳೆ ಈ ದುರಂತ ಸಂಭವಿಸಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ, ರಾತ್ರಿ ಸುಮಾರು 1 ಗಂಟೆ ವೇಳೆಗೆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ಸಿಕ್ಕಿತು. ತಕ್ಷಣ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಲಾಯಿತು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, 1,000ದಿಂದ 1,200 ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹೊತ್ತಿಕೊಂಡ ಕೂಡಲೆ ಮಲಗಿದ್ದ ಜನರು ಗುಡಿಸಲಿನಿಂದ ಹೊರಗೆ ಓಡಿಬಂದಿದ್ದಾರೆ, ಇದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗುಡಿಸಲಿನ ಒಳಗೆ ಸಿಕ್ಕಿಹಾಕಿಕೊಂಡು, ಬೆಂಕಿಯಿಂದ ಸಾವನ್ನಪ್ಪಿದ ಬಗ್ಗೆ ಇದುವರೆಗೂ ನಮಗೆ ಮಾಹಿತಿ ಸಿಕ್ಕಿಲ್ಲ. ಇದು ದೊಡ್ಡ ಅವಘಡವಾದ್ದರಿಂದ ಪರಿಶೀಲಿಸಲಾಗುವುದು ಎಂದಿದ್ದಾರೆ.
First published: May 26, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading