Marriage: ವರನಿಗೆ ಮದುವೆ ಮನೆಯಲ್ಲೇ ಬಿತ್ತು ಸಖತ್​ ಗೂಸಾ; ಯಾಕೆ ಅಂತೀರಾ? ವಿಡಿಯೋ ನೋಡಿ

Dowry: ಶೇರ್ವಾಣಿ ಧರಿಸಿ ಹಸೆಮಣೆ ಏರಬೇಕಿದ್ದ ಮಧು ಮಗ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ಮದುವೆ ನಡೆಯಬೇಕಿದ್ದ ವರನನ್ನ ಮದುವೆ ಮಂಟಪದಲ್ಲಿ ಎಳೆದು ಚೆನ್ನಾಗಿ ಥಳಿಸಿದ್ದಾರೆ.ಕೊನೆಗೆ ವರನನ್ನು ಆತನ ಸಂಬಂಧಿ ಎನ್ನಲಾದ ಮಹಿಳೆ ರಕ್ಷಿಸಿದ್ದಾಳೆ

ವರದಕ್ಷಿಣೆ

ವರದಕ್ಷಿಣೆ

  • Share this:
    ಇತ್ತೀಚಿಗೆ ವರದಕ್ಷಿಣೆ(Dowry)ಎಂಬುದು ದೊಡ್ಡ ಭೂತವಾಗಿ ಬೆಳೆದು ನಿಂತಿದೆ. ವರದಕ್ಷಿಣೆಯ ದುರಾಸೆಗೆ(greedy) ಅನೇಕ ಜನರು ಬಲಿಯಾಗುತ್ತಿದ್ದರು ಜನರು ಮಾತ್ರ ಇದುವರೆಗೂ ಬುದ್ದಿ ಕಲಿತಿಲ್ಲ.. ವರದಕ್ಷಿಣೆಗಾಗಿ ಪ್ರತಿನಿತ್ಯ ಕಿರುಕುಳ(Torcher)ನೀಡುತ್ತಲೇ ಇದ್ದಾರೆ.. ಒಂದು ವೇಳೆ ಹುಡುಗಿ ಮನೆಯವರು ವರದಕ್ಷಿಣೆ ಕೊಡಲು ಒಪ್ಪಿಕೊಂಡರು ಹೆಚ್ಚಿನ ಪ್ರಮಾಣದ ವರದಕ್ಷಿಣೆಗಾಗಿ ಡಿಮ್ಯಾಂಡ್(Demand) ಮಾಡುವವರ ಸಂಖ್ಯೆ ಹೆಚ್ಚಾಗಿದೆ... ಕೆಲವರು ಒಲ್ಲದ ಮನಸ್ಸಿನಿಂದಲೇ ವರದಕ್ಷಿಣೆ ಕೊಡಲು ಒಪ್ಪಿಕೊಂಡರು, ವರದಕ್ಷಿಣೆಯ ದಾಹ ಮಿತಿಮೀರಿದಾಗ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ (Example)ಎಂದರೆ ಹೆಚ್ಚಿನ ವರದಕ್ಷಿಣೆಯನ್ನು ಉಳಿದವರ ನೊಬ್ಬನಿಗೆ ಮದುವೆ ಮಂಟಪದಲ್ಲಿ ಹಿಗ್ಗಾಮುಗ್ಗಾ ಥಳಿಸಿ ವರದಕ್ಷಿಣೆ ವಿರುದ್ಧ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ..

    ವರದಕ್ಷಿಣೆ ಕೇಳಿದ ವರನಿಗೆ ಮದುವೆಮನೆಯಲ್ಲೇ ಬಿತ್ತು ಗೂಸಾ

    ಹುಡುಗಿ ಮನೆಯವರು ಕೊಡುವ ವರದಕ್ಷಿಣೆ ಮೇಲೆಯೇ ಸಂಬಂಧಗಳನ್ನು ಬೆಸೆಯುವ ಕೆಟ್ಟ ಸಂಪ್ರದಾಯ ಆಧುನಿಕ ಯುಗದಲ್ಲಿಯೂ ಮುಂದುವರೆಯುತ್ತಿರುವುದು ದುರಂತದ ಸಂಗತಿ. ಮದುವೆಗಳು ಪಕ್ಕಾ ಕೊಂಡುಕೊಳ್ಳುವ ವ್ಯವಹಾರವಾಗಿ ನಡೆಯುತ್ತಿರುವುದರಿಂದಲೇ ಹಣದಾಹಿ ಗಂಡನ ಮನೆಯವರು ಹೆಣ್ಣನ್ನು ಹಣ ತರುವ ಸರಕಾಗಿ ಮಾರ್ಪಡಿಸಿ. ಆಕೆ ತನ್ನೊಂದಿಗೆ ತಂದ ಹಣ, ಚಿನ್ನವನ್ನು ತಿಂದು ತೇಗಿ ಮತ್ತೆ, ಮತ್ತೆ ಬೇಡಿಕೆಯಿಡುತ್ತಾರೆ. ಆದರೆ ಈ ರೀತಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ವರನಿಗೆ ವಧುವಿನ ಕಡೆಯವರು ಉತ್ತರಪ್ರದೇಶದಲ್ಲಿ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ.

    ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣು

    ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಮದುವೆಯಾಗಬೇಕಿದ್ದ ವರ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕುಟುಂಬಸ್ಥರು ಮದುವೆ ನಡೆಯುತ್ತಿದ್ದ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ..ಅದೇ ಈ ಘಟನೆಯನ್ನ ಮದುವೆಗೆ ಬಂದವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿದೆ..?

    ಶೇರ್ವಾಣಿ ಧರಿಸಿ ಹಸೆಮಣೆ ಏರಬೇಕಿದ್ದ ಮಧು ಮಗ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ಮದುವೆ ನಡೆಯಬೇಕಿದ್ದ ವರನನ್ನ ಮದುವೆ ಮಂಟಪದಲ್ಲಿ ಎಳೆದು ಚೆನ್ನಾಗಿ ಥಳಿಸಿದ್ದಾರೆ.ಕೊನೆಗೆ ವರನನ್ನು ಆತನ ಸಂಬಂಧಿ ಎನ್ನಲಾದ ಮಹಿಳೆ ರಕ್ಷಿಸಿದ್ದಾಳೆ. ಇದರ ಮಧ್ಯೆ, ಬ್ಯಾಂಕ್ವೆಟ್ ಹಾಲ್ ಸಿಬ್ಬಂದಿ ಮತ್ತು ಇತರ ಅತಿಥಿಗಳು ಘಟನೆಯನ್ನು ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ. ಹೆಚ್ಚಿನ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ಕಡೆಯವರು ವ್ಯಕ್ತಿಗೆ ಥಳಿಸಿದ್ದಾರೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎನ್ನಲಾಗಿದೆ.



    10 ಲಕ್ಷ ರೂಪಾಯಿ ವರದಕ್ಷಿಣೆ

    ಇನ್ನು ಆಗ್ರಾ ನಿವಾಸಿ ಮುಝಮ್ಮಿಲ್ ಎಂಬವರ ಮದುವೆಯಾಗಲು ಆತನ ತಂದೆಯ ಮೂಲಕ 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ. ಬೇಡಿಕೆ ಈಡೇರಿಸದಿದ್ದರೆ ಮದುವೆ ರದ್ದು ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಹೀಗಾಗಿ ವಧುವಿನ ಕಡೆಯವರು ವರನಿಗೆ ಮೂರು ಲಕ್ಷ ರೂಪಾಯಿ ನಗದು ಒಂದು ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು.. ಇಷ್ಟಕ್ಕೆ ಸುಮ್ಮನಾಗದ ವರನ ಕಡೆಯವರು ದುರಾಸೆಯನ್ನು ವಧುವಿನ ಮನೆಯವರ ಮುಂದೆ ಇಟ್ಟಿದ್ದಾರೆ.. ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರಿಂದ, ವರನಾ ಮನವೊಲಿಕೆಗೆ ವಧುವಿನ ಕಡೆಯವರು ಪ್ರಯತ್ನಪಟ್ಟಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ. ಅಲ್ಲದೆ ವರನಿಗೆ ಈ ಹಿಂದೆ 2-3 ಬಾರಿ ಮದುವೆಯಾಗಿದೆ ಎಂದು ಹುಡುಗಿ ಕಡೆಯವರು ಹೇಳಿಕೊಂಡಿದ್ದಾರೆ.ವರನನ್ನು ಆಗ್ರಾ ನಿವಾಸಿ ಮುಝಮ್ಮಿಲ್ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಆರು ತಿಂಗಳಿಗೆ ಮುರುಟಿದ ಫೇಸ್​ಬುಕ್​ ಪ್ರೇಮ; ವರದಕ್ಷಿಣೆ ಕಿರುಕುಳ ಕಾರಣವಾಯ್ತಾ ಯುವತಿ ಸಾವಿಗೆ

    ವರನ ವಿರುದ್ಧ ಪ್ರಕರಣ ದಾಖಲು

    ಇನ್ನು ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಇಟ್ಟ ಮದುಮಗನಿಗೆ ವಧುವಿನ ಕಡೆಯವರು ಮದುವೆ ಮಂಟಪದಲ್ಲಿ ಥಳಿಸಿರುವ ವಿಡಿಯೋವನ್ನ, ಮದುವೆಗೆ ಬಂದಿದ್ದ ಜನರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು.. ಅದೇ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ ಇಟ್ಟ ವರನ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದರು.ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
    Published by:ranjumbkgowda1 ranjumbkgowda1
    First published: