• Home
  • »
  • News
  • »
  • national-international
  • »
  • Haryana Minister: ಮಹಿಳಾ ಕೋಚ್‌ಗೆ ಲೈಂಗಿಕ ಕಿರುಕುಳ ಆರೋಪ, ಹರಿಯಾಣ ಕ್ರೀಡಾ ಸಚಿವರ ತಲೆದಂಡ! ಇದು ನನ್ನ ವಿರುದ್ಧದ ಷಡ್ಯಂತ್ರ ಎಂದ ಸಂದೀಪ್ ಸಿಂಗ್

Haryana Minister: ಮಹಿಳಾ ಕೋಚ್‌ಗೆ ಲೈಂಗಿಕ ಕಿರುಕುಳ ಆರೋಪ, ಹರಿಯಾಣ ಕ್ರೀಡಾ ಸಚಿವರ ತಲೆದಂಡ! ಇದು ನನ್ನ ವಿರುದ್ಧದ ಷಡ್ಯಂತ್ರ ಎಂದ ಸಂದೀಪ್ ಸಿಂಗ್

ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್

ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್

ಮಹಿಳಾ ಜೂನಿಯರ್ ಅಥ್ಲೆಟಿಕ್ಸ್​ ಕೋಚ್ ನೀಡಿದ ದೂರಿನ ಮೇರೆಗೆ ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಬಿಜೆಪಿ ಶಾಸಕ ಸಂದೀಪ್ ಸಿಂಗ್ ಅವರು ಮೊದಲು ನನ್ನನ್ನು ಜಿಮ್‌ನಲ್ಲಿ ನೋಡಿದ್ದರು. ನಂತರ ಇನ್‌ಸ್ಟಾಗ್ರಾಮ್‌ ಮೂಲಕ ನನ್ನನ್ನು ಸಂಪರ್ಕಿಸಿದರು. ಬಳಿಕ ತಮ್ಮನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಲೇಡಿ ಕೋಚ್ ಆರೋಪಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Chandigarh, India
  • Share this:

ಚಂಡೀಗಢ: ಮಹಿಳಾ ಜೂನಿಯರ್ ಅಥ್ಲೆಟಿಕ್ಸ್​ ಕೋಚ್ ( Junior Athletics Coach) ​ ನೀಡಿದ ದೂರಿನ ಮೇರೆಗೆ ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ (Haryana Sports Minister Sandeep Singh) ವಿರುದ್ಧ ಲೈಂಗಿಕ ಕಿರುಕುಳ (Sexual harassment) ಮತ್ತು ಅಕ್ರಮ ಬಂಧನದ (Outraging Modesty) ಆರೋಪದಡಿ ಚಂಡೀಗಢ ಪೊಲೀಸರು (Chandigarh Police) ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದೀಪ್ ಸಿಂಗ್ ಅವರು, ಇದು ನನ್ನ ಹೆಸರಿಗೆ ಮಸಿ ಬಳಿಯಲು ಮಾಡಿರುವ ಪ್ರಯತ್ನವಾಗಿದೆ ಎಂದು  ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಮಗ್ರವಾಗಿ ತನಿಖೆ (Investigation) ನಡೆಸಬೇಕು ಎಂದು  ಆಗ್ರಹಿಸಿ, ತನಿಖೆಯ ವರದಿ ಬರುವವರೆಗೂ ಕ್ರೀಡಾ ಇಲಾಖೆಯ (Sports Department) ಜವಾಬ್ದಾರಿಯನ್ನು  ಮುಖ್ಯಮಂತ್ರಿಗಳಿಗೆ (Chief Minister) ಹಸ್ತಾಂತರಿಸುತ್ತೇನೆ ಎಂದು ತಿಳಿಸಿದ್ದಾರೆ.


ಸಚಿವ ಸಂದೀಪ್ ಸಿಂಗ್ ಮೇಲೆ ಚಂಡೀಗಢದ ಪೊಲೀಸರಿಂದ ಎಫ್​ಐಆರ್


ಸ್ಥಳೀಯ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ, ಹರಿಯಾಣದ ಕ್ರೀಡಾ ಸಚಿವರ ವಿರುದ್ಧ  2022ರ ಡಿಸೆಂಬರ್ 31ರಂದು ರಂದು ಐಪಿಸಿ ಸೆಕ್ಷನ್ 354 (ಕ್ರಿಮಿನಲ್ ಉದ್ದೇಶದಿಂದ ಬಲವಂತವಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು), 354A (ಲೈಂಗಿಕ ಕಿರುಕುಳ), 354B  (ಮಹಿಳೆಯನ್ನು ಬೆತ್ತಲಾಗುವಂತೆ ಒತ್ತಾಯಿಸುವುದು), 342 (ತಪ್ಪು ಉದ್ದೇಶದಿಂದ ನಿರ್ಬಂಧಿಸುವುದು) , 506 (ಕ್ರಿಮಿನಲ್ ಬೆದರಿಕೆ) ರ ಅಡಿಯಲ್ಲಿ ಎಫ್‌ಐಆರ್ ಅನ್ನು ಚಂಡೀಗಢದ ಪೊಲೀಸ್ ಠಾಣೆ ಸೆಕ್ಟರ್ 26 ರಲ್ಲಿ ದಾಖಲಿಸಲಾಗಿದೆ


ಮಹಿಳಾ ಕೋಚ್​ ಅನ್ನು ಮೊದಲ ಬಾರಿಗೆ ಜಿಮ್​ನಲ್ಲಿ ನೋಡಿದ್ದ ಸಚಿವರು


ಬಿಜೆಪಿ ಶಾಸಕ ಸಂದೀಪ್ ಸಿಂಗ್ ಅವರು ಮೊದಲು ನನ್ನನ್ನು ಜಿಮ್‌ನಲ್ಲಿ ನೋಡಿದ್ದರು. ನಂತರ ಇನ್‌ಸ್ಟಾಗ್ರಾಮ್‌ ಮೂಲಕ ನನ್ನನ್ನು ಸಂಪರ್ಕಿಸಿದರು. ಬಳಿಕ ತಮ್ಮನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಲೇಡಿ ಕೋಚ್ ಆರೋಪಿಸಿದ್ದಾರೆ.


ಇನ್​ಸ್ಟಾಗ್ರಾಮ್​ನಲ್ಲಿ ಮಹಿಳೆಗೆ ಮೆಸೇಜ್ ಮಾಡಿದ್ದ ಸಚಿವ


ಇನ್​ಸ್ಟಾಗ್ರಾಮ್​ನಲ್ಲಿ ಮೇಸೆಜ್ ಮಾಡಿ ನನ್ನ ನ್ಯಾಷನಲ್​ ಗೇಮ್ಸ್​ ಸರ್ಟಿಫಿಕೇಟ್​ ತಮ್ಮ ಬಳಿ ಇದ್ದು, ಅವುಗಳನ್ನು ತೆಗೆದುಕೊಂಡು ಹೋಗಲು ಭೇಟಿಯಾಗುವಂತೆ ಸೂಚಿಸಿದರು. ದುರದೃಷ್ಟವಶಾತ್‌ ಫೆಡರೇಷನ್‌ ಕಡೆಯಿಂದ ನನ್ನ ಸರ್ಟಿಫಿಕೇಟ್‌ ಕಾಣೆಯಾಗಿದೆ. ಆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಂತರ ಈ ಎಲ್ಲಾ ಕಾರಣದಿಂದಾಗಿ ಕೊನೆಗೆ ಸಚಿವರನ್ನು ಭೇಟಿಯಾಗಲು ಒಪ್ಪಿಕೊಂಡೆ.


ಸರ್ಟಿಫಿಕೇಟ್​ ಸಂಗ್ರಹಿಸಲು ಹೋಗಿದ್ದ ಮಹಿಳೆ ಜೊತೆ ದುರ್ನಡತೆ


ನಂತರ ಕೆಲವು ದಾಖಲೆಗಳನ್ನು ತೆಗೆದುಕೊಂಡು ಅವರ ಮನೆ ಹಾಗೂ ಕಚೇರಿಯಲ್ಲಿ ಹೋದಾಗ ಸಚಿವರು ಲೈಂಗಿಕ ದುರ್ನಡತೆ ತೋರಿದರು ಎಂದು ಆರೋಪಿಸಿದ್ದಾರೆ. ಸದ್ಯ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದ ಹಿನ್ನೆಲೆ, ಹರಿಯಾಣ ಸರ್ಕಾರ ತನಿಖೆ ನಡೆಸಲು ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನುರಚಿಸಿದೆ.


ನನಗೆ ಪೊಲೀಸರು ನ್ಯಾಯ ಕೊಡಿಸ್ತಾರೆ ಎಂಬ ವಿಶ್ವಾಸವಿದೆ


ಈ ಪ್ರಕರಣ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಿಳೆ, ಹಿರಿಯ ಪೊಲೀಸ್ ಮುಖ್ಯಾಧಿಕಾರಿಗೆ ನಾನು ದೂರು ನೀಡಿದ್ದೇನೆ. ಚಂಡೀಗಢ ಪೊಲೀಸರು ತನಿಖೆ ನಡೆಸಿದ ನನಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


FIR registered against Haryana Sports Minister Sandeep Singh, the minister said Attempt to spoil my image
ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್


ಇದನ್ನೂ ಓದಿ: Arjun Tendulkar : ಸಿಕ್ಸ್​ ಪ್ಯಾಕ್​ ಲುಕ್​​ನಲ್ಲಿ ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್; ಪಾಂಡ್ಯ, ಕೊಹ್ಲಿಗೆ ಸಖತ್ ಪೈಪೋಟಿ!


ವೃತ್ತಿಪರ ಹಾಕಿ ಆಟಗಾರರಾಗಿರುವ ಸಂದೀಪ್‌ ಸಿಂಗ್‌


ಕುರುಕ್ಷೇತ್ರದ ಪೆಹವಾ ಕ್ಷೇತ್ರದ ಬಿಜೆಪಿ ಶಾಸಕ ಸಂದೀಪ್‌ ಸಿಂಗ್‌ ಅವರು ವೃತ್ತಿಪರ ಹಾಕಿ ಆಟಗಾರ. ಅವರು ಭಾರತದ ಹಾಕಿ ತಂಡದ ನಾಯಕರಾಗಿದ್ದವರು. ಅವರ ಜೀವನಾಧಾರಿತ ಸಿನಿಮಾ 2018ರಲ್ಲಿ 'ಸೂರ್ಮಾ' ಹೆಸರಿನಲ್ಲಿ ಬಿಡುಗಡೆಯಾಗಿದೆ. ಆ ಸಿನಿಮಾದಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್‌ ದೊಸಾಂಜ್‌ ಅವರು ಸಂದೀಪ್‌ ಪಾತ್ರದಲ್ಲಿ ನಟಿಸಿದ್ದರು.

Published by:Monika N
First published: