ಕೋಮು ಪ್ರಚೋದನಾತ್ಮಕ ಭಾಷಣ; ಕಾಂಗ್ರೆಸ್​​​ ಸ್ಟಾರ್​​ ಪ್ರಚಾರಕ ನವಜ್ಯೋತ್ ಸಿಂಗ್ ಸಿಧು ವಿರುದ್ಧ ಎಫ್​​ಐಆರ್​​!

ಇನ್ನು ಮೋದಿ ಅತಿದೊಡ್ಡ ಸುಳ್ಳುಗಾರ; ಮಹಾತ್ಮ ಗಾಂಧಿ ಜನಿಸಿದ ಗುಜರಾತ್‌ನಿಂದಲೇ ದೇಶದ ಅತಿದೊಡ್ಡ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿಯೂ ಬಂದಿರುವುದು ದುರಂತ. ಮೋದಿ ಅವರನ್ನು ಶ್ರೀಮಂತರ ಪ್ರಧಾನಿ ಎಂದು ಕಾಂಗ್ರೆಸ್​​ ಸ್ಟಾರ್​​ ಪ್ರಚಾರಕ ಜರಿದಿದ್ದರು.

Ganesh Nachikethu | news18
Updated:April 17, 2019, 10:28 AM IST
ಕೋಮು ಪ್ರಚೋದನಾತ್ಮಕ ಭಾಷಣ; ಕಾಂಗ್ರೆಸ್​​​ ಸ್ಟಾರ್​​ ಪ್ರಚಾರಕ ನವಜ್ಯೋತ್ ಸಿಂಗ್ ಸಿಧು ವಿರುದ್ಧ ಎಫ್​​ಐಆರ್​​!
ನವಜೋತ್​​ ಸಿಂಗ್​ ಸಿಧು
Ganesh Nachikethu | news18
Updated: April 17, 2019, 10:28 AM IST
ನವದೆಹಲಿ(ಏ.17): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಸ್ಲಿಮರು ಒಗ್ಗೂಡಬೇಕು ಎಂದು ಕರೆ ನೀಡಿದ್ದ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ ನವಜ್ಯೋತ್ ಸಿಂಗ್ ಸಿಧು ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಕಟಿಯಾರ್ ಜಿಲ್ಲಾಡಳಿತ ಎಫ್‌ಐಆರ್ ದಾಖಲಿಸಿದೆ. ಅಲ್ಲದೇ ಸದ್ಯದಲ್ಲೇ ನವಜ್ಯೋತ್​​​ ಸಿಂಗ್​​ ಸಿಧು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾ ಕಚೇರಿಯ ಮೂಲಗಳು ತಿಳಿಸಿವೆ.

ಇನ್ನು ಬಿಹಾರದ ಕಟಿಯಾರ್ ಜಿಲ್ಲೆಯ ಬರ್ಸೋಯಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಉಲ್ಲಂಘಿಸಿದ್ದ ಕಾರಣ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ- 1951ರ ಸೆಕ್ಷನ್ 123(3) ಮತ್ತು 125ರ ಅನ್ವಯ ದೂರು ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದ ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಠಾಣಾಧಿಕಾರಿ ಚಂದ್ರಪ್ರಕಾಶ್ ಹೇಳಿದ್ದಾರೆ.

ನಿನ್ನೆ ಬಿಹಾರದ ಕಟಿಹಾರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಾರಿಕ್‌ ಅನ್ವರ್‌ ಪರ ನವಜ್ಯೋತ್​​ ಸಿಂಗ್​​ ಸಿಧು ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ, ''ಒವೈಸಿ ತರಹದ ಮುಸ್ಲಿಂ ನಾಯಕರನ್ನು ಕರೆತರುವ ಮೂಲಕ ಮತ ವಿಭಜನೆಗೆ ಸಂಚು ರೂಪಿಸಲಾಗಿದೆ. ಇದರ ಬಗ್ಗೆ ನೀವೆಲ್ಲಾ ಎಚ್ಚರದಿಂದ ಇರಬೇಕು. ಮುಸ್ಲಿಮರೆಲ್ಲರೂ ಒಂದಾದರೆ ಮೋದಿ ಕತೆ ಮುಗಿಸಬಹುದು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಸಿಕ್ಸ್‌ ಹೊಡೆದು ಮೋದಿಯನ್ನು ಬೌಂಡರಿಯಿಂದ ಆಚೆಗಟ್ಟುವ ಕಾಲ ಬಂದಿದೆ,'' ಎಂದು ಹೇಳಿದ್ದರು.

ಇದನ್ನೂ ಓದಿ: ನಾಳೆ ಕರ್ನಾಟಕ ಮೊದಲ ಹಂತದ ಮತದಾನ; ಬಹಿರಂಗ ಪ್ರಚಾರ ಅಂತ್ಯ; ಇಂದು ಮನೆಮನೆ ಪ್ರಚಾರಕ್ಕೆ ಅವಕಾಶ!

ಇನ್ನು ಮೋದಿ ಅತಿದೊಡ್ಡ ಸುಳ್ಳುಗಾರ; ಮಹಾತ್ಮ ಗಾಂಧಿ ಜನಿಸಿದ ಗುಜರಾತ್‌ನಿಂದಲೇ ದೇಶದ ಅತಿದೊಡ್ಡ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿಯೂ ಬಂದಿರುವುದು ದುರಂತ. ಮೋದಿ ಅವರನ್ನು ಶ್ರೀಮಂತರ ಪ್ರಧಾನಿ ಎಂದು ಕಾಂಗ್ರೆಸ್​​ ಸ್ಟಾರ್​​ ಪ್ರಚಾರಕ ಜರಿದಿದ್ದರು.

ಇದನ್ನೂ ಓದಿ: ನಾಳೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ; ಯಾವ ಕ್ಷೇತ್ರದಿಂದ ಯಾರ್ಯಾರು ಕಣದಲ್ಲಿ?; ಇಲ್ಲಿದೆ ಮಾಹಿತಿ
Loading...

ಕೋಮು ಪ್ರಚೋದನಾತ್ಮಕ ಭಾಷಣಕ್ಕಾಗಿ ಚುನಾವಣಾ ಆಯೋಗ ನಾಲ್ವರು ಪ್ರಮುಖ ನಾಯಕರ ವಿರುದ್ಧ ಕ್ರಮ ಜರುಗಿಸಿತ್ತು. ಈ ಮರುದಿನವೇ ಸಿಧು ಅಂಥದ್ದೇ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಇದನ್ನು ಖಂಡಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಸಿಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿಯೂ ದೂರು ನೀಡಿತ್ತು. ಈ ಧಾರದ ಮೇಲೆ ಸಿಧು ಮೇಲೆ ಆಯೋಗ ಎಫ್​ಐಆರ್​​ ದಾಖಲಿಸಿದೆ.
-------------
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626