Ponniyin Selvan: ಮಣಿರತ್ನಂ ನಿರ್ದೇಶನದ ಸಿನಿಮಾ ಶೂಟಿಂಗ್​ನಲ್ಲಿ ಅವಘಡ: ಎಫ್​ ಐಆರ್​ ದಾಖಲು

ಜನಪ್ರಿಯ ನಿರ್ದೇಶಕ ಪೊನ್ನಿಯಿನ್ ಸೆಲ್ವನ್​ (Ponniyin Selvan) ಸಿನಿಮಾದ ಚಿತ್ರೀಕಣರ ನಡೆಯುತ್ತಿದೆ. ಈ ವೇಳೆ ಕುದರೆಯೊಂದು ಸಾವನ್ನಪ್ಪಿದೆ. ಈ ಬಗ್ಗೆ ಹೈದರಾಬಾದ್​ನಲ್ಲಿ ಕುದುರೆಯ ಮಾಲೀಕ, ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಚಿತ್ರತಂಡದ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರ ಪೊನ್ನಿಯಿನ್ ಸೆಲ್ವನ್

ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರ ಪೊನ್ನಿಯಿನ್ ಸೆಲ್ವನ್

  • Share this:
ಸಿನಿಮಾಗಳಲ್ಲಿ ಪ್ರಾಣಿ-ಪಕ್ಷಿಗಳನ್ನು ಬಳಕೆ ಮಾಡುವುದು ತುಂಬಾ ಸಮಯದಿಂದ ನಡೆದುಕೊಂಡು ಬರುತ್ತಲೇ ಇದೆ. ಇನ್ನು ಈ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಪ್ರಾಣಿಗಳ ಜೀವಕ್ಕೆ ಕುತ್ತಾಗಿರುವ ಘಟನೆಗಳೂ ಸಾಕಷ್ಟು ನಡೆದಿದೆ. ಈ ಕಾರಣಕ್ಕೆ ಈ ಸಂಬಂಧ ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಆಗಿನಿಂದ ಸಿನಿಮಾ ಚಿತ್ರೀಕರಣಗಳಲ್ಲಿ ಪ್ರಾಣಿ-ಪ್ಕಷಿಗಳನ್ನು ಬಳಸುವುದಾದರೆ ಮನುಷ್ಯರಂತೆಯೇ ಅವುಗಳ ಜೀವಕ್ಕೂ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಆಯಾ ಚಿತ್ರತಂಡದ ಕರ್ತವ್ಯವಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಪ್ರಾಣಿಗಳ ಜೀವಕ್ಕೆ ಕುತ್ತು ಎದುರಾಗುತ್ತದೆ. ಕಾಲಿವುಡ್​ನ ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರು ನಿರ್ದೇಶನ ಮಾಡುತ್ತಿರುವ ಪೊನ್ನಿಯಿನ್ ಸೆಲ್ವನ್ ​ (Ponniyin Selvan) ಸಿನಿಮಾದ ಶೂಟಿಂಗ್​ನಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದೆ.

ಜನಪ್ರಿಯ ನಿರ್ದೇಶಕ ಪೊನ್ನಿಯಿನ್ ಸೆಲ್ವನ್​ (Ponniyin Selvan) ಸಿನಿಮಾದ ಚಿತ್ರೀಕಣರ ನಡೆಯುತ್ತಿದೆ. ಈ ವೇಳೆ ಕುದರೆಯೊಂದು ಸಾವನ್ನಪ್ಪಿದೆ. ಈ ಬಗ್ಗೆ ಹೈದರಾಬಾದ್​ನಲ್ಲಿ ಕುದುರೆಯ ಮಾಲೀಕ, ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಚಿತ್ರತಂಡದ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Aishwarya Rai Bachchan, Mani Ratnam, Vikram, Jayam Ravi, Trisha, Karthi, Ponniyin Selvan, ಮಣಿರತ್ನಂ ಮಾಸ್ಟರ್‌ಪೀಸ್, ಐಶ್ವರ್ಯ ರೈ ಬಚ್ಚನ್, ಪೊನ್ನಿಯಿನ್ ಸೆಲ್ವನ್, Aishwarya Rai Bachchan To Begin Her Last Schedule For Mani Ratnams Ponniyin Selvan ae
ಮಣಿರತ್ನಂ ಅವರ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಐಶ್ವರ್ಯಾ ರೈ


ಸಿನಿಮಾ ಚಿತ್ರೀಕರಣ ಕಳೆದ ಕೆಲವು ದಿನಗಳ ನಡೆಯುತ್ತಿದೆ. ಆಗಸ್ಟ್​ 11ರಂದು ಕುದುರೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಗಸ್ಟ್​ 18ರಂದು ಎಫ್​ಐಆರ್​ ದಾಖಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಮಾತ್ರ ನಿನ್ನೆ ಅಂದರೆ ಸೆ. 2ರಂದು. ದ ಅನಿಮಲ್ ವೆಲ್​ಫೇರ್ ಬೋರ್ಡ್​ ಆಫ್​ ಇಂಡಿಯಾ (AWBI) ಕುದುರೆ ಸಾವಿನ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಹೈದರಾಬಾದ್​ನ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ. ಜೊತೆಗೆ ತಪ್ಪುತಸ್ಥರಿಗೆ ಸೂಕ್ತವಾದ ಶಿಕ್ಷೆ ಆಗುವಂತೆ ಮಾಡಬೇಕೆಂದು ಆಗ್ರಹಿಸಿದೆ.

ಇದನ್ನೂ ಓದಿ: Vaishnavi Gowda: ರೇಷ್ಮೆ ಸೀರೆಯುಟ್ಟು ಮಹಾಲಕ್ಷ್ಮಿಯಂತೆ ಕಂಗೊಳಿಸಿದ ಬಿಗ್ ಬಾಸ್​ ಖ್ಯಾತಿಯ ರೇಷ್ಮಕ್ಕ!

ಸಿನಿಮಾದಲ್ಲಿ ಯುದ್ಧ ನಡೆಯುವ ದೃಶ್ಯಗಳ ಚಿತ್ರೀಕರಣಕ್ಕಾಗಿ ಕುದುರೆಗಳನ್ನು ಬಳಸಲಾಗುತ್ತಿದ್ದು, ಶೂಟಿಂಗ್ ಮಾಡುವ ವೇಳೆ ಕುದುರೆ ಕೆಳಗೆ ಬಿದ್ದು ಪೆಟ್ಟಾಗಿ ಅಸುನೀಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕಿದೆ. ಪೇಟಾ ಹೇಳಿರುವಂತೆ ಸುಸ್ತಾಗಿರುವ ಕುದುರೆಗಳನ್ನು ಸತತವಾಗಿ ಬಿಸಿಲಿನಲ್ಲಿ ಶೂಟಿಂಗ್​ನಲ್ಲಿ ಬಳಸಿಕೊಂಡ ಕಾರಣದಿಂದ ಡಿಹೈಡ್ರೇಷನ್​ ಆಗಿ ಕುದುರೆ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಲು ಕಠಿಣ ನಿಯಮಗಳಿವೆ. ಹಾಗಾಗಿಯೇ ಚಿತ್ರತಂಡಗಳು ಪ್ರಾಣಿಗಳ ಬದಲಾಗಿ ಸಿಜಿಐ ಅಥವಾ ಇತರೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಾರೆ. ಇದು ಪೌರಾಣಿಕ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ಯುದ್ಧದ ಸನ್ನಿವೇಶಗಳು ತುಂಬಾ ಇವೆ. ಹೀಗಾಗಿಯೇ ಕುದುರೆಗಳನ್ನು ಬಳಸಲಾಗಿದೆಯಂತೆ.

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್ ಕಟ್ ಹೇಳುತ್ತಿರುವ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ 47 ವರ್ಷದ ಐಶ್ವರ್ಯ ರೈ ಬಚ್ಚನ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ 4 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್​ಗೆ ಮರಳಲು ರೆಡಿಯಾಗಿದ್ದಾರೆ. ಬರೋಬ್ಬರಿ 12 ವರ್ಷಗಳ ಬಳಿಕ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಹೆಸರಾಂತ ತಮಿಳು ಲೇಖಕ ಕಲ್ಕಿ ಕೃಷ್ಣಮೂರ್ತಿ 1954ರಲ್ಲಿ ರಚಿಸಿದ್ದ ಚೋಳ ರಾಜಮನೆತನದ ಐತಿಹಾಸಿಕ ಹಿನ್ನೆಲೆಯ ಕಾದಂಬರಿ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ತಮಿಳಿನ ಲೆಜೆಂಡರಿ ನಾಯಕ ನಟ ಎಂಜಿ ರಾಮಚಂದ್ರನ್ ಅವರೇ 1958ರಲ್ಲಿ ಈ ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ 64 ವರ್ಷಗಳ ಹಿಂದೆಯೇ ಬರೋಬ್ಬರಿ 10 ಸಾವಿರ ರೂಪಾಯಿಗೆ ಹಕ್ಕು ಖರೀದಿಸಿದ್ದರು.

ವೈಜಯಂತಿ ಮಾಲ, ಜೆಮಿನಿ ಗಣೇಶನ್, ಬಿ. ಸರೋಜಾ ದೇವಿ, ಪದ್ಮಿನಿ, ಸಾವಿತ್ರಿ ಸೇರಿದಂತೆ ಹಲವು ದಿಗ್ಗಜರು ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅದೇ ಸಮಯದಲ್ಲಿ ಎಂಜಿಆರ್ ಅವರಿಗೆ ಅಪಘಾತ ಸಂಭವಿಸಿ 6 ತಿಂಗಳ ಕಾಲ ಸಿನಿಮಾಗಳಿಂದ ದೂರ ಉಳಿಯಬೇಕಾಗಿತ್ತು. ಕ್ರಮೇಣ ಬೇರೆ ಸಿನಿಮಾಗಳಲ್ಲಿ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ಈ ಸಿನಿಮಾ ಟೇಕಾಫ್ ಆಗಲೇಯಿಲ್ಲ.

ಇದನ್ನೂ ಓದಿ: Tamannaah Bhatia: ಕರೀನಾ ಕಪೂರ್​ ನಂತರ ತಮ್ಮ ಪುಸ್ತಕ ಹೊರ ತಂದ ತಮನ್ನಾ ಭಾಟಿಯಾ..!

ಬಳಿಕ, 1994ರಲ್ಲಿ ನಿರ್ದೇಶಕ ಮಣಿರತ್ನಂ ಪೊನ್ನಿಯಿನ್ ಸೆಲ್ವನ್ ನನ್ನ ಕನಸಿನ ಪ್ರಾಜೆಕ್ಟ್ ಎಂದು ಹೇಳಿಕೊಂಡಿದ್ದರು. ಅದರಂತೆ 2010ರಲ್ಲಿ ವಿಜಯ್, ಮಹೇಶ್ ಬಾಬು, ಸತ್ಯರಾಜ್, ಆರ್ಯ ಸೇರಿದಂತೆ ಹೊಸ ತಂಡ ಕಟ್ಟಿಕೊಂಡು ಸಿನಿಮಾ ಫೋಟೋಶೂಟ್‌ಗೆ ಸಿದ್ಧತೆ ನಡೆಸಿದ್ದರು. ಬರೋಬ್ಬರಿ 100 ಕೋಟಿ ರೂಪಾಯಿ ಬಜೆಟ್ ಪ್ಲಾನ್​ ಮಾಡಲಾಗಿತ್ತಾದರೂ ಮತ್ತಷ್ಟು ಬಜೆಟ್ ಹೆಚ್ಚುವ ಆತಂಕದಲ್ಲಿ ನಿರ್ಮಾಪಕರು ಹಿಂದೆ ಸರಿದಿದ್ದರು. ಹೀಗಾಗಿ ಪೊನ್ನಿಯಿನ್ ಸೆಲ್ವನ್ ಮತ್ತೆ ಸ್ಥಗಿತಗೊಂಡಿತ್ತು. ನಂತರ 2019ರಲ್ಲಿ ಮಣಿರತ್ನಂ ಹೊಚ್ಚ ಹೊಸ ಚಿತ್ರತಂಡದೊಂದಿಗೆ ಮತ್ತೆ ತಮ್ಮ ಕನಸಿನ ಪ್ರಾಜೆಕ್ಟ್​ಗೆ ಕೈಹಾಕಿದರು.
Published by:Anitha E
First published: