HOME » NEWS » National-international » FIR AGAINST INSTAGRAM FOR SHOWING OBJECTIONABLE LORD SHIVA STICKER WITH WINE GLASS AND PHONE HG

ಭಗವಾನ್​ ಶಿವನ ಕೈಯಲ್ಲಿ ವೈನ್​ಗ್ಲಾಸ್​, ಮೊಬೈಲ್​!; ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ Instagram

ಇನ್​ಸ್ಟಾಗ್ರಾಂ ಭಗವಾನ್​ ಶಿವನ ಚಿತ್ರಕ್ಕೆ ಅಪಮಾನ ಮಾಡಿದೆ. ಶಿವನ ಕೈಯಲ್ಲಿ ವೈನ್​ ಗ್ಲಾಸ್​ ಮತ್ತು ಮೊಬೈಲ್​ ಹಿಡಿಸಿದೆ. ಸದ್ಯ ಈ ವಿವಾರ ವೈರಲ್​ ಆಗುತ್ತಿದ್ದಂತೆ ಎಲ್ಲರೂ ಆಕ್ರೋಶ ಹೊರಹಾಕಿದ್ದಾರೆ. ಕ್ಷಮೆ ಕೇಳುವಂತೆ ಕೇಳಿಕೊಂಡಿದ್ದಾರೆ.

news18-kannada
Updated:June 9, 2021, 10:08 AM IST
ಭಗವಾನ್​ ಶಿವನ ಕೈಯಲ್ಲಿ ವೈನ್​ಗ್ಲಾಸ್​, ಮೊಬೈಲ್​!; ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ Instagram
ವೈನ್​ಗ್ಲಾಸ್​, ಮೊಬೈಲ್​ ಹಿಡಿದಿರುವ ಶಿವನ ಚಿತ್ರ
  • Share this:
ಇತ್ತೀಚೆಗೆ ಗೂಗಲ್​ನಲ್ಲಿ ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದಕ್ಕಾಗಿ ಕ್ಷಮೆ ಕೋರಿತ್ತು. ಕನ್ನಡಿಗರ ಆಕ್ರೋಶ ಹೊರಬಿದ್ದಂತೆ ತಲೆಬಾಗಿ ತಪ್ಪೊಪ್ಪಿಕೊಂಡಿತು. ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ನಲ್ಲಿ  ಮಹಿಳೆಯರ ಒಳ ಉಡುಪಿನ ಮೇಲೆ ಕನ್ನಡದ ಧ್ವಜವನ್ನು ಮುದ್ರಿಸಿ ಮಾರಾಟ ಮಾಡಲು ಮುಂದಾಗಿತ್ತು. ಈ ವಿಚಾರ ಕೂಡ ಕನ್ನಡಗಿರ ಕೋಪಕ್ಕೆ ಕಾರಣವಾಯಿತು. ಇದೀಗ ಇನ್​ಸ್ಟಾಗ್ರಾಂ ಕೂಡ ತಪ್ಪೊಂದನ್ನು ಮಾಡಿದೆ. ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂ ಆ್ಯಪ್​ ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದು, ಇದರಿಂದ ಭಾರತೀಯರು ಕೋಪಗೊಂಡಿದ್ದಾರೆ.

ಇನ್​ಸ್ಟಾಗ್ರಾಂ ಭಗವಾನ್​ ಶಿವನ ಚಿತ್ರಕ್ಕೆ ಅಪಮಾನ ಮಾಡಿದೆ. ಶಿವನ ಕೈಯಲ್ಲಿ ವೈನ್​ ಗ್ಲಾಸ್​ ಮತ್ತು ಮೊಬೈಲ್​ ಹಿಡಿಸಿದೆ. ಸದ್ಯ ಈ ವಿವಾರ ವೈರಲ್​ ಆಗುತ್ತಿದ್ದಂತೆ ಎಲ್ಲರೂ ಆಕ್ರೋಶ ಹೊರಹಾಕಿದ್ದಾರೆ. ಕ್ಷಮೆ ಕೇಳುವಂತೆ ಕೇಳಿಕೊಂಡಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್​ಶಾಟ್​ ತೆಗೆಯುವ ಮೂಲಕ ಶೇರ್​ ಮಾಡಿಕೊಂಡಿದ್ದು, ಹಿಂದು ದೇವರನ್ನು ಈ ರೀತಿ ಚಿತ್ರಿಸಿ ಅಪಮಾನ ಮಾಡಿದ ಇನ್​ಸ್ಟಾಗ್ರಾಂ ಕ್ಷಮೆ ಕೇಳಬೇಕು ಎಂದು ಬರೆದುಕೊಂಡಿದ್ದಾರೆ.

FIR ದಾಖಲು:

ದೆಹಲಿ ಮೂಲದ ನಿವಾಸಿ ಮನೀಶ್​ ಸಿಂಗ್​ ಈ ವಿಚಾರವಾಗಿ ಎಫ್​ಐಆರ್​ ಸಲ್ಲಿಸಿದ್ದಾರೆ. ಶಿವನನ್ನು ವೈನ್​ ಗ್ಲಾಸ್​ ಮತ್ತು ಮೊಬೈಲ್​ ಹಿಡಿದಿರುವ ಚಿತ್ರಕ್ಕಾಗಿ ದೂರು ನೀಡಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೋರಿಯನ್ನು ಅಪ್ಲೋಡ್​ ಮಾಡುವಾಗ ಬಳಕೆದಾರರು ಸರ್ಚ್​ ಪೆಟ್ಟಿಗೆಯಲ್ಲಿ ಶಿವ ಎಂದು ಟೈಮ್​ ಮಾಡಿದಾಗ ವೈನ್​ ಗ್ಲಾಸ್ ಮತ್ತು ಮೊಬೈಲ್ ಹಿಡಿದ ಶಿವನ ಫೋಟೋ ಕಾಣಿಸುತ್ತದೆ. ಇದನ್ನು ಸ್ವತಃ ಇನ್​​ಸ್ಟಾಗ್ರಾಂ ಒದಗಿಸಿದೆ. ಹಿಂದೂ ಸಮುದಾಯವನ್ನು ನೋಯಿಸುವ ಸಲುವಾಗಿ ಜಿಫ್​ ರಚಿಸಿದೆ. ಎಂದು ದೂರುದಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫೆಬ್ರವರಿ 25 ರಂದು, ಕೇಂದ್ರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳನ್ನು ಬಿಡುಗಡೆ ಮಾಡಿತು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನ ವಿಷಯವನ್ನು ನಿಯಂತ್ರಿಸಲು ಈ ನಿಯಮವನ್ನು ತರಲಾಯಿತು

ಹೊಸ ನಿಯಮದಲ್ಲಿ, ಭಾರತದ ಸಾರ್ವಭೌಮತ್ವ, ರಾಜ್ಯದ ಸುರಕ್ಷತೆ, ವಿದೇಶಗಳೊಂದಿಗಿನ ಸಂಬಂಧ, ಅತ್ಯಾಚಾರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇರಬಹುದಾದ ಒಂದು ಟ್ವೀಟ್ ಅಥವಾ ಸಂದೇಶದ ಮೊದಲ ಮೂಲವನ್ನು ಬಹಿರಂಗಪಡಿಸಲು ವೇದಿಕೆಗಳು ಅಗತ್ಯವಾಗಿರುತ್ತದೆ. ಮತ್ತು ಕೋಲಾಹಲಕ್ಕೆ ಕಾರಣವಾದ ವಿಚಾರವಿದ್ದಾಗ ಅಧಿಕಾರಿಗಳು ಗುರುತಿಸಿದ ಯಾವುದೇ ವಿಷಯವನ್ನು 36 ಗಂಟೆಗಳ ಒಳಗೆ ತೆಗೆದುಹಾಕಬೇಕಿದೆ. ಮಾತ್ರವಲ್ಲದೆ, ಕಾನೂನಿನಡಿಯಲ್ಲಿ ಬಂಧಿಸಲಾಗುವುದು ಎಂದು ಸರ್ಕಾರ ಆದೇಶಿಸಿತು.Jio Phone: ಜಿಯೋಫೋನ್​ನಲ್ಲಿ ಧ್ವನಿ ಕರೆ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್ಆ್ಯಪ್; ಸಕ್ರಿಯಗೊಳಿಸುವುದು ಹೇಗೆ?

ಸಾಮಾಜಿಕ ಜಾಲತಾಣಗಳ ದಿಕ್ಕು ಬದಲಾಗುತ್ತಿದೆ. ಕೆಲವೊಂದು ವಿಚಾರಗಳು ಗಂಭೀರವಾಗಿದ್ದರು ಅದನ್ನು ಅಪಹಾಸ್ಯ ಮಾಡುವ ಮೂಲಕ ತಮಾಷೆ ನೋಡುತ್ತಿದ್ದಾರೆ. ಅದರಲ್ಲೂ ಜನಪ್ರಿಯ ಫ್ಲಾಟ್​ಫಾರ್ಮ್​ಗಳು ಈ ರೀತಿಯ ಕೆಲಸ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
Published by: Harshith AS
First published: June 9, 2021, 10:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories