ಸಾಮೂಹಿಕ ಹಲ್ಲೆಗಳನ್ನು ಖಂಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇ ತಪ್ಪಾ?; ಈ 50 ಸೆಲೆಬ್ರಿಟಿಗಳ ವಿರುದ್ಧ ದಾಖಲಾಯ್ತು ಎಫ್ಐಆರ್!

ಪ್ರಧಾನಿ ಮೋದಿಗೆ ಪತ್ರ ಬರೆದ ಎಲ್ಲಾ ಗಣ್ಯರ ವಿರುದ್ಧವೂ ಇದೀಗ ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಪ್ರಕರಣವನ್ನು ಹೊರಿಸಲಾಗಿದೆ. ಪ್ರಸ್ತುತ ಈ ಪ್ರಸಂಗ ಇಡೀ ದೇಶದ ಪ್ರಜ್ಞಾವಂತ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.

Rajesh Duggumane | news18-kannada
Updated:October 4, 2019, 11:13 AM IST
ಸಾಮೂಹಿಕ ಹಲ್ಲೆಗಳನ್ನು ಖಂಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇ ತಪ್ಪಾ?; ಈ 50 ಸೆಲೆಬ್ರಿಟಿಗಳ ವಿರುದ್ಧ ದಾಖಲಾಯ್ತು ಎಫ್ಐಆರ್!
ನರೇಂದ್ರ ಮೋದಿ
  • Share this:
ಮುಜಾಫರ್​​ಪುರ್ (ಬಿಹಾರ): ಭಾರತದಲ್ಲಿ ಸಾಮೂಹಿಕ ಹಲ್ಲೆಯಂತಹ ಅಮಾನವೀಯ ಘಟನೆಗಳನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದ್ದ ಸಾಹಿತಿಗಳು, ಪತ್ರಕರ್ತರು ಮತ್ತು ಚಿತ್ರರಂಗದ ನಟ ನಟಿಯರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗಣ್ಯರ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ.

ಸಾಮೂಹಿಕ ಹಲ್ಲೆ ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ರಾಷ್ಟ್ರಾದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕಳೆದ ಜುಲೈನಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ, ಅನುರಾಗ್​ ಕಶ್ಯಪ್, ಇತಿಹಾಸ ತಜ್ಞ ರಾಮಚಂದ್ರ ಗುಹಾ​ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು.

ಈ ಪತ್ರದಲ್ಲಿ “ದೇಶದಾದ್ಯಂತ ಎಲ್ಲೆಡೆ ಮುಸ್ಲಿಮರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಲ್ಲೆ ಪ್ರಕರಣವನ್ನು ಸರ್ಕಾರ ತಕ್ಷಣಕ್ಕೆ ತಡೆಯಬೇಕು. ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವ ಇಲ್ಲ. ಜೈ ಶ್ರೀರಾಮ್​ ಎನ್ನುವ ವಾಕ್ಯ ಪ್ರಚೋದನಾಕಾರಿ ಯುದ್ಧದ ಕೂಗಿನಂತೆ ಕೇಳುತ್ತಿದೆ,” ಎಂದು ಉಲ್ಲೇಖಿಸಿದ್ದರು.

ಆದರೆ, ಹೀಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಎಲ್ಲಾ ಗಣ್ಯರ ವಿರುದ್ಧವೂ ಇದೀಗ ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಪ್ರಕರಣವನ್ನು ಹೊರಿಸಲಾಗಿದೆ. ಪ್ರಸ್ತುತ ಈ ಪ್ರಸಂಗ ಇಡೀ ದೇಶದ ಪ್ರಜ್ಞಾವಂತ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.

ಅಸಲಿಗೆ ದೇಶದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತರ ವಿರುದ್ಧ ನಡೆಯುತ್ತಿರುವ ಸಾಮೂಹಿಕ ಹಲ್ಲೆಗಳನ್ನು ಖಂಡಿಸಿ ಪ್ರಗತಿಪರ ಮನಸ್ಥಿತಿಯ ವ್ಯಕ್ತಿಗಳು ಮೋದಿ ಪತ್ರ ಬರೆದಾಗಲೇ ಬಿಹಾರ ಮೂಲದ ವಕೀಲ ಸುಧೀರ್​ ಕುಮಾರ್​ ಓಝಾ ಎಂಬುವವರು ಈ ವಿಚಾರವಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಬಿಜೆಪಿ ಶಾಸಸಕನ ಆಪ್ತನ ಮೇಲೆ ನಡೆಯಿತು ಮಾರಕಾಸ್ತ್ರದಿಂದ ಹಲ್ಲೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್​ 20 ರಂದು ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ​ ಸೂರ್ಯ ಕಾಂತ್​ ತಿವಾರಿ, ಸಾಮೂಹಿಕ ಹಲ್ಲೆಗೆ ಸಂಬಂಧಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಎಲ್ಲಾ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಇದರ ಅನ್ವಯ ಬಿಹಾರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ 50 ಕ್ಕೂ ಹೆಚ್ಚು ವಿಚಾರವಾದಿಗಳ ವಿರುದ್ಧ ಗುರುವಾರ ದಾಖಲು ಮಾಡಿದ್ದಾರೆ.ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದೆಲ್ಲೆಡೆ ಕೋಮು ಹಲ್ಲೆಗಳು ಹಾಗೂ ನೈತಿಕ ಪೊಲೀಸ್​ಗಿರಿ ಮೆರೆವ ಪುಂಡರ ಉಪಟಳ ಹೆಚ್ಚಾಗಿದೆ ಎಂದು ಕಳೆದ 5 ವರ್ಷದಿಂದ ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಲೇ ಇವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಗೋ ರಕ್ಷಕರಿಂದ ನಿರಂತರವಾಗಿ ಅನ್ಯ ಕೋಮಿನ ಮೇಲೆ ಹಲ್ಲೆಗಳು ನಡೆಯುತ್ತಿವೆ ಎನ್ನುವ ಆರೋಪ ಇದೆ.

ಯಾರ್ಯಾರ ವಿರುದ್ಧ ಎಫ್​ಐಆರ್​?:

ಹಿರಿಯ ಅಂಕಣಕಾರ, ಇರಿಹಾಸ ತಜ್ಞ ರಾಮಚಂದ್ರ ಗುಹಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇವರು ಪ್ರಜಾವಾಣಿ ದಿನ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಅಲ್ಲದೆ, ಭಾರತದ ಇತಿಹಾಸದ ಕುರಿತು ಸಾಕಷ್ಟು ಸಂಶೋಧನಾ ಕೃತಿಗಳನ್ನು ಇವರು ಬಿಡುಗಡೆ ಮಾಡಿದ್ದಾರೆ.  ಇನ್ನು, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಮಣಿರತ್ನಂ, ಅನುರಾಗ್​ ಕಶ್ಯಪ್, ಹಿರಿಯ ಕಲಾವಿದ ಸೌಮಿತ್ರ ಚಟರ್ಜಿ ಸೇರಿ 50ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ