Sanna Marin: ಫಿನ್​ಲ್ಯಾಂಡ್ ಪ್ರಧಾನಿ ಡ್ರಗ್ ಸೇವಿಸಿ ಹುಚ್ಚು ಹುಚ್ಚಾಗಿ ಕುಣಿದಿಲ್ಲ; ವರದಿ ರಿವೀಲ್

ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಫಿನ್​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಡ್ರಗ್ ಸೇವಿಸಿದ್ದರ ಕುರಿತು ಅನುಮಾನ ವ್ಯಕ್ತವಾಗಿತ್ತು. ಈ ಅನುಮಾನವನ್ನು ಹೋಗಲಾಡಿಸಲು ಸ್ವತಃ ಪ್ರಧಾನಮಂತ್ರಿ ಸನ್ನಾ ಮರಿನ್ ಅವರೇ ಸ್ವಇಚ್ಛೆಯಿಂದ ಡ್ರಗ್ ಟೆಸ್ಟ್​ಗೆ ಒಳಗಾಗಿದ್ದರು.

ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್

ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್

 • Share this:
  ಇತ್ತೀಚಿಗಷ್ಟೇ ಪಾರ್ಟಿ ಮಾಡುತ್ತಿದ್ದ ವಿಡಿಯೊ ಒಂದು ಲೀಕ್ ಆಗಿ ಭಾರೀ ವೈರಲ್ ಆಗಿದ್ದ ಫಿನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಸನ್ನಾ ಮರಿನ್ (Finland PM Sanna Marin) ಅವರು ಸದ್ಯ ನಿರಾಳ ಉಸಿರು ಬಿಟ್ಟಿದ್ದಾರೆ. ಅವರಿಗೆ ಮಾಡಲಾದ ಡ್ರಗ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದಿದ್ದು, ಪಾರ್ಟಿಯಲ್ಲಿ ಅವರು ಡ್ರಗ್  (Finland PM Sanna Marin Drug Test Report) ಸೇವಿಸಿರಲಿಲ್ಲ ಎಂದು ವರದಿ ತಿಳಿಸಿದೆ. ಕಳೆದ ವಾರ 36 ವರ್ಷದ ಪ್ರಧಾನಿ ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್ ಮತ್ತು ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ (Finland PM Sanna Marin Viral Video) ನಂತರ ವಿವಾದ ಭುಗಿಲೆದ್ದಿತ್ತು.

  ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಫಿನ್​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಡ್ರಗ್ ಸೇವಿಸಿದ್ದರ ಕುರಿತು ಅನುಮಾನ ವ್ಯಕ್ತವಾಗಿತ್ತು. ಈ ಅನುಮಾನವನ್ನು ಹೋಗಲಾಡಿಸಲು ಸ್ವತಃ ಪ್ರಧಾನಮಂತ್ರಿ ಸನ್ನಾ ಮರಿನ್ ಅವರೇ ಸ್ವ ಇಚ್ಛೆಯಿಂದ ಡ್ರಗ್ ಟೆಸ್ಟ್​ಗೆ ಒಳಗಾಗಿದ್ದರು. ಆದರೆ ಇದೀಗ ಅವರ ಡ್ರಗ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದಿದ್ದು ಪಾರ್ಟಿಯಲ್ಲಿ ಡ್ರಗ್ ಸೇವಿಸಿರಲಿಲ್ಲ ಎಂದು ಸಾಬೀತಾಗಿದೆ.

  ಪಾರ್ಟಿಯಲ್ಲಿ ಯಾರ‍್ಯಾರು ಭಾಗಿಯಾಗಿದ್ದರು
  ವಿಡಿಯೋದಲ್ಲಿ ಕಂಡುಬಂದಿರುವ ಗಣ್ಯ ವ್ಯಕ್ತಿಗಳಲ್ಲಿ ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರಾಪರ್ ಪೆಟ್ರಿ ನೈಗಾರ್ಡ್, ಟಿವಿ ಹೋಸ್ಟ್ ಟಿನ್ನಿ ವಿಕ್ಸ್ಟ್ರೋಮ್, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಅವರದ್ದೇ ಆದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಪಾರ್ಟಿಯಲ್ಲಿ ಭಾಗಿಯಾಗಿದ್ದು ಕಾಣಿಸುತ್ತಿತ್ತು. ವಿಶೇಷವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಫಿನ್‌ಲ್ಯಾಂಡ್ NATO ಗೆ ಸೇರಲು ತಟಸ್ಥ ಧೋರಣೆಯನ್ನು ಕೊನೆಗೊಳಿಸುತ್ತಿರುವಾಗ ಹಾಗೂ ರಷ್ಯಾದೊಂದಿಗೆ ಸೆಣಸಾಡುತ್ತಿರುವಾಗ ವಿನೋದ ಪ್ರಿಯ ನಡವಳಿಕೆಯು ನಾಯಕರಿಗೆ ಶೋಭನೀಯವಾದುದಲ್ಲ ಎಂಬ ಟೀಕೆಗೆ ಗುರಿಯಾಗಿತ್ತು.

  ಇದನ್ನೂ ಓದಿ: Miracle: ಇದೇ ಪವಾಡ! 7ನೇ ವಯಸ್ಸಿಗೆ ಕಾಣೆಯಾಗಿದ್ದ ಬಾಲಕಿ 16ನೇ ವಯಸ್ಸಲ್ಲಿ ಮನೆ ಸೇರಿದಳು!

  ಜರ್ಮನಿಯ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಮರಿನ್ ಅವರ ಶಾಂತಿಯುತ ನಾಯಕತ್ವ ಮತ್ತು ವಿಧೇಯ ನಡವಳಿಕೆಗಾಗಿ ವಿಶ್ವದಲ್ಲಿಯೇ ಅತ್ಯಂತ ಶಾಂತಮಯಿ ರಾಜಕಾರಣಿ ಎಂದು ಹೊಗಳಿದೆ. ಆದರೆ ಇನ್ನು ಕೆಲವು ಟೀಕಾಕಾರರು ಮರಿನ್ ಅವರದ್ದು ಅಸಡ್ಡೆಯ ನಡವಳಿಕೆ ಎಂದು ದೂಷಿಸಿದ್ದಾರೆ. ಆದರೆ ಇದೀಗ ಅವರು ಡ್ರಗ್ ಟೆಸ್ಟ್​ನಲ್ಲೂ ಪಾಸಾಗಿದ್ದಾರೆ.

  ಈ ಬಗ್ಗೆ ಮರಿನ್ ಅವರು ಏನು ಹೇಳಿದ್ದಾರೆ?
  ವಿಡಿಯೋದಲ್ಲಿ ಗುಂಪು ಅಸಭ್ಯ ಪದ ಪ್ರಯೋಗಗಳ ಬಳಕೆಯನ್ನು ಮಾಡುತ್ತಿದೆ ಹಾಗೂ ಕೊಕೇನ್‌ನಂತಹ ಮಾದಕ ಪದಾರ್ಥಗಳಿಗೆ ಒಳಗಾಗಿದ್ದಾರೆ ಎಂಬುದು ತಿಳಿದುಬಂದಿದೆ. ಸೋರಿಕೆಯಾದ ವಿಡಿಯೋ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಮರಿನ್ ತಾವು ಮಾದಕ ವಸ್ತುಗಳನ್ನು ಬಳಸಿರುವುದನ್ನು ನಿರಾಕರಿಸಿದ್ದಾರೆ ಮತ್ತು ಮರೆಮಾಚಲು ಏನೂ ಇಲ್ಲ ಎಂದೇ ಹೇಳಿದ್ದಾರೆ. ನಾನು ನೃತ್ಯ ಹಾಗೂ ಹಾಡಿನಂತಹ ಕಾನೂನು ಬದ್ಧ ಕೆಲಸಗಳನ್ನೇ ಪಾರ್ಟಿಯಲ್ಲಿ ಮಾಡಿರುವೆ ಹಾಗೂ ತಾವು ಹೆಚ್ಚು ಕುಡಿದಿರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.

  ಇದನ್ನೂ ಓದಿ: Padma Awards 2023: ಪದ್ಮ ಪ್ರಶಸ್ತಿಗೆ ನೀವೂ ನಾಮನಿರ್ದೇಶನ ಮಾಡಿ; ಇಲ್ಲಿದೆ ಆನ್​ಲೈನ್ ಲಿಂಕ್

  ಮರಿನ್ ವೈಯಕ್ತಿಕ ವಿಡಿಯೋಗಳನ್ನು ಬಹಿರಂಗಪಡಿಸಿರುವುದು ಅತ್ಯಂತ ಕೆಟ್ಟ ಭಾವನೆಯಾಗಿದೆ ಎಂದಿದ್ದಾರೆ. ಹೆಚ್ಚಿನ ಯುವಜನರಿಗೆ ಪ್ರಧಾನಿಯ ಈ ನೃತ್ಯ ವಿಡಿಯೋ ಪ್ರಚೋದನಕಾರಿಯಾಗಿರುತ್ತದೆ ಎಂಬುದು ಇಲ್ಲಿ ಸತ್ಯವಾದ ಮಾತಾಗಿದೆ. ಮರಿನ್ 2019 ರಲ್ಲಿ ತಮ್ಮ 34 ನೇ ಹರೆಯದಲ್ಲಿ ಪ್ರಧಾನಿಯಾಗಿದ್ದು ವಿಶ್ವದ ಅತ್ಯಂತ ಕಿರಿಯ ವಿಶ್ವನಾಯಕರಲ್ಲಿಒಬ್ಬರಾಗಿದ್ದಾರೆ.
  Published by:guruganesh bhat
  First published: