• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Ramadan: ರಂಜಾನ್‌ ಹಬ್ಬದ ಮೇಲೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು; ಅತ್ಯಂತ ದುಬಾರಿ ಹಬ್ಬ ಎನ್ನುತ್ತಿದ್ದಾರೆ ಪಾಕ್‌ ಜನತೆ

Ramadan: ರಂಜಾನ್‌ ಹಬ್ಬದ ಮೇಲೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು; ಅತ್ಯಂತ ದುಬಾರಿ ಹಬ್ಬ ಎನ್ನುತ್ತಿದ್ದಾರೆ ಪಾಕ್‌ ಜನತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಲದ ಸುಳಿ, ಆರ್ಥಿಕತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ರಂಜಾನ್‌ ಹಬ್ಬದ ಸಡಗರವೇ ಕಂಡು ಬರುತ್ತಿಲ್ಲ. ವಿಶ್ವದಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ಮಾಸವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಪಾಪ ಪಾಕಿಸ್ತಾನ ಮಾತ್ರ ಹಬ್ಬದ ಖುಷಿಯೇ ಇಲ್ಲದೇ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಮುಂದೆ ಓದಿ ...
 • Share this:

ಇನ್ನೇನು ಕೆಲವೇ ದಿನಗಳಲ್ಲಿ ರಂಜಾನ್​​ ಹಬ್ಬ (Ramadan Festival) ಬರುತ್ತೆ. ಈ ಸಂದರ್ಭದಲ್ಲಿ ಮುಸ್ಲಿಂ (Muslim) ಬಾಂಧವರು ಸೇರಿಕೊಳಡು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಸಾಲದ ಸುಳಿ, ಆರ್ಥಿಕತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ರಂಜಾನ್‌ ಹಬ್ಬದ ಸಡಗರವೇ ಕಂಡು ಬರುತ್ತಿಲ್ಲ. ವಿಶ್ವದಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ಮಾಸವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಪಾಪ ಪಾಕಿಸ್ತಾನ (Pakistan) ಮಾತ್ರ ಹಬ್ಬದ ಖುಷಿಯೇ ಇಲ್ಲದೇ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ.


ರಂಜಾನ್‌ ಹಬ್ಬದ ಮೇಲೆ ʻಆರ್ಥಿಕತೆʼಯ ಕರಿನೆರಳು


ಹೌದು, ದುರ್ಬಲವಾದ ಆರ್ಥಿಕ ಬಿಕ್ಕಟ್ಟು, ಗಗನದೆತ್ತರದ ಹಣದುಬ್ಬರ, ದುಬಾರಿ ಆಹಾರ ವಸ್ತುಗಳು, ದೇಶದ ಸಾಲ ಇವೆಲ್ಲವೂ ರಂಜಾನ್‌ ಹಬ್ಬದ ಮೇಲೆ ಕರಿನೆರಳನ್ನು ಬೀರಿದೆ. ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಅದೆಷ್ಟೋ ಲಕ್ಷಾಂತರ ಕುಟುಂಬಗಳು ಹಬ್ಬದ ಆಚರಣೆ ಇಲ್ಲದೇ ಮೌನವಾಗಿಬಿಟ್ಟಿವೆ.


ಕೆಟ್ಟ ಸ್ಥಿತಿಯಲ್ಲಿ ಪಾಕಿಸ್ತಾನದ ಪಾಡು


ಸ್ವಾತಂತ್ರ್ಯದ ನಂತರ ಪಾಕ್‌ನಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಸ್ಥಿತಿ ಇಷ್ಟು ಹದಗೆಟ್ಟಿರುವುದು. ಪಾಕಿಸ್ತಾನದಲ್ಲಿ ಸದ್ಯ ಇರುವ ಹಣದುಬ್ಬರ 6 ದಶಕಗಳಲ್ಲೇ ಅತಿ ಹೆಚ್ಚು ಎಂದು ಅಂಕಿ ಅಂಶಗಳು ಹೇಳುತ್ತಿವೆ. ಆಹಾರ ಪದಾರ್ಥಗಳಿಂದ ಹಿಡಿದು ತೈಲದವರೆಗೆ ಎಲ್ಲಾ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಕೆಲವೆಡೆ ಹಣ ಕೊಟ್ಟರೂ ಆಹಾರ ಪದಾರ್ಥ ಸಿಗುತ್ತಿಲ್ಲ.


ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಕಿರಾತಕ; ಮಾಲೀಕನ ಮಗಳನ್ನೇ ಅತ್ಯಾಚಾರಗೈದ ಕಾಮುಕ!


ಇನ್ನು ವಿದೇಶಗಳಿಂದಲೂ ಆಹಾರ ಪದಾರ್ಥಗಳನ್ನು ಖರೀದಿ ಮಾಡಲಾಗದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಏಕೆಂದರೆ, ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿ ಪಾತಾಳಕ್ಕೆ ಕುಸಿದಿದೆ. ಈ ಎಲ್ಲಾ ವಿದ್ಯಾಮಾನಗಳಿಂದ ಹಬ್ಬ ಇರಲಿ ಜೀವನ ನಡೆಸುವುದೇ ಪಾಕಿಗಳಿಗೆ ಕಷ್ಟವಾಗಿದೆ.


ಆಹಾರಕ್ಕೆ ನೂಕು ನುಗ್ಗಲು, ಹಲವು ಮಂದಿ ಸಾವು


ಇನ್ನು ಪಾಕಿಸ್ತಾನದಲ್ಲಿ ರಂಜಾನ್ ಮಾಸದ ವೇಳೆ ಕಳೆದ ಒಂದು ತಿಂಗಳ ಅವಧಿಯಲ್ಲಿ 22 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಚಿತ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಜನ ಮುಗಿಬಿದ್ದ ಕಾರಣ ಈ ಒಂದು ಅವಘಡ ಸಂಭವಿಸಿದೆ. ಜನ ಒಂದು ತುತ್ತಿನ ಅನ್ನಕ್ಕೂ ಪ್ರಸ್ತುತ ಪರದಾಡುವಂತಾಗಿದೆ.


ಸಾಂಕೇತಿಕ ಚಿತ್ರ


ರಂಜಾನ್‌ ಸಮಯದಲ್ಲಿ ದಾನ ಮಾಡುವ ಒಂದು ಪದ್ಧತಿ ಇದೆ. ರಂಜಾನ್ ಸಮಯದಲ್ಲಿ ಅನೇಕ ಪಾಕಿಸ್ತಾನಿಗಳು ತಮ್ಮ ಧಾರ್ಮಿಕವಾಗಿ ಸೂಚಿಸಲಾದ ವಾರ್ಷಿಕ ಝಕಾತ್ ಅಥವಾ ಭಿಕ್ಷೆಯನ್ನು ದಾನ ಮಾಡುತ್ತಾರೆ.


ಕೆಲವರು ಆಹಾರ ಮತ್ತಿತ್ತರ ವಸ್ತುಗಳನ್ನು ಬಡವರಿಗೆ ನೀಡಲು ದತ್ತಿ ಸಂಸ್ಥೆಗಳಿಗೆ ನೀಡುತ್ತಾರೆ. ಆದರೆ ಈ ಬಾರಿ ಇಂತಹ ಯಾವುದೇ ದಾನ-ಧರ್ಮಗಳು ಬಂದಿಲ್ಲ ಎಂದು ಟ್ರಸ್ಟ್‌ಗಳು ತಿಳಿಸಿವೆ.


"ಅತಿ ದುಬಾರಿ ರಂಜಾನ್"


ಪರಿಸ್ಥಿತಿ ಬಗ್ಗೆ ಮಾತನಾಡಿದ ಜವಳಿ ಕಾರ್ಮಿಕನೊಬ್ಬ ಈ ಬಾರಿಯ ರಂಜಾನ್ ನನ್ನ ಜೀವನದ ಅತಿ ದುಬಾರಿ ರಂಜಾನ್.‌ ನಮ್ಮೆಲ್ಲರ ಹಬ್ಬದ ಖುಷಿಯನ್ನೇ ಕಿತ್ತುಕೊಂಡಿದೆ ಎಂದು ಹೇಳಿದ್ದಾನೆ.


ಟ್ರಸ್ಟ್‌ಗೆ ಬರುತ್ತಿದ್ದ ದಾನ-ಧರ್ಮದ ಸಂಖ್ಯೆಯಲ್ಲೂ ಇಳಿಕೆ


ರಂಜಾನ್ ಸಮಯದಲ್ಲಿ ಅನೇಕ ಪಾಕಿಸ್ತಾನಿಗಳು ತಮ್ಮ ಧಾರ್ಮಿಕವಾಗಿ ಸೂಚಿಸಲಾದ ವಾರ್ಷಿಕ ಝಕಾತ್ ಅಥವಾ ಭಿಕ್ಷೆಯನ್ನು ದಾನ ಮಾಡುತ್ತಾರೆ, ಬಡವರ ನಡುವೆ ವಿತರಣೆಗಾಗಿ ಪಡಿತರ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುವ ದತ್ತಿ ಸಂಸ್ಥೆಗಳಿಗೆ ನೀಡುತ್ತಾರೆ.


ಆದರೆ ಈ ವರ್ಷ, ಗಗನಕ್ಕೇರುತ್ತಿರುವ ಬೆಲೆಗಳಿಂದಾಗಿ ದಾನಿಗಳು ಸಹ ಯಾವುದೇ ಆಹಾರವನ್ನು ನೀಡಿಲ್ಲ. ಹೀಗಾಗಿ ದತ್ತಿ ಸಂಸ್ಥೆಗಳೂ ಸಹ ಈಗ ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನಿಗಳ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿವೆ.


ಆಹಾರ ಬೆಲೆಯಲ್ಲಿ ಹೆಚ್ಚಳ


ಪಾಕಿಸ್ತಾನದಲ್ಲಿ ಈಗ ಹಣದುಬ್ಬರ ಪ್ರಮಾಣ ಶೇ. 35ರಷ್ಟಿದೆ. ಮಾರ್ಚ್‌ನಲ್ಲಿ ಆಹಾರ ಹಣದುಬ್ಬರವು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕ್ರಮವಾಗಿ 47.1% ಮತ್ತು 50.2% ರಷ್ಟಿತ್ತು.


ಈ ಕಾರಣದಿಂದಾಗಿ ಒಂದು ಕೆಜಿ ಚಿಕನ್ ಬೆಲೆ 350, ಒಂದು ಕೆಜಿ ಅಕ್ಕಿಯ ಬೆಲೆ 335 ಪಾಕಿಸ್ತಾನ ರೂಪಾಯಿ ಆಗಿದೆ. ಹಾಗೆ ಮಟನ್ ಬೆಲೆ 1,800 ರೂ. ಒಂದು ಡಜನ್ ಕಿತ್ತಲೆ ಹಣ್ಣಿನ ಬೆಲೆ 400 ರೂ, ಬಾಳೆ ಹಣ್ಣು 300 ರೂ. ದಾಳಿಂಬೆ 400 ರೂ. ಸೇಬು 340 ರೂ. ಹಾಗೂ ಸ್ಟ್ರಾಬೆರಿ 280 ರೂ. ಇದೆ.
ಚೀನಾ, ಸೌದಿಗೆ ಪಾವತಿಸಬೇಕಿದೆ 77 ಬಿಲಿಯನ್ ಹಣ

top videos


  ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ದಿವಾಳಿ ಹಂತಕ್ಕೆ ತಲುಪಿದೆ. ಪಾಕಿಸ್ತಾನವು ಹೆಚ್ಚಿನ ಬಾಹ್ಯ ಸಾಲ, ದುರ್ಬಲ ಸ್ಥಳೀಯ ಕರೆನ್ಸಿ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲುಗಳೊಂದಿಗೆ ಸೆಣಸುತ್ತಿದೆ. ಈ ಮಧ್ಯೆ ಏಪ್ರಿಲ್ 2023 ರಿಂದ ಜೂನ್ 2026 ರೊಳಗೆ ಪಾಕಿಸ್ತಾನವು ಚೀನಾ, ಸೌದಿ ಅರೇಬಿಯಾಕ್ಕೆ 77.5 ಶತಕೋಟಿ ಬಾಹ್ಯ ಸಾಲವನ್ನು ಮರುಪಾವತಿಸಬೇಕಾಗಿದೆ.

  First published: