Union Budget 2021: ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್​ನಲ್ಲಿ ಚಿಂತನೆ

ವಾರ್ಷಿಕ ತೆರಿಗೆದಾರರ ಹೊರೆಯನ್ನು ಅಲ್ಪಮಟ್ಟಿಗೆ ಇಳಿಸಲು ಈ ಬಾರಿ ಚಿಂತನೆ ನಡೆಸಲಾಗಿದೆ. ವಾರ್ಷಿಕ ಒಟ್ಟು ತೆರಿಗೆಯಲ್ಲಿ 50 ಸಾವಿರದಿಂದ 80 ಸಾವಿರದವರೆಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
    ನವದೆಹಲಿ (ಜ. 27): ಕೋವಿಡ್​ ಸಾಂಕ್ರಾಮಿಕತೆ ಈಗಾಗಲೇ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿದೆ. ಕೊರೋನಾದಿಂದಾಗಿ ದೇಶದ ಆರ್ಥಿಕತೆ ತೀವ್ರಮಟ್ಟದ ಹಿಂಜರಿತದಿಂದ ಸಾಗುತ್ತಿದೆ. ದೇಶದ ಆರ್ಥಿಕತೆ ಮೂರನೇ ಒಂದು ಭಾಗದಷ್ಟು ಕುಗ್ಗಿದೆ. ಈ ಹಿನ್ನಲೆ ಈ ಬಾರಿಯ ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೇ ಫೆ. 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡುತ್ತಿದ್ದು, ಈ ಬಾರಿ ಬಜೆಟ್​ ಮೇಲೆ ಎಲ್ಲಾರ ಚಿತ್ತ ನೆಟ್ಟಿದ್ದು, ಆರ್ಥಿಕತೆ ಚೇತರಿಕೆ ಸಹಾಯವಾಗುವಂಥಹ ಬಜೆಟ್​ ಮಂಡನೆಯಾಗಲಿದೆಯೇ ಎಂಬ ಕುತೂಹಲ ಹೊಂದಿದ್ದಾರೆ. ಕೋವಿಡ್​ ನಿಂದ ಸಂಕಷ್ಟಕ್ಕೆ ತಲುಪಿರುವ ಜನಸಾಮಾನ್ಯರು ಕೂಡ ಈ ಬಾರಿ ಬಜೆಟ್​ನ ಹೊಸ ಘೋಷಣೆ, ತೆರಿಗೆ ವಿನಾಯಿತಿಗಳ ಘೋಷಣೆಗಳ ಬಗ್ಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ತೆರಿಗೆದಾರರ ಹೊಣೆಗಾರಿಕೆಯನ್ನು ಇಳಿಸಲು ಕೇಂದ್ರ ಸಿದ್ಧತೆ ನಡೆಸಿದೆ ಎಂಬ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. 

    ವಾರ್ಷಿಕ ತೆರಿಗೆದಾರರ ಹೊರೆಯನ್ನು ಅಲ್ಪಮಟ್ಟಿಗೆ ಇಳಿಸಲು ಈ ಬಾರಿ ಚಿಂತನೆ ನಡೆಸಲಾಗಿದೆ. ವಾರ್ಷಿಕ ಒಟ್ಟು ತೆರಿಗೆಯಲ್ಲಿ 50 ಸಾವಿರದಿಂದ 80 ಸಾವಿರದವರೆಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದು ಸಿಎನ್​ಬಿಸಿ-ಟಿವಿ18 ಮೂಲಗಳು ತಿಳಿಸಿವೆ.
    ಕೇಂದ್ರ ಸರ್ಕಾರ ಹಳೆ ತೆರಿಗೆ ಪದ್ಧತಿಯಲ್ಲಿ ಈ ಕಡಿತವನ್ನು ನಡೆಸಲು ಚಿಂತನೆ ನಡೆಸಿದೆ. ವ್ಯಕ್ತಿಯ ಸಂಬಳದ ಆದಾಯದ ಮೇಲಿನ ತೆರಿಗೆ ಕಡಿತಕ್ಕೆ ಚಿಂತನೆ ನಡೆಸಲಾಗಿದೆ.

    2020ರಲ್ಲಿ ಬಜೆಟ್​ನಲ್ಲಿ ಮೂರು ಶ್ರೇಣಿಯ ಆದಾಯ ತೆರಿಗೆಯನ್ನು ವಿಧಿಸಲಾಗಿತ್ತು.
    ಸಂಬಳ ಪಡೆಯುವ ನೌಕರರ ಪ್ರಮಾಣಿತ ಕಡಿತವನ್ನು 1 ಲಕ್ಷ ರೂಗೆ ಹೆಚ್ಚಿಸಬೇಕು ಎಂದು ಎಫ್​ಐಸಿಸಿಐ ಶಿಫಾರಸು ಮಾಡಿದೆ ಎಂದು ಲೈವ್​ಮಿಂಟ್​ ವರದಿ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಪ್ರಮಾಣಿತ ಕಡಿತದ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ತಿಳಿಸಿದೆ.

    ಕೊರೋನಾದಿಂದಾಗಿ ಆರ್ಥಿಕತೆಗೆ ಪೆಟ್ಟು ಬಿದ್ದಿದ್ದು ಇಂತಹ ಸಮಯದಲ್ಲಿ ಕೇಂದ್ರದಿಂದ ಜನಸಾಮಾನ್ಯರು ಅಚ್ಚರಿಯ ಘೋಷಣೆಗೆ ಎದುರು ನೋಡುತ್ತಿದ್ದಾರೆ ಎಂದು ವಿಕ್ಟೋರಿಯಂ ಲೆಗಲಿಸ್​ನ ನಿರ್ವಹಣಾ ಭಾಗಿಧಾರ ಆದಿತ್ಯ ಚೋಪ್ರಾ ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
    Published by:Seema R
    First published: