ಆದಾಯ ತೆರಿಗೆ ಇ-ಫೈಲಿಂಗ್​ ಪೋರ್ಟಲ್​ನಲ್ಲಿ ಸಮಸ್ಯೆ; ಇನ್ಫೋಸಿಸ್ ಸಿಇಒಗೆ ಸಮನ್ಸ್​​

ಕಳೆದ ಜೂನ್​ನಲ್ಲಿ ಆರಂಭವಾದ ಈ ಜಾಲತಾಣದಲ್ಲಿ ಆರಂಭದ ದಿನದಿಂದ ಸಾಕಷ್ಟು ತಾಂತ್ರಿಕ ಸಮಸ್ಯೆ ಕಂಡು ಬಂದಿದೆ.

ನಿರ್ಮಲಾ ಸೀತಾರಾಮನ್​​​

ನಿರ್ಮಲಾ ಸೀತಾರಾಮನ್​​​

 • Share this:
  ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್​ ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷಗಳು ಮುಂದುವರೆದ ಕಾರಣ ಈ ಕುರಿತು ವಿವರಣೆ ನೀಡುವಂತೆ ಇನ್ಫೋಸಿಸ್​ ಮುಖ್ಯಸ್ಥ ಸಲೀಲ್​ ಪರೇಖ್​ಗೆ ಸಮನ್ಸ್​ ನೀಡಲಾಗಿದೆ. ಕಳೆದ ಜೂನ್​ನಲ್ಲಿ ಆರಂಭವಾದ ಈ ಜಾಲತಾಣದಲ್ಲಿ ಆರಂಭದ ದಿನದಿಂದ ಸಾಕಷ್ಟು ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಈ ಸಂಬಂಧ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್​ ಅವರನ್ನು ಖುದ್ದು ಭೇಟಿಯಾಗಿ ವಿವರಣೆ ನೀಡುವಂತೆ ಹಣಕಾಸು ಸಚಿವಾಲಯ ಸೂಚಿಸಿದೆ. ಈ ಜಾಲತಾಣವನ್ನು ಹೆಚ್ಚು ಗ್ರಾಹಕರ ಬಳಕೆ ಸ್ನೇಹಿ ಮಾಡುವಂತೆ ಪರೇಕ್​ ಮತ್ತು ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ ರಾವ್​ ಅವರಿಗೆ ಸೂಚಿಸಲಾಗಿದೆ.

  ಈ ಸಂಬಂಧ ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಟ್ವೀಟ್​ ಮಾಡಿದ್ದು, ಕಳೆದ ಎರಡೂವರೆ ತಿಂಗಳಿನಿಂದ ಈ ಸಮಸ್ಯೆ ಮುಂದುವರೆದಿದೆ. ಇಷ್ಟು ದಿನವಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಲ್ಲದೇ ನಿನ್ನೆಯಿಂದ ಅಂದರೆ, ಆಗಸ್ಟ್​ 21ರಿಂದ ಪೋರ್ಟಲ್​ ಕೂಡ ಸಿಗುತ್ತಿಲ್ಲ. ಈ ಹಿನ್ನಲೆ ಪರೇಕ್​​ ಅವರಿಗೆ ಸಮನ್ಸ್​ ಜಾರಿ ಮಾಡಲಾಗುತ್ತಿದ್ದು, ಆಗಸ್ಟ್​ 23 ರಂದು ಅವರು ಕಚೇರಿಗೆ ಹಾಜರಾಗಿ ಈ ಸಂಬಂಧ ವಿವರಣೆ ನೀಡಬೇಕು ಎಂದು ಸೂಚಿಸಲಾಗಿದೆ.  ರಾಷ್ಟ್ರೀಯ ಇ ಆಡಳಿತದ ಯೋಜನೆ ಅಡಿ ತೆರಿಗೆದಾರರಿಗೆ ಅನುಕೂಲವಾಗುವ ಹೊಸ ಪೀಚರ್​ಗಳ ಮೂಲಕ ಇನ್ಫೋಸಿಸ್​​ ಈ ಪೋರ್ಟಲ್​ ಅಭಿವೃದ್ಧಿ ಪಡಿಸಿತ್ತು. ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ ಒಂದೇ ವೇದಿಕೆ ಒದಗಿಸುವುದು ಈ ಪೋರ್ಟಲ್​ನ ಉದ್ದೇಶವಾಗಿದೆ. ಕಳೆದ ಜೂನ್​ 7ರಂದು ಈ ಜಾಲತಾಣ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.

  ಈ ಪೋರ್ಟಲ್​ ಅಭಿವೃದ್ಧಿಗಾಗಿ ಸರ್ಕಾರ 164.5 ಕೋಟಿ ವ್ಯಯ ಮಾಡಿದೆ. ಜೂನ್​ ನಿಂದ ಆರಂಭವಾಗಿರುವ ಈ ವೆಬ್​ಸೈಟ್​ ತುಂಬಾ ನಿಧಾನಗತಿಯಾಗಿದ್ದು, ಪ್ರೊಫೈಲ್​ ಅಪ್​ ಡೇಟಿಂಗ್​, ಪಾಸ್​ ವರ್ಡ್ಸ್​ ಬದಲಾವಣೆ, ಟಿಡಿಎಸ್​ ರಿಟರ್ನ್ಸ್​ ಫೈಲ್​ ಮಾಡಲು ಆಗುತ್ತಿಲ್ಲ ಎಂದು ಈಗಾಗಲೇ ಅನೇಕ ದೂರುಗಳು ಕೇಳಿ ಬಂದಿತ್ತು. ಈ ಪೋರ್ಟ್​ ಬಿಡುಗಡೆಯಾದ 24 ಗಂಟೆಗಳಲ್ಲಿ ಸಮಸ್ಯೆ ಕಂಡು ಬಂದಾಗ ಕೂಡ ಈ ಸಮಸ್ಯೆ ಬಗೆಹರಿಸುವಂತೆ ನಂದನ್​ ನಿಲೇಕಣಿ ಅವರಿಗೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್​ ಟ್ವೀಟ್​ ಮೂಲಕ ಟ್ಯಾಗ್​ ಮಾಡಿದ್ದರು.

  ಇದನ್ನು ಓದಿ: ಯಶ್​​-ಪ್ರಭಾಸ್​​ ಮುಖಾಮುಖಿ; ಪ್ರಶಾಂತ್​ ನೀಲ್​​ರ ಎರಡು ಚಿತ್ರ ಒಂದೇ ದಿನ ಬಿಡುಗಡೆ

  ಸೆಂಟ್ರಲ್​ ಬೋರ್ಡ್​ ಆಫ್​ ಡೈರೆಕ್ಟ್​ ಟಾಕ್ಸ್​ (ಸಿಬಿಡಿಟಿ) ಮೂಲಕ ಜನರು ಆನ್​ಲೈನ್​ ತೆರಿಗೆ ಪಾವತಿ ಮಾಡಲು ಹಾಗೂ ಮೊಬೈಲ್​ ನಲ್ಲಿ ಈ ಅಪ್ಲಿಕೇಶನ್​ ಬಳಸಬಹುದಾಗಿದೆ. ಆದಾಯ ತೆರಿಗೆ ರಿಟರ್ನ್ಸ್​​ ಅನ್ನು ಶೀಘ್ರ ಪ್ರಕ್ರಿಯೆಗಾಗಿ ಈ ಮರುಪಾವತಿ ಹೊಸ ಪೋರ್ಟ್​ಲ್​ ಅನ್ನು ಸಿದ್ದಪಡಿಸಲಾಗಿದೆ. ಈ ಮೂಲಕ ತೆರಿಗೆದಾರರರು ಮತ್ತು ಕೇಂದ್ರ ಮಂಡಳಿ ಎಲ್ಲಾ ಕಾರ್ಯಚಟುವಟಿಕೆಗಳು ಕುರಿತು ಒಂದೇ ಡ್ಯಾಶ್​ ಬೋರ್ಡ್​ನಲ್ಲಿ ಮಾಹಿತಿ ಪಡೆಯಬಹುದಾಗಿದೆ

  ಇನ್ಫೋಸಿಸ್​ ಸಂಸ್ಥೆ 2017ರಲ್ಲಿ ಕೂಡ ಸರ್ಕಾರ ಜಿಎಸ್​ಟಿ ತೆರಿಗೆದಾರರು ಮತ್ತು ರಿಟನ್​ ಫೈಲಿಂಗ್​ಗಾಗಿ ಈ ಜಿಎಸ್​ಟಿಎನ್​ ​ ಪೋರ್ಟಲ್​ ಅನ್ನು ​ ಅಭಿವೃದ್ಧಿ ಪಡಿಸಿತು. ಈ ಸಂದರ್ಭದಲ್ಲಿ ಸಮಸ್ಯೆ ಕಂಡು ಬಂದು ತೊಂದರೆಯಾಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: