ಆಟೋಮೊಬೈಲ್​ ಉದ್ಯಮ ಕುಸಿತಕ್ಕೆ ಓಲಾ-ಊಬರ್​ ಕಾರಣ ಎಂಬ ವಿತ್ತ ಸಚಿವೆಯ ವ್ಯಾಖ್ಯಾನ ತಪ್ಪು ಎಂದ ನಿತಿನ್​ ಗಡ್ಕರಿ

ಬಿಎಸ್​6 ಹೊಂಡಾ ಆಕ್ಟಿವಾ ಸ್ಕೂಟರ್​ ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಹಲವಾರು ಕಾರಣಗಳಿವೆ ಎಂದರು.

HR Ramesh | news18-kannada
Updated:September 11, 2019, 3:59 PM IST
ಆಟೋಮೊಬೈಲ್​ ಉದ್ಯಮ ಕುಸಿತಕ್ಕೆ ಓಲಾ-ಊಬರ್​ ಕಾರಣ ಎಂಬ ವಿತ್ತ ಸಚಿವೆಯ ವ್ಯಾಖ್ಯಾನ ತಪ್ಪು ಎಂದ ನಿತಿನ್​ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ: ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಓಲಾ ಮತ್ತು ಊಬರ್​ ಕೊಡುಗೆಯೇ ಕಾರಣ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ನೀಡಿರುವುದು ಹೇಳಿಕೆ ತಪ್ಪು ವ್ಯಾಖ್ಯಾನ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಬಿಎಸ್​6 ಹೊಂಡಾ ಆಕ್ಟಿವಾ ಸ್ಕೂಟರ್​ ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಹಲವಾರು ಕಾರಣಗಳಿವೆ ಎಂದರು.

ಕಳೆದ ವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದಿನ ಪೀಳಿಗೆ ಇಎಂಐ ಗೊಂದಲಕ್ಕೆ ಸಿಲುಕಿಕೊಳ್ಳುವ ಬದಲಿಗೆ ಆ್ಯಪ್​ ಆಧಾರಿತ ಓಲಾ-ಊಬರ್ ಟ್ಯಾಕ್ಸಿಗಳನ್ನೇ ಓಡಾಟಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಕಾರುಗಳನ್ನು ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಆಟೋಮೊಬೈಲ್​ ಉದ್ಯಮ ನೆಲ ಕಚ್ಚಿದೆ ಎಂದು ಹೇಳಿದ್ದರು. ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿ, ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಜ್ಞಾನದ ಬಗ್ಗೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಇದನ್ನು ಓದಿ: ಜನರು ಓಲಾ, ಊಬರ್​ ಬಳಸುತ್ತಿರುವುದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವ್ಯಾಖ್ಯಾನ

ಆಟೋಮೊಬೈಲ್​ ಉದ್ಯಮ ಕುಸಿಯಲು ಹಲವಾರು ಕಾರಣಗಳಿವೆ. ಇ-ರಿಕ್ಷಾಗಳಿಂದ ಐಸಿಇ ಆಟೋರಿಕ್ಷಾಗಳ ಖರೀದಿ ಕಡಿಮೆಯಾಗಿದೆ. ಅದೇ ರೀತಿ ದೇಶಾದ್ಯಂತ ಸಾರ್ವಜನಿಕ ಸಾರಿಗೆ ಸುಧಾರಣೆ ಕೊಡುಗೆಯೂ ಸಹ ಇದೆ. ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಓಲಾ-ಊಬರ್​ ಬಳಕೆಯೂ ಸಹ ಒಂದು ಕಾರಣ ಎಂದು ವಿತ್ತ ಸಚಿವರು ಹೇಳಿರುವುದಾಗಿ ಗಡ್ಕರಿ ವಿವರಿಸಿದರು.

 

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ