Nirmala Sitharaman: ಬಿಟ್‌ಕಾಯಿನ್- ಕ್ರಿಪ್ಟೋಕರೆನ್ಸಿ ಕುರಿತು ಮಹತ್ವದ ಹೇಳಿಕೆ ನೀಡಿದ ಕೇಂದ್ರ ಹಣಕಾಸು ಸಚಿವೆ

ರಿಸರ್ವ್ ಬ್ಯಾಂಕ್ ಇಂಡಿಯಾದಿಂದ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಲು ಮಸೂದೆಯು ಯೋಜಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಟ್‌ಕಾಯಿನ್ ಅನ್ನು ದೇಶದಲ್ಲಿ ಕಾನೂನು ಬದ್ಧ ಟೆಂಡರ್ ಆಗಿ ಸ್ವೀಕರಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಟ್‌ಕಾಯಿನ್ (Bitcoin) ವ್ಯವಹಾರ ಸದ್ದಿಲ್ಲದೆ ತನ್ನ ಕೆಲಸ ಮಾಡುತ್ತಿದೆ. ಈ ಕುರಿತು ಸರಕಾರಕ್ಕೆ ಸುಳಿವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿನ ಕುರಿತಂತೆ ಕೇಂದ್ರವು ಯಾವುದೇ ಅಂಕಿ ಅಂಶಗಳನ್ನು ಸಂಗ್ರಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕ್ರಿಪ್ಟೋ ಮಾಲೀಕತ್ವದಲ್ಲಿ ವಿಶ್ವದ ಇತರ ಶಕ್ತಿಶಾಲಿ ದೇಶಗಳನ್ನು ಹಿಂದಿಕ್ಕಿದ ಭಾರತ:

ಬ್ರೋಕರ್ ಅನ್ವೇಷಣೆ ಮತ್ತು ಹೋಲಿಕೆ ಪ್ಲಾಟ್‌ಫಾರ್ಮ್ ಬ್ರೋಕರ್‌ಚೂಸರ್ (BrokerChooser) ಪ್ರಕಾರ ವಿಶ್ವದಲ್ಲಿಯೇ 10.7 ಕೋಟಿಯಷ್ಟು ಅತಿ ಹೆಚ್ಚಿನ ಕ್ರಿಪ್ಟೋಕರೆನ್ಸಿ ಹೋಲ್ಡರ್‌ಗಳನ್ನು ಭಾರತ ಹೊಂದಿದೆ. 2.74 ಕೋಟಿ ಕ್ರಿಪ್ಟೋ ಮಾಲೀಕರನ್ನು ಹೊಂದಿರುವ ಅಮೆರಿಕ ಎರಡನೆಯ ಸ್ಥಾನದಲ್ಲಿದ್ದು ರಷ್ಯಾ (1.74 ಕೋಟಿ) ಹಾಗೂ ನೈಜೀರಿಯಾ (1.30 ಕೋಟಿ) ನಂತರದ ಸ್ಥಾನದಲ್ಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವು 'ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021' ಅನ್ನು ಪರಿಚಯಿಸಲು ಸಿದ್ಧವಾಗಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಲು ಮಸೂದೆ ಯೋಜಿಸಿದೆ.

ಕ್ರಿಪ್ಟೋಕರೆನ್ಸಿ ನಿಷೇಧ ಮಸೂದೆ:

ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಭಾರತವು ಪ್ರಯತ್ನಿಸುತ್ತಿದ್ದು, ಕ್ರಿಪ್ಟೋಕರೆನ್ಸಿಗೆ ಆಧಾರವಾಗಿರುವ ತಂತ್ರಜ್ಞಾನ ಮತ್ತು ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಮಸೂದೆಯು ಅನುಮತಿಸುತ್ತದೆ ಎಂಬುದಾಗಿ ಲೋಕಸಭೆಯ ವೆಬ್‌ಸೈಟ್‌ನಲ್ಲಿರುವ ಬುಲೆಟಿನ್ ಉಲ್ಲೇಖಿಸಿದೆ. ರಿಸರ್ವ್ ಬ್ಯಾಂಕ್ ಇಂಡಿಯಾದಿಂದ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಲು ಮಸೂದೆಯು ಯೋಜಿಸಿದೆ.

ಕ್ರಿಪ್ಟೋಕರೆನ್ಸಿ ಕುರಿತು ಸಮಿತಿ ನೀಡಿದ ಮಾಹಿತಿ ಏನು?

ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದಂತೆ 2017ರಲ್ಲಿ ಕೇಂದ್ರ ಸರಕಾರವು ಡಿಇಎ ಕಾರ್ಯದರ್ಶಿ ಸುಭಾಷ್ ಗಾರ್ಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಅಂತರ್-ಸಚಿವಾಲಯ ಸಮಿತಿಯನ್ನು ಸ್ಥಾಪಿಸಿದ್ದು, ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ನಿಷೇಧಕ್ಕೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ಸಮಿತಿಯು ಜುಲೈ 2019ರಂದು ಸಲ್ಲಿಸಿದೆ. ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ಸಾರ್ವಭೌಮರಲ್ಲದವರು ನಿರ್ಮಿಸಿದ್ದಾರೆ ಹಾಗೂ ಇದರಿಂದಾಗಿ ಸಂಪೂರ್ಣವಾಗಿ ಇದು ಖಾಸಗಿ ಉದ್ಯಮವಾಗಿದೆ ಎಂದು ಸಮಿತಿಯು ಶಿಫಾರಸು ಮಾಡಿದೆ. ಈ ಖಾಸಗಿ ಕ್ರಿಪ್ಟೋಕರೆನ್ಸಿಗಳು ಕರೆನ್ಸಿಯ ಯಾವುದೇ ಗುಣಲಕ್ಷಣಗಳನ್ನು ಹೊಂದಿರದ ಕಾರಣ ಅವುಗಳಿಗೆ ಯಾವುದೇ ಅಂತರ್ಗತ ಮೌಲ್ಯವಿಲ್ಲ. ರಾಜ್ಯದಿಂದ ಒದಗಿಸಲಾದ ಯಾವುದೇ ಕ್ರಿಪ್ಟೋಕರೆನ್ಸಿ ಹೊರತುಪಡಿಸಿ, ಮಿಕ್ಕೆಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸಮಿತಿ ಸೂಚಿಸಿದೆ.

ಪ್ರಧಾನಿ ಮೋದಿ ನೀಡಿದ ಕರೆ ಏನು?

ಅಲ್ಲಿಂದ ನಂತರ ಬಹಳಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದ್ದು, ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರ್‌ಬಿಐ, ಹಣಕಾಸು ಸಚಿವಾಲಯ ಮತ್ತು ಸೆಬಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ವರದಿಗಳು ಉಲ್ಲೇಖಿಸಿರುವಂತೆ ಕ್ರಿಪ್ಟೋ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನವಾಗಿರುವುದರಿಂದ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸುವ ಭಾರತದ ಮುಂದಿನ ಗುರಿಯು ಪೂರ್ವಭಾವಿ, ಪ್ರಗತಿಶೀಲ ಹಾಗೂ ಭವಿಷ್ಯದ ದೃಷ್ಟಿಕೋನವನ್ನು ಒಳಗೊಂಡಿರುತ್ತದೆ ಎಂದಾಗಿದೆ. ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯು ಕ್ರಿಪ್ಟೋ ಉದ್ಯಮದ ಪ್ರತಿನಿಧಿಗಳು, ಮಧ್ಯಸ್ಥಗಾರರು ಮತ್ತು ತಜ್ಞರನ್ನು ಭೇಟಿ ಮಾಡಿದೆ.

ಇದನ್ನು ಓದಿ: ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ; ನೆಟ್ಟಿಗರ ಹೃದಯ ಗೆದ್ದ ಚಿತ್ರಗಳು

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಿಡ್ನಿ ಡಯಲಾಗ್‌ನಲ್ಲಿ ಕ್ರಿಪ್ಟೋಕರೆನ್ಸಿ ಕುರಿತು ಬಹುಮುಖ್ಯವಾದ ಎಚ್ಚರಿಕೆ ನೀಡಿದ್ದು, ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಬೇಕು ಹಾಗೂ ಅದು ನಮ್ಮ ಯುವಜನರನ್ನು ದಾರಿ ತಪ್ಪಿಸದಂತೆ ಖಾತ್ರಿಪಡಿಸಬೇಕು ಎಂದು ತಿಳಿಸಿದ್ದಾರೆ.

ಯುವಜನರಿಗೆ ಅಪಾಯಕಾರಿಯಾಗುತ್ತಿರುವ ಕ್ರಿಪ್ಟೋಕರೆನ್ಸಿ:

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (Internet and Mobile Association of India), ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (BACC), ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಮತ್ತು ಭಾರತದಲ್ಲಿರುವ ಕ್ರಿಪ್ಟೋ ಹೂಡಿಕೆ ಪರಿಸರ ವ್ಯವಸ್ಥೆಯ ಭಾಗವಾಗಿರುವ ಇತರವುಗಳನ್ನು ಒಳಗೊಂಡಂತೆ 13 ಸದಸ್ಯರ ಗುಂಪಿನ ಪ್ರಕಾರ ಭಾರತದಲ್ಲಿ ಕ್ರಿಪ್ಟೋ ಹೂಡಿಕೆದಾರರ ಒಟ್ಟು ಸಂಖ್ಯೆ 6 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಹೂಡಿಕೆಯೊಂದಿಗೆ ಕೆಲವು ಕೋಟಿಗಳನ್ನು ಹೊಂದಿದೆ ಎಂದಾಗಿದೆ.

ಇದನ್ನು ಓದಿ: Omicron ಆತಂಕದ ನಡುವೆ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮಗಳು

ಭಾರತದಲ್ಲಿ CoinSwitchKuber ಹಾಗೂ WazirX ಎರಡು ಪ್ರಸಿದ್ಧ ಕ್ರಿಪ್ಟೋ ವಿನಿಮಯಗಳಾಗಿದ್ದು 1.1 ಕೋಟಿ ಮತ್ತು 83 ಲಕ್ಷ ಬಳಕೆದಾರರೊಂದಿಗೆ 70 ಲಕ್ಷ ಗ್ರಾಹಕರನ್ನು ಹೊಂದಿರುವ ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ Zerodha ಅನ್ನು ಮೀರಿಸಿದೆ. ಕ್ರಿಪ್ಟೋ ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ಕೂಡ ಯುವಜನರನ್ನು ಆಕರ್ಷಿಸುತ್ತಿದೆ. ಕ್ರಿಪ್ಟೋ ನಿಯಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅನಿಶ್ಚತತೆಗಳಿದ್ದು ಶೀಘ್ರದಲ್ಲೇ ಸರಿಯಾದ ನಿಯಂತ್ರಣ ಜಾರಿಗೆ ತರಲು ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಈಕ್ವಿಟಿ ತಂತ್ರ, ಬ್ರೋಕಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಮುಖ್ಯಸ್ಥರಾದ ಹೇಮಂಗ್ ಜಾನಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಕ್ರಿಪ್ಟೋ ಕರೆನ್ಸಿ ನಿಯಂತ್ರಿಸುವ ಮುಂಬರುವ ಮಸೂದೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಬಲಿತ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಪ್ರಸ್ತಾಪವನ್ನು ಸೇರಿಸಬಹುದು ಎಂದಾಗಿದೆ.
Published by:Seema R
First published: