HOME » NEWS » National-international » FINANCE MINISTER NIRMALA SITHARAMAN LAYS DOWN SIX PILLARS OF BUDGET 2021 SNVS

Union Budget 2021 – ಈ ವರ್ಷದ ಬಜೆಟ್​ನ ಆರು ಸ್ತಂಭಗಳನ್ನ ಹೆಸರಿಸಿದ ಹಣಕಾಸು ಸಚಿವೆ

ಕೋವಿಡ್-19 ನಂತರ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ ಎಂದು ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್, ಇವತ್ತಿನ ತಮ್ಮ ಬಜೆಟ್​ನ ಆರು ಸ್ತಂಭಗಳನ್ನ ಹೆಸರಿಸಿದ್ದಾರೆ.

news18
Updated:February 1, 2021, 12:01 PM IST
Union Budget 2021 – ಈ ವರ್ಷದ ಬಜೆಟ್​ನ ಆರು ಸ್ತಂಭಗಳನ್ನ ಹೆಸರಿಸಿದ ಹಣಕಾಸು ಸಚಿವೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
  • News18
  • Last Updated: February 1, 2021, 12:01 PM IST
  • Share this:
ನವದೆಹಲಿ(ಫೆ. 01): ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸಾಮಾನ್ಯ ಸ್ಥಿತಿಯ ಅಸಾಮಾನ್ಯ ಬಜೆಟ್ ಎಂದು ಬಣ್ಣಿಸಿದ್ದಾರೆ. ಕೊರೋನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಬಳಿಕ ಸಂಕಷ್ಟಕ್ಕೆ ಸಿಲುಕಿದ ಆರ್ಥಿಕತೆಗೆ ಪುಷ್ಟಿ ನೀಡಲು ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿತು. ಪಿಎಂ ಗರೀಬ್ ಕಲ್ಯಾಣ ಯೋಜನೆ ಸೇರಿದಂತೆ ಹಲವು ಪರಿಹಾರ ಯೋಜನೆಗಳನ್ನ ಪ್ರಕಟಿಸಿತು. ಇದಕ್ಕಾಗಿ ಸರ್ಕಾರ ಮತ್ತು ಆರ್​ಬಿಐ 27.1 ಲಕ್ಷ ಕೋಟಿ ರೂ ವೆಚ್ಚ ಮಾಡಿದವು. ಕೋವಿಡ್ ಪರಿಹಾರ ಕ್ರಮಗಳಿಗೆ ಸರ್ಕಾರ ಮಾಡಿದ ವೆಚ್ಚ ಜಿಡಿಪಿಯ ಶೇ. 13ರಷ್ಟು ಇತ್ತು. ಇವತ್ತಿನ ಬಜೆಟ್​ಗೆ ಮುನ್ನ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಮೊದಲಾದವ ಯೋಜನೆಗಳನ್ನೊಳಗೊಂಡ 5 ಮಿನಿ ಬಜೆಟ್​ಗಳನ್ನೇ ಮಂಡಿಸಿತು ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಕೋವಿಡ್-19 ನಂತರ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ ಎಂದು ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್, ಇವತ್ತಿನ ತಮ್ಮ ಬಜೆಟ್​ನ ಆರು ಸ್ತಂಭಗಳನ್ನ ಹೆಸರಿಸಿದ್ದಾರೆ. ಆ ಆರು ಸ್ತಂಭಗಳು ಇಂತಿವೆ:

1) ಆರೋಗ್ಯ
2) ಭೌತಿಕ ಮತ್ತು ಹಣಕಾಸು ಬಂಡವಾಳ ಮತ್ತು ಸೌಕರ್ಯ
3) ಒಟ್ಟಾರೆ ಅಭಿವೃದ್ಧಿ (Inclusive Development)
4) ಮಾನವ ಬಂಡವಾಳ
5) ಕ್ರಿಯಾಶೀಲತೆ ಮತ್ತು ರೀಸರ್ಚ್ ಅಂಡ್ ಡೆವಲಪ್ಮೆಂಟ್ (R & D)6) ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ

ಇದನ್ನೂ ಓದಿ: Union Budget 2021: ಬೆಂಗಳೂರು ಮೆಟ್ರೋ ಫೇಸ್​-2ಗೆ 48,788 ಕೋಟಿ ; 2023ರ ಒಳಗೆ ಬ್ರಾಡ್​​ಗೇಜ್ ಮಾರ್ಗ ಸಂಪೂರ್ಣ ವಿದ್ಯುತೀಕರಣ

ಬಜೆಟ್​ನ ಮೊದಲ ಪಿಲ್ಲರ್ ಆದ ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್​ನಲ್ಲಿ ಬಹಳಷ್ಟು ಒತ್ತುಕೊಟ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಆರೋಗ್ಯ ಯೋಜನೆಗಳಿಗೆ 64 ಸಾವಿರ ಕೋಟಿ ರೂ, ಲಸಿಕೆಗಳಿಗೆ 35 ಸಾವಿರ ಕೊಟಿ ರೂ, ಸ್ವಚ್ಛ ಗಾಳಿಗೆ 2,200 ಕೋಟಿ ರೂ, ವಿಶ್ವ ಆರೋಗ್ಯ ಸಂಸ್ಥೆಯ ಒಂದು ಪ್ರಾದೇಶಿ ಸಂಶೋಧನಾ ಕೇಂದ್ರ, ನಾಲ್ಕು ವೈರಾಲಜಿ ಲ್ಯಾಬ್ ಇತ್ಯಾದಿ ಸ್ಥಾಪನೆಯನ್ನು ಅವರು ಪ್ರಕಟಿಸಿದ್ದಾರೆ.
Published by: Vijayasarthy SN
First published: February 1, 2021, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories