Lakhimpur Kheri violence: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

ಮೊದಲ ಬಾರಿಗೆ ಕೇಂದ್ರದ ಮಂತ್ರಿ ಲಖೀಂಪುರ ಹಿಂಸಾಚಾರದ ಕುರಿತ ಪ್ರತಿಕ್ರಿಯೆಯನ್ನು ಅಮೆರಿಕದಲ್ಲಿ ನೀಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

  • Share this:
    ನವದೆಹಲಿ (ಅ. 13): ಉತ್ತರ ಪ್ರದೇಶ ಲಖೀಂಪುರ ಖೇರಿ ಹಿಂಸಾಚಾರ (Lakhimpur Kheri violence) ಬಗ್ಗೆ ಅಮೆರಿಕದಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ( Union Minister of State (MoS) for Home Ajay Mishra's son Arrest)ಬಂಧನದ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರನ್ನ ಪ್ರಶ್ನೆ ಮಾಡಲಾಗಿದೆ. ಮೊದಲ ಬಾರಿಗೆ ಕೇಂದ್ರದ ಮಂತ್ರಿ ಲಖೀಂಪುರ ಹಿಂಸಾಚಾರದ ಕುರಿತ ಪ್ರತಿಕ್ರಿಯೆಯನ್ನು ಅಮೆರಿಕದಲ್ಲಿ ನೀಡಿದ್ದಾರೆ. ವಲ್ಡ್ ಬ್ಯಾಂಕ್ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ಸಚಿವೆ ಅಮೆರಿಕಗೆ ತೆರಳಿದ್ದಾರೆ. ಬೋಸ್ಟನ್ ನಗರದ ಹಾರ್ವರ್ಡ್ ಕೆನೆಡಿ ಸ್ಕೂಲ್ (Harvard Kennedy School)ನಲ್ಲಿ ನಡೆದ ಚರ್ಚೆ ವೇಳೆ ಲಖೀಂಪುರ ಖೇರಿಯ ಹಿಂಸಾಚಾರದ ಕುರಿತು ಕೇಳಲಾಗಿತ್ತು. ಈ ಘಟನೆ ಕುರಿತು ಕೇಂದ್ರ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರೋದೇಕೆ? ಈ ಸಂಬಂಧ ಯಾವುದೇ ಪ್ರಶ್ನೆಗಳನ್ನು ಕೇಳಿದ್ರೆ ತಪ್ಪಿಸಿಕೊಳ್ಳಿಸುವ ಪ್ರಯತ್ನವೇಕೆ ಎಂದು ಪ್ರಶ್ನಿಸಲಾಗಿತ್ತು.

    ವಿಪಕ್ಷಗಳತ್ತ ಬೆರಳು ತೋರಿಸಿದ ಸೀತಾರಾಮನ್:
    ಈ ಪ್ರಶ್ನೆಗೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್ ವಿರೋಧ ಪಕ್ಷಗಳತ್ತ ಬೆರಳು ಮಾಡಿದರು. ಲಖೀಂಪುರ ಖೇರಿಯ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದು ಖಂಡನೀಯ. ಆದರೆ ದೇಶದ ಇತರೆ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಆ ಎಲ್ಲ ಘಟನೆಗಳ ಬಗ್ಗೆ ಅವರು ಮಾತನಾಡುತ್ತಿಲ್ಲ ಏಕೆ? ಆದ್ರೆ ಇಂತಹ ಘಟನೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರೋದರಿಂದ ಮಾತ್ರ ಈ ಘಟನಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಎಲ್ಲವೂ ಕಾನೂನಿನಡಿಯಲ್ಲಿಯೇ ತನಿಖೆ:
    ನೀವೆಲ್ಲರೂ ಮತ್ತು ಡಾ.ಅಮರ್ತ್ಯ ಸೇನ್ (Amartya Sen Indian economist) ಅವರಿಗೆ ಭಾರತದ ಬಗ್ಗೆ ಚೆನ್ನಾಗಿ ತಿಳಿದಿದೆ. ಪ್ರತಿಬಾರಿಯೂ ಇಂತಹ ವಿಷಯಗಳನ್ನು ಪ್ರಸ್ತಾಪಿಸಲಿ ಎಂದು ಇಚ್ಛಿಸುತ್ತೇನೆ. ನನ್ನ ಸಂಪುಟದ ಸಹೋದ್ಯೋಗಿ ಪುತ್ರ ಬಹುಶಃ ತೊಂದರೆಯಲ್ಲಿ ಸಿಲುಕಿದ್ದಾರೆ ಅಥವಾ ಈ ಎಲ್ಲ ಘಟನೆಗೂ ಅವರೇ ಕಾರಣ ಎಂದು ತಿಳಿದುಕೊಳ್ಳೋಣ. ಈ ಹಿಂಸಾಚಾರದಲ್ಲಿ ಬೇರೆ ಯಾರದ್ದು ಕೈವಾಡ ಇಲ್ಲ ಎಂಬುದನ್ನು ಅಂತ ಯೋಚಿಸೋಣ. ಆದ್ರೂ ಕಾನೂನಿನ ಪ್ರಕಾರವೇ ತನಿಖೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

    ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

    ಭಾರತದ ರಕ್ಷಣೆ, ಸತ್ಯದ ಮಾತು:
    ನಮ್ಮ ಪಕ್ಷ ಅಥವಾ ನಮ್ಮ ಪ್ರಧಾನಿಗಳು ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ ಮತ್ತು ಮಾಡುವದಿಲ್ಲ. ಪ್ರಧಾನಿಗಳು ಭಾರತದ ರಕ್ಷಣೆಯನ್ನು ಮಾಡುತ್ತಿದ್ದಾರೆ. ನಾನು ಭಾರತದ ಬಗ್ಗೆ ಮಾತನಾಡುತ್ತೇನೆ. ಬಡವರಿಗೆ ನ್ಯಾಯ ದೊರಕಿಸುವ ಕುರಿತು ಹಾಗೂ ಸತ್ಯದ ಬಗ್ಗೆ ಮಾತುಗಳನ್ನಾಡಬೇಕು ಎಂದು ಸರ್ಕಾರ ಮತ್ತು ಪಕ್ಷದ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನು ಸಾರಾಸಗಟವಾಗಿ ತಳ್ಳಿ ಹಾಕಿದರು.

    ಇದನ್ನು ಓದಿ: ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಸೂಟ್​ಕೇಸ್​; ಆಯುಧ ಪೂಜೆ ಸಂಭ್ರಮದಲ್ಲಿದ್ದ ಜನರಿಗೆ ಆತಂಕ

    ಕೃಷಿ ಕಾನೂನುಗಳ ಬಗ್ಗೆ ಸಚಿವರು ಹೇಳಿದ್ದೇನು?
    ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾನೂನುಗಳ ಬಗ್ಗೆ ಕಳೆದ ಒಂದು ದಶಕದಿಂದಲೂ ಬೇರೆ ಬೇರೆ ಸಂಸದೀಯ ಸಮಿತಿಗಳು ಸಭೆ ನಡೆಸಿವೆ. 20104ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ಲ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ಕೃಷಿ ಕಾನೂನು ಬಗ್ಗೆ ಮಾತನಾಡಿದ್ದವು. ಲೋಕಸಭೆಯಲ್ಲಿ ಕೃಷಿ ಬಿಲ್ (Farms Bill) ತಂದು ವಿಸ್ತಾರವಾಗಿ ಚರ್ಚೆ ನಡೆಸಲಾಗಿದೆ. ವಿರೋಧ ಪಕ್ಷದ ಎಲ್ಲ ಪ್ರಶ್ನೆಗಳಿಗೆ ಕೃಷಿ ಸಚಿವರು ಉತ್ತರ ನೀಡಿದ್ದಾರೆ. ಆದ್ರೆ ಬಿಲ್ ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಂತೆ ಹೈಡ್ರಾಮಾವೇ ಮಾಡಲಾಯ್ತು ಎಂದು ಕೃಷಿ ಕಾನೂನುಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು.

    ಮಹ್ಮದ್​ ರಫೀಕ್​ ಕೆ
    Published by:Seema R
    First published: