ಕೊನೆಗೂ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟ ತಲೈವಾ; ರಜನಿಕಾಂತ್​ ರಾಜಕೀಯ ಪ್ರವೇಶ ಸೃಷ್ಟಿಸುತ್ತಾ ಹೊಸ ಅಲೆ?

ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಸಭೆ ಕರೆದಿದ್ದ ರಜನಿಕಾಂತ್​ ತಾವು ರಾಜಕೀಯ ಪ್ರವೇಶಿಸುವುದು ಖಚಿತ ಎಂದು ಹೇಳಿದ್ದರು. ಆದರೆ, ಎಂದು? ಯಾವಾಗ? ಮತ್ತು ಪಕ್ಷದ ಹೆಸರೇನು? ಎಂಬ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ, ಇಂದು ಈ ಎಲ್ಲಾ ಪ್ರಶ್ನೆಗಳಿಗೆ ಅವರು ಖಚಿತತೆ ನೀಡಿದ್ದಾರೆ.

MAshok Kumar | news18-kannada
Updated:March 12, 2020, 12:06 PM IST
ಕೊನೆಗೂ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟ ತಲೈವಾ; ರಜನಿಕಾಂತ್​ ರಾಜಕೀಯ ಪ್ರವೇಶ ಸೃಷ್ಟಿಸುತ್ತಾ ಹೊಸ ಅಲೆ?
ನಟ ರಜನಿಕಾಂತ್​
  • Share this:
ಚೆನ್ನೈ (ಮಾರ್ಚ್​ 12); ಕಳೆದ ಎರಡು ಮೂರು ವರ್ಷಗಳಿಂದ ತಮ್ಮ ರಾಜಕೀಯ ಪಕ್ಷ ದ ಕುರಿತ ಸುದ್ದಿಗಳನ್ನು ಗಾಳಿಯಲ್ಲಿ ತೇಲಿಬಿಟ್ಟು ಸಿನಿಮಾದಲ್ಲಿ ಬ್ಯುಸಿ ಆಗಿದ್ದ ಸೂಪರ್​ ಸ್ಟಾರ್ ರಜನೀಕಾಂತ್ ಕೊನೆಗೂ ತನ್ನ ರಾಜಕೀಯ ಪ್ರವೇಶವನ್ನು ಅಧಿಕೃತಗೊಳಿಸಿದ್ದಾರೆ. ಅಲ್ಲದೆ ಇಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷದ ಹೆಸರು ಮತ್ತು ತಮ್ಮ ಕನಸಿನ ರಾಜಕಾರಣದ ಕುರಿತು ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಜನಿಕಾಂತ್, "ರಾಜಕಾರಣ ಎಂಬುದು ಇಂದಿನ ದಿನಗಳಲ್ಲಿ ದೊಡ್ಡ ವ್ಯವಹಾರವಾಗಿ ಬದಲಾಗಿದೆ. ಮತಗಳಿಕೆಗೆ ಮಾತ್ರ ರಾಜಕಾರಣ ಎಂಬಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಸರ್ಕಾರದ ಅನುದಾನಗಳು, ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಇದರಿಂದ ಬಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಡೀ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು. ಈ ಉದ್ದೇಶದಿಂದಲೇ ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ. 'ಮಕ್ಕಳ್ ಮಂಡ್ರಂ' ಎಂಬ ಪಕ್ಷ ಸ್ಥಾಪಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

"ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮರಣದ ನಂತರ ರಾಜ್ಯದಲ್ಲಿ ರಾಜಕೀಯ ನಿರ್ವಾತ ಸ್ಥಿತಿ ಉದ್ಭವಿಸಿದೆ. ಹೀಗಾಗಿ ಆ ಸ್ಥಾನವನ್ನು ತುಂಬುವುದೇ ನನ್ನ ಉದ್ದೇಶ. ಹಾಗೆಂದು ನಾನು ಎಂದಿಗೂ ಸಿಎಂ ಆಗಬೇಕು ಎಂದು ಕನಸು ಕಂಡವನಲ್ಲ. ಪಕ್ಷ ಬೇರೆ, ಸರ್ಕಾರ ಬೇರೆ. ಜನರಿಗೆ ಒಳ್ಳೆಯದು ಮಾಡುವುದೇ ನನ್ನ ಉದ್ದೇಶ. ಇದೇ ಕಾರಣಕ್ಕೆ ಪಕ್ಷ ಸ್ಥಾಪಿಸಲು ಮುಂದಾಗಿದ್ದೇನೆ. ನನ್ನ ಪಕ್ಷದಲ್ಲಿ ಶೇ.60-65 ರಷ್ಟು ಯುವಕರಿಗೆ ಸ್ಥಾನ ನೀಡುತ್ತೇನೆ. ಐಎಎಸ್​, ಐಪಿಎಸ್ ಅಧಿಕಾರಿಗಳಿಗೆ ಮೊದಲ ಆದ್ಯತೆ ಮತ್ತು ಸುಶಿಕ್ಷಿತರಿಗೆ ಮಾತ್ರ ನಾನು ಸ್ಥಾನ ನಿಡುತ್ತೇನೆ" ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಸಭೆ ಕರೆದಿದ್ದ ರಜನಿಕಾಂತ್​ ತಾವು ರಾಜಕೀಯ ಪ್ರವೇಶಿಸುವುದು ಖಚಿತ ಎಂದು ಹೇಳಿದ್ದರು. ಆದರೆ, ಎಂದು? ಯಾವಾಗ? ಮತ್ತು ಪಕ್ಷದ ಹೆಸರೇನು? ಎಂಬ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ, ಇಂದು ಈ ಎಲ್ಲಾ ಪ್ರಶ್ನೆಗಳಿಗೆ ಅವರು ಖಚಿತತೆ ನೀಡಿದ್ದಾರೆ.

2022ರಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಟ ರಜನಿಕಾಂತ್ ನೇತೃತ್ವದ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಟ್ಟಾರೆ ಇಷ್ಟು ದಿನ ಗಾಳಿ ಸುದ್ದಿಗೆ ಮಾತ್ರ ಸೀಮಿತವಾಗಿದ್ದ ರಜಿನಿ ರಾಜಕೀಯ ಪ್ರವೇಶಕ್ಕೆ ಇಂದು ಅಧಿಕೃತ ಮುದ್ರೆ ಬಿದ್ದಿದ್ದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಸೃಷ್ಟಿಯಾಗಿದೆ. ಅಲ್ಲದೆ, ಅಲ್ಲಿನ ಪ್ರಮುಖ ಪ್ರಾದೇಶಿಕ ಪಕ್ಷಗಳಲ್ಲಿ ಈಗಾಗಲೇ ತಲ್ಲಣ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಷೇರುಪೇಟೆಯ ಮೇಲೂ ಕೊರೋನಾ ಎಫೆಕ್ಟ್​; 2018ರ ನಂತರ ಅತ್ಯಂತ ಕನಿಷ್ಟ ಮಟ್ಟ ದಾಖಲಿಸಿದ ನಿಫ್ಟಿ-ರೂಪಾಯಿ ಮೌಲ್ಯ
First published:March 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading