Ghazipur Landfill: ಚಿತ್ರೀಕರಣ ಶುಲ್ಕ 2 ಲಕ್ಷಕ್ಕೆ ಏರಿಕೆ: ದೆಹಲಿ ಮುನ್ಸಿಪಲ್ ಕಾರ್ಪೋರೇಷನ್‌ನ ಹೊಸ ನೀತಿ ಖಂಡಿಸಿದ AAP

ಆಡಳಿತಾರೂಢ ಆಮ್ ಆದ್ಮಿ ಪಕ್ಷವು (AAP) ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್‌ನ ಈ ಕ್ರಮವನ್ನು ಖಂಡಿಸಿದ್ದು, ವಿಶ್ವದಾದ್ಯಂತ ದೆಹಲಿಯ ಹೆಸರನ್ನು ಕೆಡಿಸಿದೆ ಎಂದು ಆರೋಪಿಸಿದೆ. 

ಗಾಜಿಪುರ್ ಲ್ಯಾಂಡ್‌ಫಿಲ್​ನ ಚಿತ್ರ

ಗಾಜಿಪುರ್ ಲ್ಯಾಂಡ್‌ಫಿಲ್​ನ ಚಿತ್ರ

  • Share this:
ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ (East Delhi Municipal Corporation) ಹೊಸ ಚಲನಚಿತ್ರ ನೀತಿಗೆ ಸಂಬಂಧಿಸಿದಂತೆ ರಾಜಕೀಯ ವಿವಾದವು ಭುಗಿಲೆದ್ದಿದೆ. ದೆಹಲಿ ಕಾರ್ಪೋರೇಷನ್​ ವ್ಯಾಪ್ತಿಗೆ ಸೇರಿದ ಕುಖ್ಯಾತ ಗಾಜಿಪುರ್ ಲ್ಯಾಂಡ್‌ಫಿಲ್ ಸೈಟ್  (Ghazipur Landfill Site) ಮತ್ತು ಅದರ ಸುತ್ತಮುತ್ತ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಆಗುತ್ತಲೇ ಇರುತ್ತದೆ. ಇನ್ನು ಮುಂದೆ ಇಲ್ಲಿ ಸಿನಿಮಾ ಶೂಟಿಂಗ್​ ಮಾಡುವವರು ಒಂದು ದಿನಕ್ಕೆ 2 ಲಕ್ಷ ರೂಪಾಯಿ ಶುಲ್ಕ ನೀಡಬೇಕಂತೆ. ಹೀಗೆಂದು ಮುನ್ಸಿಪಲ್​ ಕಾರ್ಪೋರೇಷನ್ ಹೊಸ ನೀತಿ ರೂಪಿಸಿದೆ.​ ಇದೇ ಸಮಯದಲ್ಲಿ EDMC ಯು ಪೂರ್ವ ದೆಹಲಿಯ ಯಾವುದೇ ಸ್ಥಳದಲ್ಲಿ ಚಿತ್ರೀಕರಣಕ್ಕಾಗಿ ರೂ 75,000 ಶುಲ್ಕವನ್ನು ವಿಧಿಸುತ್ತಿದ್ದು ಇದು ಗಾಜಿಪುರ ಲ್ಯಾಂಡ್‌ಫಿಲ್‌ನ ಅರ್ಧಕ್ಕಿಂತ ಕಡಿಮೆ ದರವಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪೌರ ಸಂಸ್ಥೆಯು ಭದ್ರತಾ ಠೇವಣಿಯಾಗಿ 25,000 ಮತ್ತು ನೋಂದಣಿ ಶುಲ್ಕವಾಗಿ 10,000 ರೂ ಪಾವತಿಸಬೇಕು.

ಆಡಳಿತಾರೂಢ ಆಮ್ ಆದ್ಮಿ ಪಕ್ಷವು (AAP) ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್‌ನ ಈ ಕ್ರಮವನ್ನು ಖಂಡಿಸಿದ್ದು, ವಿಶ್ವದಾದ್ಯಂತ ದೆಹಲಿಯ ಹೆಸರನ್ನು ಕೆಡಿಸಿದೆ ಎಂದು ಆರೋಪಿಸಿದೆ.

film makers need to pay 2 lakh per day to shoot at Ghazipur landfill site and aap slams delhi civic body for new policy stg ae
ಗಾಜಿಪುರ್ ಲ್ಯಾಂಡ್‌ಫಿಲ್​ಗೆ ಬೆಂಕಿ ಬಿದ್ದಾಗ ತೆಗೆದಿದ್ದ ಚಿತ್ರ (ಸಂಗ್ರಹ ಚಿತ್ರ)


ಗಾಜಿಪುರ್ ಲ್ಯಾಂಡ್‌ಫಿಲ್ ಕಸದ ರಾಶಿಯಲ್ಲ. ಆದರೆ, ದೆಹಲಿಯ ಹೆಸರು ಕೆಡಿಸುವ ಸ್ಥಳವಾಗಿದೆ. ಕಸದ ರಾಶಿಯಲ್ಲಿ ಚಲನಚಿತ್ರಗಳನ್ನು ಚಿತ್ರೀಕರಿಸಲು ಕಾರ್ಪೋರೇಷನ್ ಇದೀಗ ಶುಲ್ಕವನ್ನು ವಿಧಿಸುತ್ತಿದ್ದು, ಬಿಜೆಪಿ-ನೇತೃತ್ವದ ಮುನ್ಸಿಪಲ್ ಕಾರ್ಪೋರೇಷನ್ ದೆಹಲಿಯ ಜನತೆ ಹಾಗೂ ಭಾರತದ ರಾಜಕೀಯದ ಹೆಸರನ್ನು ಕೆಡಿಸಲು ಸಂಚು ರೂಪಿಸಿದಂತಿದೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

ಗಾಜಿಪುರ್ ಲ್ಯಾಂಡ್‌ಫಿಲ್‌ನ ಸಮೀಪ ಚಿತ್ರೀಕರಣದ ನಂತರ, ಕಸದ ರಾಶಿಯಿರುವ ಚಿತ್ರಗಳು ಹಕ್ಕು ಸ್ವಾಮ್ಯವನ್ನು ಹೊಂದಿರಬೇಕು ಹಾಗೂ ಈ ಕಸದ ರಾಶಿಯ ಸಂಪೂರ್ಣ ಹೆಗ್ಗಳಿಕೆ ಬಿಜೆಪಿ-ನೇತೃತ್ವದ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್‌ಗೆ ಸಲ್ಲುತ್ತದೆ ಎಂದು ಸೌರಭ್ ವ್ಯಂಗವಾಡಿದ್ದಾರೆ.

ಇದನ್ನೂ ಓದಿ: Puneeth Rajkumar-Santhosh Ananddram ಜೊತೆ ಸಹ ಭೋಜನ ಸವಿದ ಜಗ್ಗೇಶ್​

ಗಾಜಿಪುರ್‌ನಲ್ಲಿನ ಕಸದ ರಾಶಿಯನ್ನು ಕಡಿಮೆ ಮಾಡುವಲ್ಲಿ ಯಾವುದೇ ರೀತಿಯ ಕ್ರಮಗಳನ್ನು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ತೆಗೆದುಕೊಂಡಿಲ್ಲ ಎಂದು ಸೌರಭ್ ಸಂಸದರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಂದ್ರ ಸರಕಾರ ಕೂಡ ಕಸದ ರಾಶಿಯನ್ನು ತಗ್ಗಿಸುವಲ್ಲಿ ಕೈಗೊಳ್ಳಬೇಕಾದ ಯೋಜನೆಗಳಿಗೆ ಹಣವಿನಿಯೋಗಿಸಿಲ್ಲವೆಂದು ಎಎಪಿ ಶಾಸಕ ತಿಳಿಸಿದ್ದಾರೆ. ಬದಲಾಗಿ, ಅದರ ಹೆಚ್ಚಿನ ಭಾಗವನ್ನು ದೆಹಲಿ ಸರಕಾರವು ಭರಿಸಿತು ಮತ್ತು ಸ್ವಲ್ಪ ಭಾಗವನ್ನು MCD ಯಿಂದ ಭರಿಸಲಾಯಿತು.

ಕಸದ ರಾಶಿಯನ್ನು ಸಂಗ್ರಹಿಸುವ ಮೂಲಕ ನಿಗಮವು ಕೋಟ್ಯಂತರ ರೂಪಾಯಿಗಳನ್ನು ಗಳಿಸಬಹುದು. ಅದರ ಬದಲಿಗೆ ಕಸದ ಗುಡ್ಡದಿಂದ ರೂ 2 ಲಕ್ಷ ಗಳಿಸಲು ಬಯಸುತ್ತಿರುವುದು ವಿಚಿತ್ರವಾಗಿದೆ ಎಂದು ಭಾರದ್ವಾಜ್ ಟೀಕಿಸಿದ್ದಾರೆ. ಇದರ ನಡುವೆಯೇ EDMC ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಹೊಸ ಚಲನಚಿತ್ರ ನೀತಿಯು ನಾಗರಿಕ ಸಂಸ್ಥೆಗೆ ಆದಾಯವನ್ನು ಸೃಷ್ಟಿಸಲಿದ್ದು, ಇಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮಗಳಾದ ಚಲನಚಿತ್ರಗಳು, ಟಿವಿ ಪ್ರದರ್ಶನಗಳು ಹಾಗೂ ವೆಬ್ ಸಿರೀಸ್‌ಗಳ ಮೂಲಕ ಪೂರ್ವ ದೆಹಲಿಯಲ್ಲಿರುವ ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಚಾರವನ್ನು ನೀಡಲಿದೆ. ಈ ಹಿಂದೆ ಈ ರೀತಿಯ ಯಾವುದೇ ನೀತಿ ಇರಲಿಲ್ಲ, ಚಲಚಿತ್ರ ನಿರ್ಮಾಪಕರು ಉಚಿತವಾಗಿ ಶೂಟಿಂಗ್ ನಡೆಸಬಹುದಾಗಿತ್ತು.

ಇದನ್ನೂ ಓದಿ: ಬಿಕಿನಿ ಬಿಟ್ಟು ಸೀರೆಯುಟ್ಟ Sara Ali Khan: ನಟಿಯ ಕ್ಲಾಸಿ ಲುಕ್​ಗೆ ಅಭಿಮಾನಿಗಳು ಫಿದಾ..!

EDMC ಮಹಾಪೌರರಾದ (ಮೇಯರ್) ಶ್ಯಾಮ್ ಸುಂದರ್ ಅಗರ್‌ವಾಲ್ ಈಗಾಗಲೇ 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಅಡಿಯಲ್ಲಿ ಹೊಸ ಚಲನಚಿತ್ರ ನೀತಿಯನ್ನು ಅನುಮೋದಿಸಿದ್ದಾರೆ. ಚಲನಚಿತ್ರ ನಿರ್ಮಾಪಕರು ಚಿತ್ರೀಕರಣ ನಡೆಸಲು ಆನ್‌ಲೈನ್‌ನಲ್ಲಿ ಅನುಮತಿ ಕೋರಬಹುದಾದ ವ್ಯವಸ್ಥೆಯು ಪ್ರಸ್ತುತ ಕಾರ್ಯಾಚರಣೆಯಲ್ಲಿದೆ. ದೆಹಲಿ ಪ್ರವಾಸೋದ್ಯಮ ಹಾಗೂ ಸಾರಿಗೆ ಅಭಿವೃದ್ಧಿ ನಿಗಮವು ಇದಕ್ಕೆ ನೋಡಲ್ ಏಜೆನ್ಸಿಯಾಗಿದೆ.
Published by:Anitha E
First published: