ITR Filing: ಹೊಸ ವೆಬ್​ ಪೋರ್ಟಲ್​ನಲ್ಲಿ ಆನ್‌ಲೈನ್​​ ಮೂಲಕ Income Tax Return ಸಲ್ಲಿಸುವುದು ಹೇಗೆ..? ಇಲ್ಲಿದೆ ವಿವರ

ತೆರಿಗೆ ಪಾವತಿಸುವವರು ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್(Income Tax Return) ಸಲ್ಲಿಸಲು ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಆದಾಯ ತೆರಿಗೆ

ಆದಾಯ ತೆರಿಗೆ

  • Share this:
ತೆರಿಗೆ(Tax) ಸಲ್ಲಿಸುವ ಪ್ರಕ್ರಿಯೆ ಹಾಗೂ ತೆರಿಗೆ ಸಂಬಂಧಿತ ಕಾರ್ಯಗಳನ್ನು ಸುಲಭಗೊಳಿಸುವ ಸಲುವಾಗಿ ಆದಾಯ ತೆರಿಗೆ ಇಲಾಖೆಯು ಹೊಸ ವೆಬ್ ಪೋರ್ಟಲ್(New Web Portal) ಆರಂಭಿಸಿದ್ದು ಈ ಪೋರ್ಟಲ್ ಹೆಚ್ಚು ಸಂವಾದಾತ್ಮಕ ಹಾಗೂ ಬಳಕೆದಾರ ಸ್ನೇಹಿಯಾಗಿದೆ. ಈ ಕುರಿತು ತೆರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈ ಪೋರ್ಟಲ್ ವೇಗವಾಗಿ ಪ್ರಕ್ರಿಯೆಗೊಳಿಸಲು ಹಾಗೂ ತ್ವರಿತವಾಗಿ ಮರುಪಾವತಿ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದೆ.ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ಆದಾಯ ತೆರಿಗೆ ವೆಬ್‌ಸೈಟ್‌(Income Tax Website)ನಲ್ಲಿ ನೋಂದಣಿ ಮಾಡಿಕೊಳ್ಳುವುದು ಮುಖ್ಯವಾಗಿದೆ. ಅದೇ ರೀತಿ ತೆರಿಗೆ ಪಾವತಿಸುವವರು ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್(Income Tax Return) ಸಲ್ಲಿಸಲು ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಪ್ರಸ್ತುತ ಆದಾಯ ತೆರಿಗೆ ರಿಟರ್ನ್ಸ್ (ITR) 1, ಹಾಗೂ 4 ಲಭ್ಯವಿದ್ದು ತೆರಿಗೆ ಪಾವತಿಸುವವರು ಆನ್‌ಲೈನ್‌ ಮೂಲಕ ರಿಟರ್ನ್ ಸಲ್ಲಿಸಬಹುದು. ಹಾಗಾದರೆ ಹೊಸ ಪೋರ್ಟಲ್‌ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಹಂತ 1: ನೀವು ಮೊದಲ ಬಾರಿಗೆ ಪೋರ್ಟಲ್ ಬಳಸುವವರಾಗಿದ್ದರೆ ನಿಮ್ಮ ಶಾಶ್ವತ ಖಾತೆ ಸಂಖ್ಯೆಯೊಂದಿಗೆ (ಪರ್ಮನೆಂಟ್ ಅಕೌಂಟ್ ನಂಬರ್) ಬಳಕೆದಾರ ಐಡಿ ಹಾಗೂ ಪಾಸ್‌ವರ್ಡ್ ರಚಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ಹಂತ 2: “ಇ-ಫೈಲ್” ಕ್ಲಿಕ್ ಮಾಡಿ. ತದನಂತರ ಫೈಲ್ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಕ್ಲಿಕ್ ಮಾಡಿ.

ಹಂತ 3: ನೀವು ಆದಾಯ ತೆರಿಗೆ ಸಲ್ಲಿಸುತ್ತಿರುವ ತೆರಿಗೆ ವರ್ಷವನ್ನು ಆರಿಸಬೇಕು. ತದನಂತರ ಕಂಟಿನ್ಯೂ ಎಂಬುದನ್ನು ಕ್ಲಿಕ್ ಮಾಡಿ. ಈಗ ಪೋರ್ಟಲ್ ನಿಮ್ಮಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸಲ್ಲಿಸಲು ಬಯಸುತ್ತೀರಾ ಎಂದು ಕೇಳುತ್ತದೆ. ತೆರಿಗೆ ಸಲ್ಲಿಸುವಿಕೆ ಶಿಫಾರಸು ಮಾಡಲಾದ ವಿಧಾನವಾಗಿರುವ ಆನ್‌ಲೈನ್ ಅನ್ನು ನೀವು ಆರಿಸಬಹುದು.

ಹಂತ 4: ಈಗ ನೀವು ಆದಾಯ ತೆರಿಗೆಯನ್ನು ವೈಯಕ್ತಿಕವಾಗಿ, HUF (ಹಿಂದೂ ಅವಿಭಜಿತ ಕುಟುಂಬ) ಅಥವಾ ಇತರ ಹೀಗೆ ಫೈಲ್ ಮಾಡಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಇಂಡಿವಿಶ್ಯುಯಲ್ ಆಯ್ಕೆಮಾಡಿ.

ಹಂತ 5: ನೀವು ಸಲ್ಲಿಸಲು ಅರ್ಹವಾಗಿರುವ ಐಟಿಆರ್ ಅನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.  ತೆರಿಗೆ ಸಲ್ಲಿಸಲು ವಿವಿಧ ಷರತ್ತುಗಳಿದ್ದು ಉದಾಹರಣೆಗೆ 50 ಲಕ್ಷ ರೂ. ಆದಾಯವಿರುವ ವೇತನ ಪಡೆಯುವ ವ್ಯಕ್ತಿಯು ಒಂದು ಮನೆ, ಹಾಗೂ ಕೃಷಿ ಆದಾಯವನ್ನು 5,000 ರೂ.ವರೆಗೆ ಪಡೆಯುತ್ತಿದ್ದಲ್ಲಿ ಆ ವ್ಯಕ್ತಿ ITR1 ಸಲ್ಲಿಸಬಹುದು. ITR 2 ಅನ್ನು ಒಬ್ಬ ವ್ಯಕ್ತಿ ಅಥವಾ HUFಗಳು ಸಲ್ಲಿಸಬಹುದಾಗಿದ್ದು ಇವರುಗಳು ಯಾವುದೇ ಬಿಸ್‌ನೆಸ್ ಅಥವಾ ವೃತ್ತಿಯಿಂದ ಆದಾಯ ಪಡೆಯುವವರಾಗಿರುವುದಿಲ್ಲ. ಪ್ರಸ್ತುತ ಆದಾಯ ತೆರಿಗೆ 1, ಹಾಗೂ 4 ಮಾತ್ರವೇ ಸಲ್ಲಿಸುವಿಕೆಗಾಗಿ ಲಭ್ಯವಿದೆ. ಯಾವ ಫಾರ್ಮ್ ಆಯ್ಕೆಮಾಡಬೇಕು ಎಂಬ ಗೊಂದಲವನ್ನು ನೀವು ಹೊಂದಿದ್ದರೆ ಆನ್‌ಲೈನ್ ಸಹಾಯ ಪಡೆದುಕೊಳ್ಳಬಹುದಾಗಿದೆ. ಪ್ರೊಸೀಡ್ ವಿದ್ ಐಟಿಆರ್ 1 ಕ್ಲಿಕ್ ಮಾಡಿ.

ಹಂತ 6: ಮೂಲ ವಿನಾಯಿತಿ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದಲ್ಲಿ ಅಥವಾ ವಿಭಾಗ 139(1) ವ್ಯಾಪ್ತಿಯಲ್ಲಿ ಏಳನೆಯ ನಿಬಂಧನೆಯ ಕಾರಣದಿಂದ ಈ ಹಂತದಲ್ಲಿ ನಿಮ್ಮನ್ನು ಐಟಿಆರ್ ಸಲ್ಲಿಸುವ ಕಾರಣವನ್ನು ಕೇಳಲಾಗುತ್ತದೆ. ಈ ವಿಭಾಗದನ್ವಯ ಆ ವರ್ಷದಲ್ಲಿ ಒಬ್ಬ ವ್ಯಕ್ತಿಯು ಒಂದು ಅಥವಾ ಹೆಚ್ಚಿನ ಚಾಲ್ತಿ ಖಾತೆಗಳಲ್ಲಿ 1 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತ ಠೇವಣಿಯಾಗಿ ಇರಿಸಿದ್ದರೆ ವಿದೇಶಿ ಪ್ರವಾಸದಲ್ಲಿ 2 ಲಕ್ಷ ರೂ ಗಿಂತ ಹೆಚ್ಚು ಖರ್ಚಾಗಿದ್ದರೆ ಅಥವಾ 1 ಲಕ್ಷ ರೂ. ಗಿಂತ ಹೆಚ್ಚಿನ ವಿದ್ಯುತ್ ಶುಲ್ಕ ಪಾವತಿಸಿದ್ದರೆ ಆಕೆ ಅಥವಾ ಆತ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ನೀವು ಸರಿಯಾದ ಆಯ್ಕೆ ಮಾಡಬೇಕಾಗುತ್ತದೆ.

ಹಂತ 7: ನೀವು ರೀಫಂಡ್ ಪಡೆಯಲು ಬಯಸುವ ಅಥವಾ ಈ ಮೊದಲು ನೀವು ಬ್ಯಾಂಕ್ ಖಾತೆ ವಿವರಗಳನ್ನು ನೀಡದೇ ಇದ್ದಲ್ಲಿ ಬ್ಯಾಂಕ್ ಖಾತೆಗೆ ಸಂಬಂಧಿಸಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಬ್ಯಾಂಕ್ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡಬೇಕಾಗುತ್ತದೆ. ನೀವು ಈ ಮೊದಲು ಪೂರ್ವ ಮೌಲ್ಯಮಾಪನ ಮಾಡಿರದಿದ್ದರೆ ಪೂರ್ವ ಮೌಲ್ಯಮಾಪನ ಮಾಡಬೇಕು.

ಹಂತ 8: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ವರ್ಷ ನಿಮಗೆ ಬ್ಯಾಂಕ್‌ನ ಬಡ್ಡಿ, ಬಂಡವಾಳ ಲಾಭಗಳು ಮೊದಲಾದ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿಗಳು ನಿಮಗೆ ಪೂರ್ವ ಲಭ್ಯವಿರುತ್ತದೆ. ಆದಾಯ ತೆರಿಗೆ ಸಲ್ಲಿಸುವ ಮೊದಲು ಈ ವಿವರಗಳನ್ನು ಪರಿಶೀಲಿಸಿ. ನೀವು ರಿಟರ್ನ್ ಸಾರಾಂಶವನ್ನು ದೃಢೀಕರಿಸಬೇಕು ಹಾಗೂ ಮೌಲ್ಯೀಕರಿಸಬೇಕು.

ಹಂತ 9: ನೀವು ಐಟಿಆರ್ ಪರಿಶೀಲಿಸಬೇಕಾಗುತ್ತದೆ. ಐಟಿಆರ್ ಪರಿಶೀಲನೆ ಇಲ್ಲದೆಯೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಿಕೆ ಪೂರ್ತಿಯಾಗುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ಬೆಂಗಳೂರಿನಲ್ಲಿರುವ ಕಚೇರಿಗೆ ಮುದ್ರಿತ ಪ್ರತಿಯನ್ನು ಕಳುಹಿಸುವ ಮೂಲಕ ಮಾಡಬಹುದಾಗಿದೆ.
Published by:Latha CG
First published: