• Home
  • »
  • News
  • »
  • national-international
  • »
  • Congress President: ಕೈ ಅಧ್ಯಕ್ಷ ಗಾದಿಗೆ ಖರ್ಗೆ, ತರೂರ್ ಫೈಟ್! ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ

Congress President: ಕೈ ಅಧ್ಯಕ್ಷ ಗಾದಿಗೆ ಖರ್ಗೆ, ತರೂರ್ ಫೈಟ್! ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ

ಶಶಿ ತರೂರ್ v/s ಮಲ್ಲಿಕಾರ್ಜುನ್ ಖರ್ಗೆ

ಶಶಿ ತರೂರ್ v/s ಮಲ್ಲಿಕಾರ್ಜುನ್ ಖರ್ಗೆ

ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನದ ಚುನಾವಣಾ ಬಿಸಿ ಜೋರಾಗಿದೆ. ನಾಮಪತ್ರ (Nomination) ಸಲ್ಲಿಕೆಗೂ ಮುನ್ನವೇ ದಿಗ್ವಿಜಯ ಸಿಂಗ್ (Digvijay Singh) ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಜಾರ್ಖಂಡ್ ಮಾಜಿ ಸಚಿವ (former Jharkhand minister) ಕೆಎನ್ ತ್ರಿಪಾಠಿ (KN Tripathi) ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದೆ. ಇದರೊಂದಿಗೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ (Shashi Tharoor) ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ (Congress presidential election) ಬಿಸಿ ಜೋರಾಗಿದೆ. ರಾಜ್ಯಸಭಾ ವಿಪಕ್ಷ ನಾಯಕ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ನಾಮಪತ್ರ ಸಲ್ಲಿಸುತ್ತಿದ್ದಂತೆ ಚುನಾವಣೆ ಕಾವು ಪಡೆದುಕೊಂಡಿತ್ತು. ನಾಮಪತ್ರ (Nomination) ಸಲ್ಲಿಕೆಗೂ ಮುನ್ನವೇ ದಿಗ್ವಿಜಯ ಸಿಂಗ್ (Digvijay Singh) ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಜಾರ್ಖಂಡ್ ಮಾಜಿ ಸಚಿವ (former Jharkhand minister) ಕೆಎನ್ ತ್ರಿಪಾಠಿ (KN Tripathi) ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದೆ. ಇದರೊಂದಿಗೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ (Shashi Tharoor) ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಇನ್ನು ಪಕ್ಷದಲ್ಲಿ ಒಬ್ಬರಿಗೆ ಒಂದೇ ಜವಾಬ್ದಾರಿ ಎನ್ನುವ ತತ್ವದ ಹಿನ್ನೆಲೆಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕನ (Rajya Sabha Leader of Opposition) ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ರಾಜೀನಾಮೆ (Resign) ಸಲ್ಲಿಸಿದ್ದಾರೆ.


ಮಲ್ಲಿಕಾರ್ಜುನ್ ಖರ್ಗೆ ಶಶಿ ತರೂರ್ ನಡುವೆ ಸ್ಪರ್ಧೆ


ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಯ್ಕೆಯಾಗಿ ಕಣಕ್ಕಿಳಿದಿದ್ದಾರೆ. ಗಾಂಧಿ ಕುಟುಂಬದ ನಿಷ್ಠರಾಗಿರುವ ಮತ್ತೊಬ್ಬ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಕಣದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದಾರೆ. ಇದರಿಂದ ಖರ್ಗೆ ಅವರಿಗೆ ಎದುರಾಳಿಯಾಗಿ 'ಭಿನ್ನಮತೀಯ' ಜಿ-23 ಗುಂಪಿನ ಸದಸ್ಯರಾದ ಶಶಿ ತರೂರ್ ಮಾತ್ರ ಉಳಿಯಲಿದ್ದಾರೆ.


ತ್ರಿಪಾಠಿ ನಾಮಪತ್ರ ತಿರಸ್ಕೃತ


ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ಈ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ ನಾಮಪತ್ರ ಸ್ವೀಕೃತವಾಗಿದೆ. ಇನ್ನು ತ್ರಿಪಾಠಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.


ಇದನ್ನೂ ಓದಿ: Mallikarjun Kharge: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಖರ್ಗೆ ನಾಮಪತ್ರ, ಕನ್ನಡಿಗನ 'ಕೈ'ಗೆ ಸಿಗುತ್ತಾ ಅಧಿಕಾರ?


ಹೊಂದಿಕೆಯಾಗದ ಪ್ರತಿಪಾದಕರ ಸಹಿ


ನಾಮಪತ್ರ ಪರಿಶೀಲನೆ ಬಳಿಕ ಇಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರ, ಮೂವರು ಅಭ್ಯರ್ಥಿಗಳು ಒಟ್ಟು 20 ಫಾರ್ಮ್ ಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ನಾಲ್ಕು ತಿರಸ್ಕೃತವಾಗಿವೆ ಎಂದರು. ಖರ್ಗೆ ಅವರು 14 ಫಾರ್ಮ್ ಗಳನ್ನು ಸಲ್ಲಿಸಿದರೆ, ತರೂರ್ ಅವರು ಐದು ಮತ್ತು ತ್ರಿಪಾಠಿ ಅವರು ಕೇವಲ ಒಂದು ಫಾರ್ಮ್ ಸಲ್ಲಿಸಿದ್ದರು. ಅದು ಸಹ ತಿರಸ್ಕೃತವಾಗಿದೆ ಎಂದಿದ್ದಾರೆ. ತ್ರಿಪಾಠಿ ಅವರಿಗೆ ಪ್ರತಿಪಾದಕರಾಗಿ ಮಾಡಿದ್ದ ಒಬ್ಬರ ಸಹಿ ಹೊಂದಿಕೆಯಾಗದ ಕಾರಣ ಮತ್ತು ಇನ್ನೊಬ್ಬ ಪ್ರತಿಪಾದಕರ ಸಹಿ ಪುನರಾವರ್ತನೆಯಾದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಮಿಸ್ತ್ರಿ ತಿಳಿಸಿದ್ದಾರೆ.


“ಖರ್ಗೆ ಜೊತೆ ಯಾವುದೇ ವೈರತ್ವ ಇಲ್ಲ”


ಇನ್ನು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಯಾವುದೇ ವೈರತ್ವ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಖರ್ಗೆ ಅವರನ್ನು ಕಾಂಗ್ರೆಸ್‌ನ 'ಭೀಷ್ಮ ಪಿತಾಮಹ' ಎಂದು ಬಣ್ಣಿಸಿರುವ ತರೂರ್, "ನಾವು ಸಹೋದ್ಯೋಗಿಗಳೇ ವಿನಾ ಎದುರಾಳಿಗಳಲ್ಲ" ಎಂದಿದ್ದಾರೆ. ಆದರೆ ಖರ್ಗೆ ನಿರಂತರತೆಯ ಅಭ್ಯರ್ಥಿ ಎಂದಿರುವ ಅವರು, ಅಧ್ಯಕ್ಷರಾಗಿ ಆಯ್ಕೆಯಾದರೆ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಬದಲಿಸುವುದಾಗಿ ತರೂರ್ ಶಪಥ ಮಾಡಿದ್ದಾರೆ.


ಇದನ್ನೂ ಓದಿ: Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಕೈ ಜೋಡಿಸಿದ ಕಾರ್ಯಕರ್ತರು, ರಾಹುಲ್ ಜೊತೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್!


ರಾಜ್ಯಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ


ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್​ 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ನಿಯಮದಂತೆ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ನಿಯಮ ಇರುವಂತೆ ಇದೀಗ ರಾಜ್ಯಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ ನೀಡಿದ್ದಾರೆ.

Published by:Annappa Achari
First published: