ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡ ಮಹಿಳೆಯರು: ಮೊದಲ ಸಲ ಹೆಂಗಸರ ಜಗಳ ಕಂಡು ದಂಗಾದ ಪ್ರಾಣಿಗಳು..!

ಮನುಷ್ಯರಿಗೆ ಕ್ಯಾರೇ ಅನ್ನದ ಪ್ರಾಣಿಗಳ ಗಮನವನ್ನೂ ಸೆಳೆಯಬಲ್ಲ, ಕುತೂಹಲವನ್ನು ಕೆರಳಿಸಬಲ್ಲ, ಅವುಗಳನ್ನು ದಂಗಾಗಿಸಬಲ್ಲ ಘಟನೆ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದರೆ ಹೇಗಿರುತ್ತದೆ? ಹಾಗಾದರೆ ಹೇಗಿರುತ್ತದೆ ಎಂಬುದಕ್ಕೆ ಬೀಜಿಂಗ್‍ನಲ್ಲಿರುವ ಪ್ರಾಣಿ ಸಂಗ್ರಹಾಲಯವೊಂದು ಇತ್ತೀಚೆಗೆ ಸಾಕ್ಷಿಯಾಯಿತು! ಅಲ್ಲೊಂದು ಜಗಳ ನಡೆಯಿತು, ಅಂತಿಂತ ಜಗಳವಲ್ಲ . . . .ಹೆಂಗಸರ ಜಗಳ!

ಮೃಗಾಲಯದಲ್ಲಿ ಮನುಷ್ಯರ ಜಗಳ

ಮೃಗಾಲಯದಲ್ಲಿ ಮನುಷ್ಯರ ಜಗಳ

  • Share this:
ನಾಯಿಗಳು, ಬೆಕ್ಕುಗಳು ಕಚ್ಚಾಡುವುದನ್ನು ಸಾಮಾನ್ಯವಾಗಿ ನಾವೆಲ್ಲ ನೋಡಿರುತ್ತೇವೆ. ಸ್ವತಂತ್ರ ವಾಗಿ  ರಸ್ತೆಗಳ ಮೇಲೆ ಜೀವಿಸುವ ಪ್ರಾಣಿಗಳ ಕಥೆ ಇದಾದರೆ. ಇನ್ನೂ ಪ್ರಾಣಿ ಸಂಗ್ರಹಾಲಯದಲ್ಲಿ ಒಂಟಿಯಾಗಿ ಪಂಜರದೊಳಗಿರುವ ಪ್ರಾಣಿಗಳು ಕೊಂಚ ಶಾಂತವಾಗಿರುತ್ತವೆ. ಅಲ್ಲಿನ ಪಂಜರದೊಳಗೆ ಒಂದು ವೇಳೆ ಬೇರೆ ಪ್ರಾಣಿಗಳು ಜೊತೆಗಿದ್ದರೂ, ಜಗಳ ಮಾಡಿಕೊಂಡು ಆ ಸ್ವಾತಂತ್ರ್ಯಹೀನ ಬದುಕನ್ನು ಇನ್ನಷ್ಟು ನೀರಸ ಮಾಡಿಕೊಳ್ಳುವ ಗೋಜಿಗೆ ಅವು ಬಹುಶಃ ಹೋಗುವುದಿಲ್ಲ. ಮಂಗ, ಚಿಂಪಾಂಜಿಗಳನ್ನು ಹೊರತುಪಡಿಸಿ, ನಿತ್ಯವೂ ತಮ್ಮನ್ನು ನೋಡಲು ಬರುವ ಚಿತ್ರವಿಚಿತ್ರ ಮನುಷ್ಯರನ್ನು ನಿರ್ಲಕ್ಷ್ಯ ಮಾಡಿ , ತಮ್ಮಷ್ಟಕ್ಕೆ ತಾವಿರುವ ಪ್ರಾಣಿಗಳೇ ಅಲ್ಲಿ ಅಧಿಕ ಸಂಖ್ಯೆಯಲ್ಲಿರುತ್ತವೆ ಎಂದರೆ ತಪ್ಪಾಗಲಾರದು. ಮನುಷ್ಯರಿಗೆ ಕ್ಯಾರೇ ಅನ್ನದ ಪ್ರಾಣಿಗಳ ಗಮನವನ್ನೂ ಸೆಳೆಯಬಲ್ಲ, ಕುತೂಹಲವನ್ನು ಕೆರಳಿಸಬಲ್ಲ, ಅವುಗಳನ್ನು ದಂಗಾಗಿಸಬಲ್ಲ ಘಟನೆ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದರೆ ಹೇಗಿರುತ್ತದೆ? ಹಾಗಾದರೆ ಹೇಗಿರುತ್ತದೆ ಎಂಬುದಕ್ಕೆ ಬೀಜಿಂಗ್‍ನಲ್ಲಿರುವ ಪ್ರಾಣಿ ಸಂಗ್ರಹಾಲಯವೊಂದು ಇತ್ತೀಚೆಗೆ ಸಾಕ್ಷಿಯಾಯಿತು! ಅಲ್ಲೊಂದು ಜಗಳ ನಡೆಯಿತು ಅದು ಅಂತಿಂತ ಜಗಳವಲ್ಲ . . . .ಹೆಂಗಸರ ಜಗಳ!

ಆಗಸ್ಟ್ 7ರಂದು ಬೀಜಿಂಗ್ ಪ್ರಾಣಿ ಸಂಗ್ರಹಾಯದಲ್ಲಿ ಪ್ರವಾಸಿಗರ ಎರಡು ಗುಂಪಿನ ನಡುವೆ ದೊಡ್ಡ ಜಗಳ ನಡೆಯಿತು. ಮೃಗಾಲಯದಲ್ಲಿ ಮನುಷ್ಯರ ನಡುವೆ ನಡೆದ ಈ ಜಗಳದ ವಿಡಿಯೋವನ್ನು ಚೈನೀಸ್ ಆ್ಯಪ್ ವೀಬೋದಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಅದು ವೈರಲ್ ಆಗಿದೆ.

ವಿಡಿಯೋದಲ್ಲಿನ ದೃಶ್ಯ ಹೀಗಿದೆ:

ಮಗುವನ್ನು ಎತ್ತಿಕೊಂಡಿರುವ ಮಹಿಳೆಯೊಬ್ಬಳು, ನೆಲದ ಮೇಲೆ ಬಿದ್ದಿರುವ ಇನ್ನೊಬ್ಬ ಮಹಿಳೆಗೆ ಒದೆಯುತ್ತಾರೆ. ಅವರೂ ಅಲ್ಲಿಂದಲೇ ಮರಳಿ ಒದೆಯುತ್ತಾರೆ. ಆಗ ಮಗುವನ್ನು ಎತ್ತಿಕೊಂಡಿರುವ ಮಹಿಳೆ ನೆಲದ ಮೇಲೆ ಬಿದ್ದಿರುವ ಮಹಿಳೆಯ ಜುಟ್ಟನ್ನು ಹಿಡಿದು ಎಳೆಯ ತೊಡಗುತ್ತಾರೆ. ಸುತ್ತಮುತ್ತ ಇರುವ ಕೆಲವರು ಅವರ ಜಗಳ ಬಿಡಿಸಲು ನೋಡುತ್ತಾರೆ. ಅದೇ ಸಮಯಕ್ಕೆ ಅವರ ಹಿಂದಿರುವ ಗುಂಪೊಂದರಲ್ಲಿ ಬೇರೆ ಇಬ್ಬರು ಪುರುಷರು ನೆಲದ ಮೇಲೆ ಬಿದ್ದು ಜಗಳವಾಡತೊಡಗುತ್ತಾರೆ. ಅವರಲ್ಲೊಬ್ಬ ಸುಮ್ಮನೆ ಮಹಿಳೆಯರು ಇರುವ ಗುಂಪಿನ ಕಡೆ ನಡೆದುಕೊಂಡು ಹೋಗಿ, ಅವರಲ್ಲಿ ಒಬ್ಬರಿಗೆ ಜೋರಾಗಿ ಒದೆಯುತ್ತಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: Amrutha Ramamoorthy: ಅದ್ಧೂರಿಯಾಗಿ ನಡೆಯಿತು ನಟಿ ಅಮೃತಾರ ಸೀಮಂತ ಕಾರ್ಯಕ್ರಮ: ಇಲ್ಲಿವೆ ಫೋಟೋಗಳು..!

57 ಸೆಕೆಂಡ್‌ ಇರುವ ವಿಡಿಯೋ ಇದಾಗಿದೆ. ಈ ಜಗಳಕ್ಕೆ ನಿರ್ದಿಷ್ಟ ಕಾರಣ ಏನೆಂಬುವುದು ಈವರೆಗೆ ತಿಳಿದು ಬಂದಿಲ್ಲ. ಆದರೆ ಆರಂಭದಲ್ಲಿ ಕೇವಲ ಮಾತಿನ ಮೂಲಕವಷ್ಟೇ ನಡೆದ ಈ ಜಗಳ, ಆ ಬಳಿಕ ಒಬ್ಬರಿಗೊಬ್ಬರು ಹೊಡೆದಾಡುವ ಹಂತಕ್ಕೆ ತಲುಪಿತು. ಈ ಘಟನೆಯ ಕುರಿತಂತೆ ಬೀಜಿಂಗ್​ನ ಪ್ರಾಣಿ ಸಂಗ್ರಹಾಲಯವು ಕೂಡ ವೀಬೋದಲ್ಲಿ ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳು ಇಂತಹ ಜಗಳವನ್ನು ನೋಡಿದ್ದು ಇದೇ ಮೊದಲ ಸಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Nishvika: ತಮ್ಮ ಲೆಟೆಸ್ಟ್​ ಫೋಟೋಗಳ ಜತೆ ಪುಟ್ಟದಾದ ಕತೆ ಹೇಳಿದ ನಟಿ ನಿಶ್ವಿಕಾ..!

ಈ ಘಟನೆ ಪ್ರಾಣಿಗಳ ಮೇಲೆ ಎಷ್ಟು ಗಾಢವಾಗಿ ಪರಿಣಾಮ ಬೀರಿತೆಂದರೆ, ಘಟನೆ ನಡೆದ ಬಳಿಕ ಆ ದಿನ ಪ್ರಾಣಿಗಳು ಕೂಡ ಪರಸ್ಪರ ಜಗಳವಾಡ ತೊಡಗಿದವಂತೆ. ಅವುಗಳ ಜಗಳ ನಿಯಂತ್ರಣ ತಪ್ಪಿದ ಕಾರಣ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ಅವುಗಳ ಸಮೀಪಕ್ಕೆ ಹೋಗಿ ತಡೆಯಬೇಕಾಯಿತು. ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಪ್ರಾಣಿಗಳಿಗೆ ಕೂಡ “ ಜಗಳ ಮಾಡುವುದು ತುಂಬಾ ತಪ್ಪು” ಎಂಬುದನ್ನು ಹೇಳಿ ಕೊಡಬೇಕಾಯಿತು.
Published by:Anitha E
First published: