• Home
  • »
  • News
  • »
  • national-international
  • »
  • Vande Bharat Express: ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವೆಲ್ಲಾ ನಗರಗಳಲ್ಲಿ ಸಂಚರಿಸಲಿದೆ, ಇಲ್ಲಿದೆ ಸಂಪೂರ್ಣ ವಿವರ

Vande Bharat Express: ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವೆಲ್ಲಾ ನಗರಗಳಲ್ಲಿ ಸಂಚರಿಸಲಿದೆ, ಇಲ್ಲಿದೆ ಸಂಪೂರ್ಣ ವಿವರ

ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್

ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್

ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್‌, ಸೆಮಿ ಹೈಸ್ಪೀಡ್ ಟ್ರೈನ್ ಮುಂದಿನ ತಿಂಗಳು ನವೆಂಬರ್ ಹತ್ತರಿಂದ ಆರಂಭವಾಗಲಿದೆ. ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸಲಿದೆ. ಜಪಾನ್‌ನ ಬುಲೆಟ್ ಮಾದರಿಯ ಟ್ರೈನ್‌ಗೆ ವೇಗದ ವಿಷಯದಲ್ಲಿ ಈ ರೈಲು ಸ್ಪರ್ಧೆಯನ್ನು ನೀಡಲಿದೆ. ಸರಿಸುಮಾರು 483 ಕಿ.ಮೀ ದೂರವನ್ನು ರೈಲು ಕ್ರಮಿಸಲಿದೆ ಎಂದು ತಿಳಿಸಲಾಗಿದೆ.

ಮುಂದೆ ಓದಿ ...
  • Share this:

ಭಾರತೀಯ ರೈಲ್ವೇ ಸೇವೆಗೆ ವಿನೂತನ ಸಂಕಲ್ಪದ ಹಾದಿಯನ್ನುಂಟು ಮಾಡಿರುವ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express), ಸೆಮಿ ಹೈಸ್ಪೀಡ್ ಟ್ರೈನ್ ಮುಂದಿನ ತಿಂಗಳು ನವೆಂಬರ್ ಹತ್ತರಿಂದ ಆರಂಭವಾಗಲಿದೆ. ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸಲಿದೆ. ಜಪಾನ್‌ನ (Japan) ಬುಲೆಟ್ ಮಾದರಿಯ ಟ್ರೈನ್‌ಗೆ (Train) ವೇಗದ ವಿಷಯದಲ್ಲಿ ಈ ರೈಲು ಸ್ಪರ್ಧೆಯನ್ನು ನೀಡಲಿದೆ. ಸರಿಸುಮಾರು 483 ಕಿ.ಮೀ ದೂರವನ್ನು ರೈಲು ಕ್ರಮಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಹಿಮಾಚಲ ಪ್ರದೇಶ (Himachal Pradesh) ಮತ್ತು ಹರಿಯಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ಜೈರಾಮ್ ಠಾಕೂರ್ ಮತ್ತು ಮನೋಹರ್ ಲಾಲ್ ಖಟ್ಟರ್ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣದ ಆನಂದವನ್ನು ಸವಿದರು.


ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ
ಮುಂದಿನ ವಾರದಿಂದ ರೈಲು ದೆಹಲಿ ಮತ್ತು ಚಂಡೀಗಢ ನಡುವಿನ ಸುಮಾರು ಮೂರು ಗಂಟೆಗಳ ಪ್ರಯಾಣಕ್ಕೆ ಸಿದ್ಧವಾಗಿದೆ. ಇದರಿಂದ ಊನಾದಿಂದ ನವದೆಹಲಿಗೆ ಪಯಣಿಸುವ ಸಮಯವು ಎರಡು ಗಂಟೆಗಳಷ್ಟು ಕಡಿಮೆಯಾಗಲಿದೆ ಎಂದು ಸರಕಾರ ತಿಳಿಸಿದೆ.


ಉದ್ಘಾಟನೆಯ ನಂತರ, ಹಿಮಾಚಲ ಪ್ರದೇಶದಲ್ಲಿ ಮೋದಿ ವಿವಿಧ ಯೋಜನೆಗಳನ್ನು ಘೋಷಿಸಿದರು ಮತ್ತು ಸಮೀಪಿಸುತ್ತಿರುವ ಹಬ್ಬದ ಋತುವಿನ ಮೊದಲು ಹಲವಾರು ಸಾವಿರ ಕೋಟಿ ಮೌಲ್ಯದ ಉಡುಗೊರೆಗಳನ್ನು ಘೋಷಿಸಲು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.


ಆರಾಮದಾಯಕ ಮತ್ತು ವೇಗವಾದ ಪ್ರಯಾಣ
ಅಂಬ್ ಅಂಡೌರಾ ಮತ್ತು ನವದೆಹಲಿ ನಡುವೆ ಚಲಿಸುವ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ, ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾದಲ್ಲಿ ನಿಲುಗಡೆ ಇರುತ್ತದೆ. ಆರಾಮದಾಯಕ ಮತ್ತು ವೇಗವಾದ ಪ್ರಯಾಣದ ವಿಧಾನವನ್ನು ಒದಗಿಸುವ ಈ ರೈಲು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ:  Kedarnath Helicopter Crash: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ, ಪೈಲಟ್ ಸೇರಿ 7 ಸಾವು: ಹವಾಮಾನ ವೈಪರೀತ್ಯ ಅಪಘಾತ!


ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗುರುವಾರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಚಂಡೀಗಢದಿಂದ ಅಂಬಾಲಾಗೆ ಪ್ರಯಾಣಿಸಿದ್ದು, ಉದ್ಯೋಗಕ್ಕೆ ಹೋಗುವ ಪಂಜಾಬ್ ಮತ್ತು ಹರಿಯಾಣದ ಜನರಿಗೆ ರೈಲು ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.


ವಂದೇ ಭಾರತ್ 2.0: ಹೆಚ್ಚಿನ ಪ್ರಗತಿ ಮತ್ತು ಸುಧಾರಿತ ವೈಶಿಷ್ಟ್ಯ
ವಂದೇ ಭಾರತ್ 2.0 ಕೇವಲ 52 ಸೆಕೆಂಡ್‌ಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಗರಿಷ್ಠ ವೇಗವನ್ನು ತಲುಪುವಂತಹ ಹೆಚ್ಚಿನ ಪ್ರಗತಿಗಳು ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾರಣೆಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದಿನ ಆವೃತ್ತಿಯ 430 ಟನ್‌ಗಳಿಗೆ ಹೋಲಿಸಿದರೆ 392 ಟನ್ ತೂಕವಿದೆ. ಇದು ಬೇಡಿಕೆಯ ಮೇರೆಗೆ ವೈ-ಫೈ ಸೌಲಭ್ಯವನ್ನು ಅನ್ನು ಸಹ ಹೊಂದಿರುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.


ರೈಲು, ವಿಮಾನದಲ್ಲಿ ಪ್ರಯಾಣಿಸುವ ಅನುಭವವನ್ನುಂಟು ಮಾಡಲಿದ್ದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಸ್ಪರ ರೈಲುಗಳು ಡಿಕ್ಕಿಯಾದಾಗ ತಪ್ಪಿಸುವ ವ್ಯವಸ್ಥೆ - ಕವಾಚ್ ಒಳಗೊಂಡಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮೂರನೇ ವಂದೇ ಭಾರತ್ ರೈಲನ್ನು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ಪ್ರಾರಂಭಿಸಿದರು.


ದೋಷಗಳನ್ನು ವರದಿ ಮಾಡಿರುವ ಹೈಸ್ಪೀಡ್ ರೈಲು
ಹೈಸ್ಪೀಡ್ ರೈಲು ಕೂಡ ಕೆಲವೊಂದು ದೋಷಗಳನ್ನು ವರದಿ ಮಾಡಿದ್ದು ಕಳೆದ ವಾರ ನವದೆಹಲಿ-ವಾರಣಾಸಿ ಸೆಮಿ ಹೈಸ್ಪೀಡು ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ಪ್ರಯಾಣಿಕರು ಪ್ರಯಾಣದಲ್ಲಿ ವಿಳಂಬವನ್ನೆದುರಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಂಡುಬಂದ ಮೂರನೇ ಸಮಸ್ಯೆ ಇದಾಗಿದೆ.


ಇದನ್ನೂ ಓದಿ:  Indian Economy: ಪ್ರಧಾನಿ ಮೋದಿಯವರು ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ: ಶ್ಲಾಘಿಸಿದ ಬ್ರಿಟನ್ ನಾಯಕ


ಈ ಹಿಂದೆ ಗುಜರಾತ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಚಾಲನೆ ಆರಂಭಿಸಿದ ಮರುದಿನ ಮೂರು ಎಮ್ಮೆ ಮತ್ತು ಹಸುವಿಗೆ ಡಿಕ್ಕಿ ಹೊಡೆದಿತ್ತು.

Published by:Ashwini Prabhu
First published: