Fodder Scam Case: ಮೇವು ಹಗರಣ ಐದನೇ ಪ್ರಕರಣ; ಲಾಲೂ ಪ್ರಸಾದ್ ಯಾದವ್​ ದೋಷಿ

ಜಾರ್ಖಂಡ್‌ನ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ ಹಣವನ್ನು ಅವರು ಅಕ್ರಮ ಹಿಂಪಡೆದ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ.

ಲಾಲು ಪ್ರಸಾದ್​ ಯಾದವ್​

ಲಾಲು ಪ್ರಸಾದ್​ ಯಾದವ್​

  • Share this:
    ಬಹುಕೋಟಿ ಮೇವು ಹಗರಣಕ್ಕೆ (Fodder Scam Case) ಸಂಬಂಧಿಸಿದ ಐದನೇ ಪ್ರಕರಣದಲ್ಲಿ ಆರ್​​​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav)​ ಅವರನ್ನು ದೋಷಿ (Convicted) ಎಂದು ರಾಂಚಿಯ ವಿಶೇಷ ಕೇಂದ್ರೀಯ ತನಿಖಾ ದಳ ತೀರ್ಪು ನೀಡಿದೆ. ಜಾರ್ಖಂಡ್‌ನ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ ಹಣವನ್ನು ಅವರು ಅಕ್ರಮ ಹಿಂಪಡೆದ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ. ಇನ್ನು ಈ ಪ್ರಕರಣದಲ್ಲಿ ನ್ಯಾಯಾಧೀಶ ಸಿಕೆ ಶಶಿ ಅವರು ಇಂದು ತೀರ್ಪು ಪ್ರಕಟಿಸಿದ್ದು, ಈ ವೇಳೆ ಆರ್​ಜೆಡಿ ಮುಖ್ಯಸ್ಥರು ನ್ಯಾಯಾಲಯದಲ್ಲಿ ಹಾಜರಿದ್ದರು.

    ಈಗಾಗಲೇ ಮೇವು ಹಗರಣದಲ್ಲಿ ದೋಷಿ ಆಗಿರುವ ಲಾಲೂ
    ಈಗಾಗಲೇ 950 ಕೋಟಿ ಮೇವು ಹಗರಣದಲ್ಲಿ ಈಗಾಗಲೇ ಲಾಲೂ ಪ್ರಸಾದ್ ಯಾದವ್​ ದೋಷಿ ಆಗಿದ್ದಾರೆ. ಈ ಪ್ರಕರಣದಲ್ಲಿ ಚೈಬಾಸಾ ಖಜಾನೆಯಿಂದ 37.7 ಕೋಟಿ ರೂ ಮತ್ತು 33.13 ಕೋಟಿ ರೂ ದಿಯೋಘರ್ ಖಜಾನೆಯಿಂದ 89.27 ಕೋಟಿ ರೂ ಮತ್ತು ದುಮ್ಕಾ ಖಜಾನೆ 3.76 ಕೋಟಿ ರೂ ಅನ್ನು ಅವರು ಅಕ್ರಮವಾಗಿ ಪಡೆದಿದ್ದಾರೆ. ಜಾನುವಾರುಗಳ ಮೇವುಗಾಗಿ ಮೀಸಲಾದ ಸರ್ಕಾರದ ಹಣವನ್ನು ಲಪಟಾಯಿಸಿದ ನಾಲ್ಕು ಪ್ರಕರಣದಲ್ಲಿ ಅವರು ದೋಷಿ ಎಂದು ಪರಿಗಣಿಸಲಾಗಿದ್ದು, ಅವರು 13 .5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಹೆಚ್ಚುವರಿ 7 ವರ್ಷ ಜೈಲು ಶಿಕ್ಷೆ ಆಗಿದ್ದು, ನಾಲ್ಕು ಪ್ರಕರಣದಲ್ಲಿ ಒಟ್ಟು 20.5 ವರ್ಷ ಸೆರೆವಾಸ ಅನುಭವಿಸಬೇಕಿದೆ.

    ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ
    1991 ಮತ್ತು 1996 ರ ನಡುವೆ ಲಾಲು ಯಾದವ್ ಮುಖ್ಯ ಮಂತ್ರಿಯಾಗಿದ್ದಾಗ ಬಿಹಾರದ ಪಶುಸಂಗೋಪನೆ ಇಲಾಖೆಯಿಂದ ಹಣವನ್ನು ತೆಗೆದುಕೊಂಡಿದೆ. ಶಿಕ್ಷೆಯ ಭಾಗವಾಗಿ ಅವರು ಈಗಾಗಲೇ 3.5 ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ. ಅಲ್ಲದೇ, ಲಾಲು ಯಾದವ್ ಅವರು ಹಿಂದಿನ ಎಲ್ಲಾ ನಾಲ್ಕು ಅಪರಾಧಗಳನ್ನು ಪ್ರಶ್ನಿಸಿದ್ದಾರೆ.
    ಪ್ರಕರಣ ಸಂಬಂಧ 98 ಜನರು ಹಾಜರಾಗಿದ್ದರು, ಅವರಲ್ಲಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಉಳಿದವರಲ್ಲಿ ಮಾಜಿ ಸಂಸದ ಜಗದೀಶ್ ಶರ್ಮಾ ಮತ್ತು ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್ ಸೇರಿದಂತೆ 35 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಇದನ್ನು ಓದಿ: ತಮ್ಮ ತಾಯಿಯನ್ನು ಭೇಟಿಮಾಡಿದ್ದ Sushma Swaraj​; 25 ವರ್ಷದ ಹಿಂದಿನ ನೆನಪು ಮೆಲುಕು ಹಾಕಿದ PM Modi

    ಲಾಲು ಯಾದವ್ ಮತ್ತು ಇತರ 39 ಅಪರಾಧಿಗಳ ಶಿಕ್ಷೆ ಫೆಬ್ರವರಿ 21 ರಂದು ಪ್ರಕಟವಾಗಲಿದೆ.

    ಲಾಲೂ ಜಾಮೀನಿಗೆ ನಿರಾಕರಣೆ
    ಲಾಲೂ ಪ್ರಸಾದ್​ ಯಾದವ್ ಮೂರು ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಈ ನಡುವೆ ಚೈಬಾಸಾ ಖಜಾನೆ ಪ್ರಕರಣದಲ್ಲಿ 2017ರ ಡಿಸೆಂಬರ್ 2017 ರಿಂದ ಶಿಕ್ಷೆ ಅನುಭವಿಸುತ್ತಿದ್ದು, ಅವರ ಬಹುತೇಕ ಶಿಕ್ಷೆಯನ್ನು ಜಾರ್ಖಂಡ್‌ನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅನುಭವಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಕರೆತರಲಾಗಿತ್ತು. ತಮ್ಮ ಶಿಕ್ಷೆಯನ್ನು ಅರ್ಧ ಪೂರೈಸಿದ್ದು, ತಮಗೆ ಜಾಮೀನು ನೀಡಬೇಕು ಎಂಬ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

    ಇದನ್ನು ಓದಿ: Zooನಲ್ಲಿನ ಅಳಿಲು ಕೋತಿಯನ್ನೇ ಕಿಡ್ನಾಪ್​ ಮಾಡಿದ ನೌಕರರು; ಕಾರಣ ಇದು!

    ಪಕ್ಷದಲ್ಲಿ ಲಾಲೂ ಮಗನ ಅಧಿಪತ್ಯ

    ಲಾಲು ಪ್ರಸಾದ್​ ಅನುಪಸ್ಥಿತಿಯಲ್ಲಿ ಕಳೆದ ವರ್ಷ 2020ರಲ್ಲಿ ಅವರ ಮಗ ತೇಜಸ್ವಿ ಯಾದವ್ ಬಿಹಾರ ಚುನಾವಣೆಯಲ್ಲಿ ಆರ್​​​​​ಜೆಡಿಯನ್ನು ಮುನ್ನಡೆಸಿದರು ವಿಧಾನಸಭಾ ಚುನಾವಣೆಯಲ್ಲಿ ಆರಜೆಡಿ ಪಕ್ಷದ ಪ್ರಬಲ ಪ್ರದರ್ಶನ ನೀಡಿತು. ಲಾಲು ಯಾದವ್​ ಅಗೈರಿನಲ್ಲೂ ತೇಜಸ್ವಿ ಪಕ್ಷವನ್ನು ಪ್ರಬಲವಾಗಿ ಮುನ್ನಡೆಸಿದರು. ಪರಿಣಾಮ ಪಕ್ಷ ವಿಪಕ್ಷ ಸ್ಥಾನ ಪಡೆಯಿತು.

    ಪಕ್ಷದಲ್ಲಿ ತೇಜಸ್ವಿಯಾದವ್​ ಪ್ರಬಲವಾಗಿರುವ ಹಿನ್ನಲೆ ಲಾಲು ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಪಕ್ಷದ ಅಧಿಕಾರವನ್ನು ತಮ್ಮ ಪುತ್ರ ತೇಜಸ್ವಿ ಯಾದವ್‌ಗೆ ಹಸ್ತಾಂತರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಈ ವರದಿಗಳನ್ನು ಖುದ್ದು ಲಾಲೂ ಪ್ರಸಾದ್​ ಯಾದವ್​ ತಳ್ಳಿ ಹಾಕಿದರು.
    Published by:Seema R
    First published: