• Home
 • »
 • News
 • »
 • national-international
 • »
 • FIFA World Cup 2022: ಕ್ರೀಡಾಂಗಣದಲ್ಲಿ ಇಲ್ಲ ಬಿಯರ್ ಮಾರಾಟ! ಕತಾರ್ ಸರ್ಕಾರದ ಈ ನಿರ್ಧಾರ ಯಾಕೆ ಗೊತ್ತಾ?

FIFA World Cup 2022: ಕ್ರೀಡಾಂಗಣದಲ್ಲಿ ಇಲ್ಲ ಬಿಯರ್ ಮಾರಾಟ! ಕತಾರ್ ಸರ್ಕಾರದ ಈ ನಿರ್ಧಾರ ಯಾಕೆ ಗೊತ್ತಾ?

ಫಿಫಾ ಕ್ರೀಡಾಂಗಣದಲ್ಲಿ ಬಡ್ವೈಸರ್ ಮಾರಾಟಕ್ಕಿಲ್ಲ ತೊಂದರೆ!

ಫಿಫಾ ಕ್ರೀಡಾಂಗಣದಲ್ಲಿ ಬಡ್ವೈಸರ್ ಮಾರಾಟಕ್ಕಿಲ್ಲ ತೊಂದರೆ!

ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರವಾದ ಕತಾರ್‌ನಲ್ಲಿ ಮದ್ಯದ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ, ಆದರೆ ಸಂಘಟಕರು ಇದು ಪಂದ್ಯದ ಸ್ಥಳಗಳಲ್ಲಿ ಮತ್ತು ಅಭಿಮಾನಿ ವಲಯಗಳಲ್ಲಿ ಸಮಂಜಸವಾದ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಭರವಸೆ ನೀಡಿದೆ.

 • Share this:

  ಫಿಫಾ ವರ್ಡ್‌ ಕಪ್-2022, ಕತಾರ್: ಫಿಫಾ ವಿಶ್ವಕಪ್ ಸ್ಟೇಡಿಯಮ್‌ನಲ್ಲಿ (FIFA World Cup Stadium) ಕತಾರ್ ಸರ್ಕಾರ (Qatar Government) ಬಿಯರ್ ಮಾರಾಟವನ್ನು ನಿಷೇಧಿಸಿದ್ದು (Beer Ban), ಸಾಕರ್ ಪಂದ್ಯಾವಳಿಯನ್ನು ಸುರಕ್ಷಿತಗೊಳಿಸಲು ಮಾಡಿದ ಒಪ್ಪಂದದ ಮೇಲೆ ಆರಂಭಿಕ ಪಂದ್ಯಕ್ಕೆ ಕೇವಲ ಎರಡು ದಿನಗಳ ಮೊದಲೇ ವಿಶ್ವಕಪ್ ಸಂಘಟಕರು ತರಾತುರಿಯ ನಿರ್ಣಯ ಕೈಗೊಂಡಿದ್ದಾರೆ. ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಾದ್ಯಂತ (Middle East and South Asia) ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಭಾಗವಹಿಸುತ್ತಿದ್ದು, ಕ್ರೀಡಾಂಗಣಗಳ ಪರಿಧಿಯ ಒಳಗೆ ಅಥವಾ ಕ್ರೀಡಾಂಗಣದ ಸುತ್ತಲೂ ಮಾರಾಟ ಮಾಡಲಾಗುವುದಿಲ್ಲ ಎಂಬ ಸುದ್ದಿಯನ್ನು ಫಿಫಾ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.


  ಕ್ರೀಡಾಂಗಣದಲ್ಲಿ ಮದ್ಯಮಾರಾಟ ನಿಷೇಧಿಸಿದ ಕತಾರ್


  ಆತಿಥೇಯ ದೇಶದ ಅಧಿಕಾರಿಗಳು ಮತ್ತು ಫಿಫಾ ನಡುವಿನ ಚರ್ಚೆಯ ನಂತರ, ಫಿಫಾ ಫ್ಯಾನ್ ಫೆಸ್ಟಿವಲ್, ಇತರ ಅಭಿಮಾನಿ ಸ್ಥಳಗಳು ಮತ್ತು ಪರವಾನಗಿ ಪಡೆದ ಸ್ಥಳಗಳಲ್ಲಿ ಆಲ್ಕೊಹಾಲ್ಯುಕ್ತ ಪಾನೀಯಗಳ ಮಾರಾಟವನ್ನು ಕೇಂದ್ರೀಕರಿಸಲು ನಿರ್ಧರಿಸಲಾಗಿದೆ, ಕತಾರ್‌ನ ವಿಶ್ವಕಪ್ 2022 ಕ್ರೀಡಾಂಗಣದ ಪರಿಧಿಯಿಂದ ಬಿಯರ್‌ನ ಮಾರಾಟವನ್ನು ತೆಗೆದುಹಾಕಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ. ಕತಾರ್‌ನ ಎಲ್ಲಾ ವಿಶ್ವಕಪ್ ಸ್ಟೇಡಿಯಂಗಳಲ್ಲಿ ಲಭ್ಯವಿರುವ ಬಡ್ವೈಸರ್ ಮಾರಾಟದ ಮೇಲೆ ಈ ನಿಷೇಧ ಪರಿಣಾಮ ಬೀರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಅದಾಗ್ಯೂ ಬಡ್ವೈಸರ್ ಕಾನೂನು ಕ್ರಮ ಕೈಗೊಳ್ಳಬಹುದು ಎಂಬ ಭೀತಿಯನ್ನು ಫಿಫಾ ಹೊಂದಿದೆ.


  ಬಡ್ವೈಸರ್‌ ಮಾರಾಟದ ಮೇಲೆ ಪರಿಣಾಮವಿಲ್ಲ


  ಈ ಕುರಿತಾಗಿ ಪ್ರಕಟಣೆಯೊಂದನ್ನು ಆಯೋಜಕರು ಬಿಡುಗಡೆ ಮಾಡಿದ್ದು, ಅತಿಥೇಯ ದೇಶದ ಅಧಿಕಾರಿಗಳು ಮತ್ತು ಫಿಫಾ ಕ್ರೀಡಾಂಗಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಎಲ್ಲಾ ಅಭಿಮಾನಿಗಳಿಗೆ ಆನಂದದಾಯಕ, ಗೌರವಾನ್ವಿತ ಮತ್ತು ಆಹ್ಲಾದಕರ ಅನುಭವವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರಿಸುತ್ತದೆ. AB InBev ನ ಬಡ್ವೈಸರ್ ಪೂರೈಸುವುದನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದೆ.


  ಇದನ್ನೂ ಓದಿ: Google Doodle: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್


  ಬಿಯರ್ ಕಂಪನಿಯಿಂದ ಆತಂಕ


  ಆದಾಗ್ಯೂ ಫಿಫಾ ದೊಂದಿಗೆ $75m (£63m) ಪ್ರಾಯೋಜಕತ್ವದ ಒಪ್ಪಂದವನ್ನು ಹೊಂದಿರುವ ಬಡ್ವೈಸರ್ ಈ ತೀರ್ಮಾನವನ್ನು ಒಪ್ಪಂದದ ಪ್ರಮುಖ ಉಲ್ಲಂಘನೆಯಾಗಿ ಪರಿಗಣಿಸುವ ಸಾಧ್ಯತೆ ಇರುವುದರಿಂದ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿ ಫುಟ್‌ಬಾಲ್‌ನ ಆಡಳಿತ ಮಂಡಳಿಯು ಆತಂಕವನ್ನೆದುರಿಸುತ್ತಿದೆ. ಬಿಯರ್ ಮಾರಾಟದ ಸುದ್ದಿ ಅಧಿಕೃತವಾಗುವ ಕೆಲವೇ ಕ್ಷಣಗಳ ಮುನ್ನ ಯುಎಸ್ ಬಿಯರ್ ಬ್ರ್ಯಾಂಡ್ ಇದು ವಿಚಿತ್ರ ನಿರ್ಧಾರವಾಗಿದೆ ಎಂದು ಟ್ವೀಟ್ ಮಾಡಿದ್ದು ನಂತರ ಅದನ್ನು ಅಳಿಸಿಹಾಕಿದೆ.


  ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರವಾದ ಕತಾರ್‌ನಲ್ಲಿ ಮದ್ಯದ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ, ಆದರೆ ಸಂಘಟಕರು ಇದು ಪಂದ್ಯದ ಸ್ಥಳಗಳಲ್ಲಿ ಮತ್ತು ಅಭಿಮಾನಿ ವಲಯಗಳಲ್ಲಿ ಸಮಂಜಸವಾದ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಭರವಸೆ ನೀಡಿದ್ದರು. ಅದಾಗ್ಯೂ ಆತಿಥ್ಯ ಪೆಟ್ಟಿಗೆಗಳಲ್ಲಿ ಮಾತ್ರ ಆಲ್ಕೋಹಾಲ್ ಲಭ್ಯವಿರುತ್ತದೆ ಎಂದು ನಿರ್ಧರಿಸಲಾಗಿದೆ.


  ನಿಯೋಜಿಸಲಾದ ಪಾರ್ಟಿ ಪ್ರದೇಶದಲ್ಲಿ ಬಿಯರ್ ಲಭ್ಯವಿರುತ್ತದೆ


  ಫಿಪಾ ತಿಳಿಸಿರುವಂತೆ ಎಂಟು ಸ್ಟೇಡಿಯಮ್‌ಗಳಲ್ಲಿ ಆಲ್ಕೋಹಾಲಿಕ್ ಅಲ್ಲದ ಬಿಯರ್ ಮಾರಾಟವಿರುತ್ತದೆ, ಶಾಂಪೈನ್, ವೈನ್, ವಿಸ್ಕಿ ಹಾಗೂ ಇತರ ಆಲ್ಕೋಹಾಲ್‌ಗಳನ್ನು ವೈಭವೋಪೇತ ಸ್ಥಳಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ. ಆದರೆ ಹೆಚ್ಚಿನ ಟಿಕೆಟ್ ಹೊಂದಿರುವ ಫುಟ್ಬಾಲ್ ಅಭಿಮಾನಿಗಳಿಗೆ ಈ ಸ್ಥಳಗಳಿಗೆ ಪ್ರವೇಶವಿಲ್ಲ ಆದರೆ ಫಿಪಾ ಫ್ಯಾನ್ ಫೆಸ್ಟಿವಲ್ ಎಂದು ಸಂಜೆ ಆಯೋಜನೆಗೊಳ್ಳುವ ನಿಯೋಜಿತ ಪಾರ್ಟಿಯಲ್ಲಿ ಆಲ್ಕೋಹಾಲ್ ಮಿಶ್ರಿತ ಪೇಯಗಳನ್ನು ಸವಿಯಬಹುದಾಗಿದೆ.


  ಹೋಟೆಲ್‌ಗಳಲ್ಲಿ ಮಾರಾಟಕ್ಕೆ ತೊಂದರೆಯಿಲ್ಲ


  ಆಲ್ಕೋಹಾಲ್ ಸೇವನೆ ಹಾಗೂ ಮಾರಾಟದ ಮೇಲೆ ಕತಾರ್ ನಿರ್ಬಂಧಗಳನ್ನು ಹೇರಿದ್ದರೂ ಹೋಟೆಲ್ ಬಾರ್‌ಗಳಲ್ಲಿ ಹಲವಾರು ವರ್ಷಗಳಿಂದ ಮಾರಾಟ ಹಾಗೂ ಸೇವನೆಗೆ ಅನುಮತಿಸಿದೆ. ಬಡ್ವೈಸರ್ ಪೋಷಕ ಕಂಪನಿಯಾದ Ab ಇನ್ಬ್ಯೂ ಹೇಳಿಕೆಯನ್ನು ಅಂಗೀಕರಿಸಿದ್ದು, ಅದರ ಕೆಲವೊಂದು ಯೋಜನೆಗಳನ್ನು ಮುಂದಕ್ಕೆ ಕಾರ್ಯಗತಗೊಳಿಸಲಾಗುವುದಿಲ್ಲ ಏಕೆಂದರೆ ನಮ್ಮ ನಿಯಂತ್ರಣದಲ್ಲಿಲ್ಲ ಎಂದು ತಿಳಿಸಿದೆ. ಬಡ್ವೈಸರ್ ತನ್ನ ಪಾಲುದಾರಿಕೆಯನ್ನು ಫಿಪಾದೊಂದಿಗೆ 1986 ರಿಂದ ನಡೆಸಿಕೊಂಡು ಬರುತ್ತಿದೆ.


  ಇದನ್ನೂ ಓದಿ: FIFA World Cup 2022: ಕತಾರ್‌ಗೆ 2000 ಪೌಂಡ್‌ ಮಾಂಸ ಕಳುಹಿಸಿದ ಉರುಗ್ವೆ, ಅರ್ಜೆಂಟೀನಾ ತಂಡದ ಅಧಿಕಾರಿಗಳು


  ಯುರೋಪ್‌ನ ಫುಟ್ಬಾಲ್ ಫ್ಯಾನ್ ಗ್ರೂಪ್ ನಿರ್ದೇಶಕರಾದ ರೋನನ್ ಇವಾನ್ ತಿಳಿಸಿರುವಂತೆ ಸ್ಟೇಡಿಯಮ್‌ಗಳಲ್ಲಿ ಬಿಯರ್‌ಗಳ ನಿಷೇಧವು ನಿಜಕ್ಕೂ ಚಿಂತೆಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

  Published by:Annappa Achari
  First published: