• Home
  • »
  • News
  • »
  • national-international
  • »
  • FIFA World Cup-2022: ಫುಟ್ಬಾಲ್‌ ಸ್ಟಾರ್ಸ್ ಬಗ್ಗೆ ಅಭಿಮಾನ ಬೇಡ! ಅದು ಇಸ್ಲಾಂಗೆ ವಿರುದ್ಧ ಎಂದ ಮುಸ್ಲಿಂ ಸಂಘಟನೆ!

FIFA World Cup-2022: ಫುಟ್ಬಾಲ್‌ ಸ್ಟಾರ್ಸ್ ಬಗ್ಗೆ ಅಭಿಮಾನ ಬೇಡ! ಅದು ಇಸ್ಲಾಂಗೆ ವಿರುದ್ಧ ಎಂದ ಮುಸ್ಲಿಂ ಸಂಘಟನೆ!

ಕೇರಳದಲ್ಲಿ ಹಾಕಲಾಗಿರುವ ಫಿಫಾ ಫುಬ್ಬಾಲ್ ತಾರೆಯರ ಕಟೌಟ್

ಕೇರಳದಲ್ಲಿ ಹಾಕಲಾಗಿರುವ ಫಿಫಾ ಫುಬ್ಬಾಲ್ ತಾರೆಯರ ಕಟೌಟ್

ಫುಟ್ಬಾಲ್ ತಾರೆಯರನ್ನು ಆರಾಧಿಸುವುದಕ್ಕೆ ಕೇರಳದ ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಫುಟ್ಬಾಲ್ ತಾರೆಯರ ಆರಾಧನೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಅಲ್ಲದೇ ಇದು ಆರಾಧನೆಯಲ್ಲ, ಹುಚ್ಚು ಅಂತ ಮುಸ್ಲಿಂ ಫುಟ್ಬಾಲ್ ಪ್ರೇಮಿಗಳನ್ನು ಟೀಕಿಸಿದೆ!

  • News18 Kannada
  • Last Updated :
  • Kerala, India
  • Share this:

ಫಿಫಾ ವಿಶ್ವಕಪ್ 2022, ಕತಾರ್: ಕಟ್ಟಾ ಮುಸ್ಲಿಂ ರಾಷ್ಟ್ರವಾದ (Muslim country) ಕತಾರ್‌ನಲ್ಲಿ (Qatar) ಫುಟ್ಬಾಲ್‌ನ ವಿಶ್ವ ಹಬ್ಬ (world festival of football) ಫಿಫಾ ವಿಶ್ವಕಪ್ 2022 (FIFA World Cup 2022) ನಡೆಯುತ್ತಿದೆ. ಜಗತ್ತಿನ ಶ್ರೇಷ್ಠ ಫುಟ್ಬಾಲ್ ತಂಡಗಳ (football team), ಅತೀ ಶ್ರೇಷ್ಠ ಆಟಗಾರರು (Players) ಈ ಪ್ರತಿಷ್ಠಿತ ವಿಶ್ವಕಪ್ ತಮ್ಮದಾಗಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ. ಈ ಸ್ಟಾರ್ ಆಟಗಾರರಿಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳು (Fans) ಇದ್ದಾರೆ. ನಮ್ಮ ನೆಚ್ಚಿನ ತಂಡವೇ ವಿಶ್ವಕಪ್ ಗೆಲ್ಲಲಿ ಅಂತ ಫುಟ್ಬಾಲ್ ಅಭಿಮಾನಿಗಳು ಪ್ರಾರ್ಥಿಸ್ತಿದ್ದಾರೆ. ಆದರೆ ಕೇರಳದ ಮುಸ್ಲಿಂ ಸಂಘಟನೆಗಳು (Kerala Muslim organizations) ಫಿಫಾ ವರ್ಲ್ಡ್‌ ಕಪ್ 2022ರ ವಿರುದ್ಧ ಕೆರಳಿ ಕೆಂಡವಾಗಿದೆ. “ಫುಟ್ಬಾಲ್ ತಾರೆಯರ (Football Stars) ಆರಾಧನೆ ಮಾಡುವುದು ಇಸ್ಲಾಂ (Islam) ಧರ್ಮಕ್ಕೆ ವಿರುದ್ಧವಾಗಿದೆ” ಅಂತ ಮುಸ್ಲಿ ಸಂಘಟನೆಗಳು ಹೇಳಿವೆ.


ಕೇರಳದಲ್ಲಿ ರಾರಾಜಿಸುತ್ತಿದೆ ಫುಟ್ಬಾಲ್ ತಾರೆಯರ ಕಟೌಟ್


ಕತಾರ್‌ನಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದರೆ, ಭಾರತದಲ್ಲೂ ಅದರ ಜ್ವರ ಅಧಿಕವಾಗಿದೆ! ಇತ್ತ ಕೇರಳದ ಬೀದಿಗಳು ಮತ್ತು ಮೈದಾನಗಳಲ್ಲಿ ಫಿಫಾ ವಿಶ್ವಕಪ್ ತಾರೆಯರ ಕಟೌಟ್‌ಗಳು ರಾರಾಜಿಸುತ್ತಿವೆ.


ಕೇರಳದಲ್ಲಿ ಮೆಸ್ಸಿ ಕಟೌಟ್


ಫುಟ್ಬಾಲ್ ತಾರೆಯರ ಆರಾಧನೆಗೆ ಮುಸ್ಲಿಂ ಸಂಘಟನೆ ವಿರೋಧ


ಇನ್ನು ಫುಟ್ಬಾಲ್ ತಾರೆಯರನ್ನು ಆರಾಧಿಸುವುದಕ್ಕೆ ಕೇರಳದ ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಫುಟ್ಬಾಲ್ ತಾರೆಯರ ಆರಾಧನೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಅಲ್ಲದೇ ಇದು ಆರಾಧನೆಯಲ್ಲ, ಹುಚ್ಚು ಅಂತ ಮುಸ್ಲಿಂ ಫುಟ್ಬಾಲ್ ಪ್ರೇಮಿಗಳನ್ನು ಟೀಕಿಸಿದೆ.


ಫುಟ್ಬಾಲ್ ತಾರೆಯರ ಕಟೌಟ್


ಇದನ್ನೂ ಓದಿ: FIFA World Cup 2022: ಮೊನ್ನೆ ದೇಶಕ್ಕೇ ರಜೆ, ಈಗ ಸೌದಿ ರಾಜನಿಂದ 11 ಕೋಟಿ ಬೆಲೆಯ ಕಾರ್‌ ಗಿಫ್ಟ್! ಗೆದ್ದಿರೋದು ಒಂದೇ ಮ್ಯಾಚ್ ಅಂತ ಕಾಲೆಳೆದ ನೆಟ್ಟಿಗರು


ಮುಸ್ಲಿಂ ಧರ್ಮಗುರುಗಳ ಸಂಘಟನೆಯಿಂದ ಆಕ್ಷೇಪ


ರಾಜ್ಯದ ಮಸೀದಿಗಳಾದ್ಯಂತ ಶುಕ್ರವಾರ ಪ್ರವಚನ ನೀಡುವ ಧರ್ಮಗುರುಗಳ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತಿಲ್ ಖತೀಬ್ ಸಮಿತಿಯು ಇಂಥದ್ದೊಂದು ಆಕ್ಷೇಪ ವ್ಯಕ್ತಪಡಿಸಿದೆ. ತನ್ನ ಸದಸ್ಯರು, ಖತೀಬ್‌ಗಳಿಗೆ ಕ್ರೀಡೆಯ ಮೇಲಿನ ವ್ಯಾಮೋಹದಿಂದ ನಿಷ್ಠಾವಂತರೊಂದಿಗೆ ಮಾತನಾಡಲು ಮತ್ತು ಹಣವನ್ನು ಪೋಲು ಮಾಡುವುದರ ವಿರುದ್ಧ ಮನವೊಲಿಸಲು ಕೇಳಿಕೊಂಡಿದೆ.


ಕೇರಳದಲ್ಲಿ ರಾರಾಜಿಸುತ್ತಿರುವ ಕಟೌಟ್


ಪ್ರಮುಖ ಸಂಘಟನೆಯಾದ ಜಮ್-ಇಯ್ಯಲ್ತುಲ್ ಉಲೇಮಾ


ಈ ಸಮಿತಿಯು ಸಮಸ್ತ ಕೇರಳ ಜಮ್-ಇಯ್ಯಲ್ತುಲ್ ಉಲೇಮಾ ಅಥವಾ ಆಲ್ ಕೇರಳ ಉಲೇಮಾ ಸಂಘಟನೆಯ ಭಾಗವಾಗಿದೆ. ಇದು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಿ ಗುಂಪು. ಇದು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನೊಂದಿಗೆ ನಿಕಟ ಸಂಬಂಧ ಹೊಂದಿದೆ.


ಈ ರೀತಿ ಕಟೌಟ್ ಹಾಕದಂತೆ ಮುಸ್ಲಿಂ ಸಂಘಟನೆ ಸೂಚನೆ


ಯುವಕರು ಹಣ ಹಾಳು ಮಾಡುತ್ತಾರೆ”


ಶುಕ್ರವಾರದ ಪ್ರವಚನದಲ್ಲಿ ಸುಮಾರು 6,000 ಖತೀಬ್‌ಗಳಿಗೆ ನಿರ್ದೇಶನ ನೀಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಸರ್ ಫೈಜಿ ಕೂಡತೈ, “ಹಿಂದೆಂದೂ ಇಲ್ಲದ ರೀತಿಯಲ್ಲಿ ಫುಟ್‌ಬಾಲ್ ಹುಚ್ಚು ಕೇರಳವನ್ನು ಆವರಿಸಿದೆ. ನಾವು ಫುಟ್‌ಬಾಲ್‌ಗೆ ವಿರುದ್ಧವಾಗಿಲ್ಲ. ಆದರೆ ಆಟದ ಮೇಲೆ ಪ್ರೀತಿಯನ್ನೂ ಹೊಂದಿಲ್ಲ. ಆದರೆ ಯುವಕರು ಆಟಗಾರರು ಮತ್ತು ತಂಡಗಳ ಕಟ್-ಔಟ್‌ಗಳನ್ನು ಸಂಗ್ರಹಿಸಲು ದೊಡ್ಡ ಮೊತ್ತದ ಹಣವನ್ನು ಹಾಳುಮಾಡುತ್ತಾರೆ, ಬದಲಿಗೆ ಅವರು ದತ್ತಿ ಕಾರ್ಯಗಳಿಗೆ ಬಳಸಿದಕೆ ಉತ್ತಮವಾಗಿರುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Dhoni: ಫಿಫಾ ಫುಟ್​ಬಾಲ್​ ವಿಶ್ವಕಪ್​ನಲ್ಲೂ ಧೋನಿಯದೇ ಹವಾ! ಇಲ್ಲಿದೆ ವೈರಲ್ ಫೋಟೋ


“ಫುಟ್ಬಾಲ್ ಮೇಲಿನ ಪ್ರೀತಿ ಆರೋಗ್ಯಕರವಲ್ಲ”


ನಮ್ಮ ಎಚ್ಚರಿಕೆಯು ಮಸೀದಿಗಳಿಗೆ ಬರುವ ನಿಷ್ಠಾವಂತರಿಗೆ ಮಾತ್ರ; ಸಾಮಾನ್ಯ ಜನರೊಂದಿಗೆ ಈ ಆದೇಶಕ್ಕೆ ಯಾವುದೇ ಸಂಬಂಧವಿಲ್ಲ. ಈ ರೀತಿಯ ಹೀರೋ ಆರಾಧನೆಯು ಇಸ್ಲಾಮಿಕ್ ಅಲ್ಲ ಮತ್ತು ಇದು ಮುಸ್ಲಿ ಧರ್ಮದಲ್ಲಿ ಇರುವ ಒಬ್ಬ ದೇವರ ಆರಾಧನೆ ತತ್ವಗಳಿಗೆ ವಿರುದ್ಧವಾಗಿದೆ. ಫುಟ್ಬಾಲ್ ಮೇಲಿನ ಪ್ರೀತಿ ಹುಚ್ಚುತನವಾಗುವುದು ಆರೋಗ್ಯಕರ ಪ್ರವೃತ್ತಿಯಲ್ಲ,’’ ಎಂದು ಅವರು ಹೇಳಿದ್ದಾರೆ.

Published by:Annappa Achari
First published: